'ಇಂಡಿಯಾಸ್ ಮೋಸ್ಟ್ ವಾಂಟೆಡ್' ಶೋ ನಿರೂಪಕನಿಗೆ ಜೀವಾವಧಿ ಶಿಕ್ಷೆ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 20: ತನ್ನ ಪತ್ನಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ 'ಇಂಡಿಯಾಸ್ ಮೋಸ್ಟ್ ವಾಂಟೆಡ್' ಎಂಬ ಕಾರ್ಯಕ್ರಮದ ನಿರ್ಮಾಪಕರಾಗಿ, ಬಹುಬೇಡಿಕೆಯ ಆಂಕರ್ ಆಗಿದ್ದ ಸುಹೇಬ್ ಇಲಿಯಾಸಿ ಅವರಿಗೆ ದೆಹಲಿ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿ ಬುಧವಾರ ಆದೇಶ ಹೊರಡಿಸಿದೆ

ಇಂಡಿಯಾಸ್ ಮೋಸ್ಟ್ ವಾಂಟೆಡ್ ರೂವಾರಿ ಈಗ ಜೈಲುಪಾಲು

2000ರಲ್ಲಿ ತನ್ನ ಪತ್ನಿ ಅಂಜು ಇಲಿಯಾಸಿ ಅವರನ್ನು ಸುಹೇಬ್ ಇಲಿಯಾಸಿ ಕೊಲೆ ಮಾಡಿದ್ದ. ಇದನ್ನು 2014ರಲ್ಲಿ ದೆಹಲಿ ಕೋರ್ಟ್ ಈ ಬಗ್ಗೆ ತನಿಖೆಗೆ ಆದೇಶಿಸಿದ್ದ ವೇಳೆ ಅಂಜು ಇಲಿಯಾಸಿ ಅವರನ್ನು ಸುಹೇಬ್ ಇಲಿಯಾಸಿ ಹತ್ಯೆ ಮಾಡಿರುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು (ಗುರುವಾರ) ಸುಹೇಬ್ ಇಲಿಯಾಸಿಗೆ ದೆಹಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶಿಸಿದೆ.

Suhaib Ilyasi Gets Life Imprisonment For Murdering His Wife

2000ರ ಜನವರಿ 11ರಂದು ಸುಹೇಬ್ ಇಲಿಯಾಸಿ ಅವರ ಪತ್ನಿ ಅಂಜು ಇಲಿಯಾಸಿ ಮಾರಣಾಂತಿಕ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪರಿಗಣಿಸಲಾಗಿತ್ತು.

ಆದರೆ, ಅಂಜು ಅವರ ತಾಯಿ ರುಕ್ಮಾ ಸಿಂಗ್ ಅವರು ಸುಹೇಬ್ ವಿರುದ್ಧ ಆರೋಪ ಮಾಡಿದ್ದರು. ವರದಕ್ಷಿಣೆಗಾಗಿ ಪೀಡಿಸಿದ್ದರಿಂದ ಅಂಜು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಾಗಾಗಿ ಅಳಿಯನ ವಿರುದ್ಧ ತನಿಖೆ ನಡೆಸಬೇಕೆಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.

ಮರಣೋತ್ತರ ಪರೀಕ್ಷೆಯಲ್ಲಿ ಕೂಡ ಅಂಜು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದರು. ಈ ಹಿನ್ನೆಯಲ್ಲಿ 2014ರಲ್ಲಿ ದೆಹಲಿ ಕೋರ್ಟ್ ಈ ಬಗ್ಗೆ ತನಿಖೆಗೆ ಆದೇಶಿಸಿತ್ತು. ಇಲಿಯಾಸಿ ಪತ್ನಿಯನ್ನು ಕೊಲೆ ಮಾಡಿರೋದು ಸಾಬೀತಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former television producer Suhaib Ilyasi was on Wednesday sentenced to life imprisonment by a Delhi court for murdering his wife. Ilyasi, best remembered as the host of popular television crime series ‘India’s Most Wanted’, was convicted on December 16 in connection with the death of his wife. Ilyasi’s wife was murdered 17 years ago.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ