ಮಗಳ ಮದುವೆಗೆ ಮೋದಿಯನ್ನು ಆಹ್ವಾನಿಸಿದ ಶ್ರೀರಾಮುಲು
Recommended Video
Sri Ramulu Invites Modi and Shah to his daughters wedding | Sri ramulu | AMIT SHAH
ನವದೆಹಲಿ, ಫೆಬ್ರವರಿ 10: ಆರೋಗ್ಯ ಸಚಿವ ಶ್ರೀರಾಮುಲು ಅವರು ಮೋದಿ ಅವರನ್ನು ಬೇಟಿ ಮಾಡಿ ತಮ್ಮ ಹಿರಿಯ ಮಗಳ ಮದುವೆಗೆ ಆಹ್ವಾನ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ದಿಲ್ಲಿ ಪ್ರವಾಸದಲ್ಲಿ ಇರುವ ರಾಮುಲು ಅವರು ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಲಗ್ನ ಪತ್ರಿಕೆ ನೀಡಿ ಮದುವೆಗೆ ಆಹ್ವಾನ ನೀಡಿದ್ದರು. ಇಂದು ಪ್ರಧಾನಿ ಮೋದಿ ಅವರನ್ನು ಬೇಟಿ ಮಾಡಿ ಮದುವೆಗೆ ಆಹ್ವಾನಿಸಿದ್ದಾರೆ.
ರಾಮುಲು ಹಿರಿಯ ಪುತ್ರಿ ರಕ್ಷಿತಾ ಹಾಗೂ ಲಲಿತ್ ಕುಮಾರ್ ವಿವಾಹ ಕಾರ್ಯಕ್ರಮ ಮುಂದಿನ ತಿಂಗಳು ಮಾರ್ಚ್ 4 ಮತ್ತು 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.

ರಾಜ್ಯದ ರಾಜಕಾರಣಿಗಳ ಜೊತೆಗೆ ಕೇಂದ್ರದ ಬಿಜೆಪಿ ಸಚಿವರನ್ನೂ ಸಹ ರಾಮುಲು ಅವರು ಮದುವೆಗೆ ಆಹ್ವಾನಿಸಿದ್ದಾರೆ.
ಹಿರಿಯ ಪುತ್ರಿ ರಕ್ಷಿತಾ ಹಾಗೂ ಹೈದ್ರಾಬಾದ್ ಮೂಲದ ಉದ್ಯಮಿ ಮಗ ಲಲಿತ್ ಕುಮಾರ್ ವಿವಾಹ ಕಾರ್ಯಕ್ರಮ ನಡೆಯಲಿದೆ.












Click it and Unblock the Notifications