ಶೀಘ್ರದಲ್ಲೇ ದೇಶದಲ್ಲಿ ಹೊಸ ರು.1000 ನೋಟು ಸಾಧ್ಯತೆ

Posted By:
Subscribe to Oneindia Kannada

ನವದೆಹಲಿ, ಜನವರಿ 27: ರಾಷ್ಟ್ರದಲ್ಲಿ ರು.2000 ಹೊಸ ಮುಖಬೆಲೆ ನೋಟಿನಿಂದಾಗಿ ಆಗಿರುವ ಚಿಲ್ಲರೆ ಸಮಸ್ಯೆಯನ್ನು ನೀಗಿಸಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಸಿದ್ಧತೆ ನಡೆಸಿದ್ದು, ಹೊಸ ವಿನ್ಯಾಸದ ರು. 1000 ಮುಖಬೆಲೆಯ ನೋಟುಗಳನ್ನು ಮುದ್ರಿಸಲು ಮುಂದಾಗಿದೆ.

ಇದರ ವಿನ್ಯಾಸದಲ್ಲಿ ಹಿಂದಿದ್ದ ಸಾವಿರ ಮುಖಬೆಲೆಯ ನೋಟುಗಳಿಗಿಂದ ಗಾತ್ರದಲ್ಲಿ ಚಿಕ್ಕದಾಗಿದ್ದು, ಅಂಧರಿಗೆ ಬ್ರೈಲ್ ಸ್ನೇಹಿ, ಬಣ್ಣದಲ್ಲಿಯೂ ವ್ಯತ್ಯಾಸ ಇರಲಿದೆ ಅಲ್ಲದೆ ನಕಲು ಮಾಡಲದಂತೆ ಹೆಚ್ಚು ಜಾಗ್ರತಾ ವಿನ್ಯಾಸ ಸೇರಲಿವೆ ಎಂದು ಮೂಲಗಳು ತಿಳಿಸಿವೆ.[ಫೆಬ್ರವರಿ ಕೊನೆಗೆ ಕೈ ತುಂಬ ಹೊಸ ನೋಟು!]

Soon the possibility of new currency notes of Rs 1000 in India

ಈಗಾಗಲೇ ರು.1000 ಮುಖಬೆಲೆಯ ನೋಟುಗಳು ಬರಲಿದೆ ಎಂಬ ಮಾಹಿತಿ ಜನಮಾನಸದಲ್ಲಿ ಹರಿದಾಡುತ್ತಿದೆ. ಕಳೆದ ನವೆಂಬರ್ ನಲ್ಲಿ ರು.1000,ರು 500 ನೋಟುಗಳನ್ನು ಸರ್ಕಾರ ರದ್ದು ಮಾಡಿತ್ತು. ಹಾಗೂ ಹೊಸದಾಗಿ ರು.500, ರು 2000 ಮುಖಬೆಲೆಯ ನೋಟುಗಳನ್ನು ಜಾರಿಗೆ ತಂದಿತ್ತು. ಹೀಗಾಗಿ ಅಪನಗದೀಕರಣದಿಂದ ದೇಶಾದ್ಯಂತ ಹಣದ ಹರಿವು ಮತ್ತು ಚಿಲ್ಲರೆ ಸಮಸ್ಯೆ ಎದುರಾಗಿತ್ತು. ಜನರು ಹಣಕ್ಕಾಗಿ ಪರಿತಪಿಸುವಂತಾಗಿತ್ತು. ಸರತಿ ಸಾಲಿನಲ್ಲಿ ಹಣಕ್ಕಾಗಿ ನಿಂತು ವ್ಯಸನಪಟ್ಟಿದ್ದರು.

ಈಗ ಚಿಲ್ಲರೆ ಸಮಸ್ಯೆ ಮತ್ತು ರು. 2000 ಮುಖಬೆಲೆಯ ನೋಟಿನಿಂದ ಕಪ್ಪುಹಣ ಸಂಗ್ರಹ ಸುಲಭ ಎಂಬ ಕಾರಣ, ಜೊತೆಗೆ ಕ್ಯಾಶ್ ಲೆಸ್ ರಾಷ್ಟ್ರವನ್ನಾಗಿಸುವ ಚಿಂತನೆಯೊಂದಿಗೆ ರು.1000 ಮುಖಬೆಲೆಯ ನೋಟುಗಳನ್ನು ಜಾರಿಗೆ ತರಲು ಆರ್ ಬಿಐ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಹೊಸದಾಗಿ ಬಿಡುಗಡೆಗೊಂಡಿದ್ದ ರು.2000 ನೋಟುಗಳನ್ನು ರದ್ಧತಿ ಮಾಡುವ ಚಿಂತನೆ ನಡೆಯುತ್ತಿದೆ ಎಂಬ ಗುಮಾನಿಯೂ ಇದೆ. ರು.1000 ನೋಟುಗಳನ್ನು ಬಿಡುಗಡೆಗೊಳಿಸಿ, ರು.2000 ನೋಟುಗಳನ್ನು ರದ್ಧತಿ ಮಾಡಬಹುದು ಎಂಬ ಗಾಳಿಮಾತು ಸಾರ್ವಜನಿಕವಾಗಿ ಹರಿದಾಡುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Soon the possibility of new currency notes of Rs 1000 in India. Retailers should solve the problem of the Reserve Bank of India (RBI) Plans to print a new denomination notes.
Please Wait while comments are loading...