ರಾಹುಲ್ ಅಪ್ಪುಗೆಯನ್ನು ಮೋದಿ ಹತ್ಯೆ ಸಂಚು ಎಂದ ಸುಬ್ರಹ್ಮಣಿಯನ್ ಸ್ವಾಮಿ

ನವದೆಹಲಿ, ಜುಲೈ 21: ರಾಹುಲ್ ಗಾಂಧಿ ಅವರ ಪ್ರೀತಿಯ ಅಪ್ಪುಗೆ ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಅವರಿಗೆ ಮೋದಿಯನ್ನು ಕೊಲ್ಲುವ ಷಡ್ಯಂತ್ರದಂತೆ ಕಂಡಿದೆ!

ರಾಹುಲ್ ಗಾಂಧಿ ಅವರು ನಿನ್ನೆ ಸಂಸತ್‌ನಲ್ಲಿ ಪ್ರಧಾನಿ ಮೋದಿ ಅವರನ್ನು ಅಪ್ಪಿಕೊಂಡ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಅವರು ರಾಹುಲ್ ಗಾಂಧಿ ಮೋದಿಯನ್ನು ಕೊಲ್ಲಲು ಅಪ್ಪಿಕೊಂಡಿರುವ ಸಾಧ್ಯತೆ ಇದೆ ಎಂದಿದ್ದಾರೆ.

'ಮೋದಿ ಅವರು ಆ ದಡ್ಡನು (ರಾಹುಲ್ ಗಾಂಧಿ) ತಮ್ಮನ್ನು ಅಪ್ಪಿಕೊಳ್ಳಲು ಬಿಡಬಾರದಿತ್ತು, ಎಂದಿರುವ ಅವರು, ಉತ್ತರ ಕೊರಿಯಾ, ರಷ್ಯಾದಲ್ಲಿ ಹೀಗೆ ಅಪ್ಪುಗೆಯ ತಂತ್ರ ಬಳಸಿ ವಿಷದ ಸೂಜಿಗಳನ್ನು ಚುಚ್ಚು ತಂತ್ರ ಅನುಸರಿಸುತ್ತಾರೆ' ಎಂದಿದ್ದಾರೆ.

ಮೋದಿ ಈ ಕೂಡಲೇ ಆಸ್ಪತ್ರೆಗೆ ತೆರಳಿ ಚೆಕ್ ಮಾಡಿಸಿಕೊಳ್ಳಬೇಕು ಎಂದಿರುವ ಅವರು, ಶಶಿತರೂರ್ ಪತ್ನಿ ಸುನಂದಾ ಪುಷ್ಕರ್ ಅವರ ಕೈಮೇಲೆ ಇದ್ದ ಸೂಕ್ಷ್ಮ ರಂಧ್ರವೇನಾದರೂ ತಮ್ಮ ದೇಹದಲ್ಲಿ ಮೂಡಿದೆಯಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಎನ್ನುವ ಮೂಲಕ, ರಾಹುಲ್ ಗಾಂಧಿ ಮೋದಿಗೆ ವಿಷದ ಸೂಜಿ ಚುಚ್ಚಿರುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

Subrahmaniyan Swamy sees conspiracy in Rahul Gandhis hug

ರಾಹುಲ್ ಗಾಂಧಿ ಅವರು ನಿನ್ನೆಯೇ ಸಂಸತ್‌ನಲ್ಲಿ ಹೇಳಿದ್ದರು, ಎದುರಾಳಿಗಳು ತಮ್ಮ ಬಗ್ಗೆ ಏನೇ ಹೇಳಿದರು ತಾವು ಪ್ರೀತಿಯನ್ನು ಮಾತ್ರವೇ ನೀಡುವುದಾಗಿ ಅಂತೆಯೇ ಇಂದು ಸ್ವಾಮಿ ಅವರು ರಾಹುಲ್ ರನ್ನು ದಡ್ಡ ಮತ್ತು ಕೊಲೆಯ ಸಂಚುಕಾರ ಎಂದು ಕರೆದಿದ್ದಾರೆ. ಆದರೆ ಇದಕ್ಕೆ ರಾಹುಲ್ ನಿನ್ನೆಯೇ ಉತ್ತರ ನೀಡಿದ್ದಾರೆ.

ನಿನ್ನೆ ಅವಿಶ್ವಾಸ ನಿರ್ಣಯ ಸಂಬಂಧ ಚರ್ಚೆಯ ವೇಳೆ, ಹಿಂದೂ ಧರ್ಮ ಹಾಗೂ ಕಾಂಗ್ರೆಸ್ ಧರ್ಮದ ಬಗ್ಗೆ ಮಾತನಾಡುತ್ತಾ ನಮ್ಮದು ಕೇವಲ ಪ್ರೀತಿ ಪಸರಿಸುವ ರಾಜಕಾರಣ ಎಂದು ಹೇಳಿ ಸಂಸತ್‌ನಲ್ಲೇ ರಾಹುಲ್ ಅವರು ಮೋದಿಯನ್ನು ಆಲಿಂಗಿಸಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+