ಸುನಂದಾ ಹತ್ಯೆ : ಕುರುಡು ಕಾಂಚಾಣದ ಕೈವಾಡ?

ಬೆಂಗಳೂರು, ಜ. 24: ಸುನಂದಾ ಪುಷ್ಕರ್ ಹಾಗೂ ಶಶಿ ತರೂರ್ ಅವರ ಆರ್ಥಿಕ ವ್ಯವಹಾರಗಳ ಕುರಿತು ಅರಿಯಲು ವಿಶೇಷ ತನಿಖಾ ದಳವು ಆರ್ಥಿಕ ಅಪರಾಧ ದಳದ ಸಹಾಯ ಪಡೆಯಲು ನಿರ್ಧರಿಸಿದೆ.

ಸುನಂದಾ ಹತ್ಯೆಗೆ ಆರ್ಥಿಕ ಅವ್ಯವಹಾರವೇ ಕಾರಣ ಎಂಬ ಅನುಮಾನ ಬಲವಾಗುತ್ತಿದೆ. ಆದ್ದರಿಂದ ಆರ್ಥಿಕ ವ್ಯವಹಾರದ ಆಳಕ್ಕಿಳಿದು ತನಿಖೆ ನಡೆಸಬೇಕಾಗಿದೆ ಎಂದು ತನಿಖಾ ದಳದ ಓರ್ವ ಅಧಿಕಾರಿ ಒನ್ಇಂಡಿಯಾಕ್ಕೆ ತಿಳಿಸಿದ್ದಾರೆ. [ಸಾಕ್ಷಿ ನಾಶ : ನಾಲ್ವರ ಮೇಲೆ ಶಂಕೆ]

sunanda

18 ಹೆಸರು ಯಾರು ಯಾರದ್ದು? : ಆರ್ಥಿಕ ವ್ಯವಹಾರವನ್ನು ಪರಿಶೀಲಿಸಿದಾಗ ಸುಮಾರು 18 ಹೆಸರುಗಳು ಕಂಡುಬಂದಿವೆ. ಆರ್ಥಿಕ ಅಪರಾಧಗಳ ದಳದ ಮೂಲಕ ಈ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ. [ಬಟ್ಟೆ, ಶೂ ಹೊರಸಾಗಿಸಿದ್ದು ಯಾರು?]

ಕೊಚ್ಚಿ ಟಸ್ಕರ್ಸ್ ಅವರಿಂದಲೂ ಫೈಲ್ಸ್ ತರಿಸಿಕೊಳ್ಳುವ ಯೋಚನೆಯಿದೆ. ಅಗತ್ಯಬಿದ್ದರೆ ಕೊಚ್ಚಿ ಟಸ್ಕರ್ಸ್ ಆರ್ಥಿಕ ವ್ಯವಹಾರವನ್ನೂ ಪರಿಶೀಲನೆಗೊಳಪಡಿಸುತ್ತೇವೆ ಎಂದು ನವದೆಹಲಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. [ತರಾರ್ ಜೊತೆ ತರೂರ್ ದುಬೈನಲ್ಲಿ ರಾತ್ರಿ ಕಳೆದರೇ?]

ಪತ್ರಕರ್ತೆ ನಳಿನಿ ಸಿಂಗ್ ಅವರನ್ನು ಪೊಲೀಸ್ ತನಿಖಾ ದಳವು ತನಿಖೆಗೊಳಪಡಿಸಿದಾಗ ಆಕೆ ಶಶಿ ತರೂರ್ ವಿರುದ್ಧ ಕೋಪ ವ್ಯಕ್ತಪಡಿಸಿದ್ದರು. ಸಾವನ್ನಪ್ಪುವ ಒಂದು ದಿನ ಮೊದಲು ಪತ್ರಕರ್ತೆ ನಳಿನಿ ಸಿಂಗ್ ಜೊತೆ ಐಪಿಎಲ್ ವಿವಾದ ಕುರಿತು ಸುನಂದಾ ಮಾತನಾಡಿದ್ದರು. ಈ ಸಮಯದಲ್ಲಿ ತಾನು ಮೆಹರ್ ತರಾರ್ ವಿಷಯದಲ್ಲಿ ಅಸಮಾಧಾನ ಹೊಂದಿರುವುದಾಗಿಯೂ ತಿಳಿಸಿದ್ದರು ಎಂದು ನಳಿನಿ ಸಿಂಗ್ ಹೇಳಿದ್ದಾರೆ. [ತರೂರ್ ಪತ್ರದಿಂದ ಸುನಂದಾ ಪ್ರಕರಣಕ್ಕೆ ಟ್ವಿಸ್ಟ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+