ಆರ್‌ಬಿಐ ಗವರ್ನರ್ ದಾಸ್ ಆಯ್ಕೆಗೆ ಸುಬ್ರಮಣಿಯನ್ ಸ್ವಾಮಿ ವಿರೋಧ, ಮೋದಿಗೆ ಪತ್ರ

ನವದೆಹಲಿ, ಡಿಸೆಂಬರ್ 12: ಭಾರತೀಯ ರಿಸರ್ವ್ ಬ್ಯಾಂಕ್ ನ ನೂತನ ಗವರ್ನರ್ ಆಗಿ ಆಯ್ಕೆಯಾಗಿರುವ ಶಕ್ತಿಕಾಂತ ದಾಸ್ ಅವರ ನೇಮಕವನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ವಿರೋಧಿಸಿದ್ದಾರೆ.

ಭ್ರಷ್ಟಾಚಾರ ಪ್ರಕರಣಗಳಲ್ಲಿ ಇವರ ವಿರುದ್ಧ ಆರೋಪಗಳಿದ್ದು ಮಾಜಿ ಸಚಿವ ಪಿ ಚಿದಂಬರಂ ಪರವಾಗಿ ಕೆಲಸ ಮಾಡಿದ್ದಾರೆ.ಅಂತಹ ಅಧಿಕಾರಿಯನ್ನು ಆರ್‌ಬಿಐ ಗವರ್ನರ್ ಹುದ್ದೆಗೆ ಪರಿಗಣಿಸಬಾರದು ಎಂದು ಸುಬ್ರಮಣಿಯನ್ ಸ್ವಾಮಿ ಒತ್ತಾಯಿಸಿದ್ದಾರೆ. ಇಷ್ಟೇ ಅಲ್ಲದೆ ಸರ್ಕಾರದ ನಿರ್ಧಾರ ಸರಿ ಇಲ್ಲ ಎಂದು ಪ್ರಧಾನಿ ಮೋದಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಶಕ್ತಿಕಾಂತ್ ದಾಸ್ ಅವರು ಆರ್‌ಬಿಐ ಗವರ್ನರ್ ಆಗಿ ನೇಮಕವಾಗಿರುವುದನ್ನು ಮೊದಲು ಪಿ ಚಿದಂಬರಂ ವಿರೋಧಿಸಿದ್ದರು, ಬಳಿಕ ಸುಬ್ರಮಣಿಯನ್ ಸ್ವಾಮಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Subramanian swamy disagree with RBI Governor Appointment

ನೋಟು ಅಮಾನ್ಯೀಕರಣ ವಿರೋಧಿಸುತ್ತಿದ್ದಂತಹ ಕೆಲವರು ಹಾಗೆಯೇ ನೋಟು ಅಪಮನಗದೀಕರಣವನ್ನು ಸರಿಯಾಗಿ ಜಾರಿ ಮಾಡಿಲ್ಲ ಎನ್ನುವ ಕಾರಣಕ್ಕೂ ಹಲವರಿಂದ ವಿರೋಧ ವ್ಯಕ್ತವಾಗುತ್ತಿದೆ.

ಸಮಾಜಿಕ ಜಾಲತಾಣಗಳಲ್ಲೂ ಕೂಡ ಶಕ್ತಿಕಾಂತ್ ದಾಸ್ ಅವರ ವಿರುದ್ಧ ವಿರೋಧ ವ್ಯಕ್ತವಾಗಿತ್ತು ಯಾಕೆಂದರೆ ಅವರಿಗೆ ಶೈಕ್ಷಣಿಕ ಹಿನ್ನೆಲೆಯಿಲ್ಲ, ಆರ್ಥಿಕತೆಗೆ ಸಂಬಂಧಪಟ್ಟ ಅನುಭವವಿಲ್ಲ ಕೇವಲ ಆಡಳಿತಾತ್ಮಕ ಹುದ್ದೆ ಎನ್ನಬಹುದೇ ಹೊರತು ಆರ್‌ಬಿಐ ಗೆ ಬೇಕಾದಂತಹ ಯಾವುದೇ ಅರ್ಹತೆಯಿಲ್ಲ ಎನ್ನುವ ಮಾತುಗಳು ಕೇಳಿಬಂದಿದ್ದವು. 2015-17ರವರೆಗೂ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಶಕ್ತಿಕಾಂತ್ ದಾಸ್ ಆರ್‌ಬಿಐನ 25ನೇ ಗವರ್ನರ್ ಆಗಿ ಸಧಿಕಾರ ವಹಿಸಿಕೊಳ್ಳಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+