ಶ್ರೀದೇವಿಯದು ಸಹಜ ಸಾವಲ್ಲ, ಕೊಲೆ: ಸುಬ್ರಮಣಿಯನ್ ಸ್ವಾಮಿ
Recommended Video

ನವದೆಹಲಿ, ಫೆಬ್ರವರಿ 27: ಹಿರಿಯ ನಟಿ ಶ್ರೀದೇವಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಅಷ್ಟೇ ಅಲ್ಲ, ಶ್ರೀದೇವಿ ಸಾವಿನ ಬಗ್ಗೆ ಮಾತನಾಡುತ್ತ, ಭೂಗತ ದೊರೆ ದಾವೂದ್ ಇಬ್ರಾಹಿಂ ಅವರನ್ನೂ ಈ ವಿಷಯದಲ್ಲಿ ಎಳೆದು ತಂದು, ವಿವಾದ ಭುಗಿಲೇಳುವಂತೆ ಮಾಡಿದ್ದಾರೆ ಸುಬ್ರಮಣಿಯನ್ ಸ್ವಾಮಿ!

ಶ್ರೀದೇವಿ ಸಾವಿನ ಕುರಿತು ಸಮಗ್ರ ತನಿಖೆ ನಡೆಯಬೇಕು. ಇದರೊಂದಿಗೆ ಸಿನೆಮಾ ನಟಿಯರು ಮತ್ತು ದಾವೂದ್ ಇಬ್ರಾಹಿಂ ನಡುವಿನ ಅನೈತಿಕ ಸಂಬಂಧಗಳ ಕುರಿತೂ ತನಿಖೆ ನಡೆಯಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
'ಮಾಧ್ಯಮಗಳು ಹೇಳುತ್ತಿರುವುದೆಲ್ಲ ಸತ್ಯವಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಹೇಳಿಕೆಗಳು ಸ್ಥಿರವಾಗಿಯೂ ಇಲ್ಲ. ಆದರೆ ಯಾವಾಗಲೂ ನಶೆ ಏರುವಂಥ ಮದ್ಯ ಸೇವಿಸದ ಶ್ರೀದೇವಿ ಅವರ ದೇಹದಲ್ಲಿ ಮದ್ಯ ಸೇರಿದ್ದು ಹೇಗೆ? ಯಾರಾದರೂ ಒತ್ತಾಯ ಪೂರ್ವಕವಾಗಿ ಆಕೆಗೆ ಮದ್ಯ ಕುಡಿಸಿದರೆ? ಸಿಸಿಟಿವಿಗೆ ಏನಾಗಿತ್ತು? ಅದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ' ಎಂದು ಅವರು ಪ್ರಶ್ನಿಸಿದ್ದಾರೆ.
ಮುಂಬೈ ಹೊಟೇಲ್ ವೊಂದರಲ್ಲಿ ಫೆ.24ರಂದು ಶ್ರೀದೇವಿಯವರು ಹೃದಯಾಘಾತದಿಂದ ಅಸುನೀಗಿದರು ಎಂದು ಮೊದಲು ವರದಿಯಾಗಿತ್ತು. ಆದರೆ ಈಗ ಅವರು ಬಾತ್ ಟಬ್ ನಲ್ಲಿ ಮುಳುಗಿ ಸತ್ತಿದ್ದು ಎಂದು ವೈದ್ಯಕೀಯ ವರದಿಗಳು ತಿಳಿಸಿವೆ. ಬಾಲಿವುಡ್ ಅನ್ನು ಸುಮಾರು ಎರಡೂವರೆ ದಶಕಗಳ ಕಾಲ ಆಳಿದ ಶ್ರೀದೇವಿ ಅವರ ಸಾವು ಇದೀಗ ಮತ್ತಷ್ಟು ನಿಗೂಢತೆ ಸೃಷ್ಟಿಸಿದೆ.












Click it and Unblock the Notifications