ಕೆಲವೊಮ್ಮೆ ಜನರು ನಿಮಗೆ ಎರಡನೇ ಅವಕಾಶ ನೀಡುತ್ತಾರೆ: ಸೋನು ಸೂದ್

ನವದೆಹಲಿ, ನವೆಂಬರ್ 12: ಕೆಲವು ಸಂದರ್ಭಗಳಲ್ಲಿ ಜನತೆ ನಿಮಗೆ ಎರಡನೇ ಅವಕಾಶವನ್ನು ನೀಡುತ್ತದೆ ಎಂದು ನಟ ಸೋನು ಸೂದ್ ಹೇಳಿದ್ದಾರೆ.

ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ತೆರಳಲು ಸೋನುಸೂದ್ ನೆರವಾಗಿದ್ದರು.

ಸರ್ಕಾರವು ಜನತೆಗೆ ಏನು ಮಾಡಿದೆ ಎಂಬುದನ್ನು ಕೂಡ ಬಿಹಾರದ ಜನತೆ ನೋಡಿದ್ದಾರೆ. ಜನರು ಸರ್ಕಾರದಲ್ಲಿ ಉತ್ತಮವಾದ ವಿಷಯಗಳನ್ನು ಕಂಡಿದ್ದಾರೆ.ತಮ್ಮ ಜೀವನವು ಉತ್ತಮವಾಗಬೇಕೆಂದು ಜನರು ಎರಡು, ಮೂರು ಅವಕಾಶಗಳನ್ನು ಕೊಡುತ್ತಾರೆ. ಭಾರತದಲ್ಲಿ ಜನರು ಸಾಕಷ್ಟ ಭರವಸೆಯನ್ನು ಹೊಂದಿದ್ದಾರೆ ಎಂದರು.

Sonu Sood Says Sometimes People Give You A Second Chance

ಬಿಹಾರದಲ್ಲಿ 18 ಗಂಟೆಗಿಂತಲೂ ಹೆಚ್ಚು ಕಾಲ ಮತ ಎಣಿಕೆ ನಡೆದಿತ್ತು, ಬಳಿಕ ಬಿಜೆಪಿ 74 ಸ್ಥಾನಗಳನ್ನು ಗೆದ್ದಿದ್ದರೆ, ಜೆಡಿಯು 43 ಸ್ಥಾನಗಳನ್ನು ಗೆದ್ದಿದೆ. 243ರಲ್ಲಿ 125 ಸ್ಥಾನಗಳೊಂದಿಗೆ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಮರಳಿದೆ.

ಮುಂಬೈ ಮತ್ತು ಮಹಾರಾಷ್ಟ್ರ ಇತರೆ ಭಾಗಗಳಿಂದ ಬಸ್ಸುಗಳನ್ನು ಬಾಡಿಗೆ ಪಡೆಯುವ ಮೂಲಕ ಹೆಚ್ಚಿನ ಸಂಖ್ಯೆಯ ವಲಸಿಗರು ಅದರಲ್ಲೂ ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ಮರಳಲು ಸಹಾಯ ಮಾಡಿದ್ದರು.

ನಾನು ಬಿಹಾರದ ಸಾಕಷ್ಟು ಜನರೊಂದಿಗೆ ಸಂಪರ್ಕ ಹೊಂದಿದ್ದೇನೆ, ಅವರು ಕೆಟ್ಟ ಸ್ಥಿತಿಯಲ್ಲಿದ್ದಾರೆ, ಯಾರು ಗೆದ್ದಿದ್ದಾರೆ ಎನ್ನುವುದು ಮುಖ್ಯವಲ್ಲ, ಮುಂದಿನ ಐದು ವರ್ಷ ಬಿಹಾರದ ಅಭಿವೃದ್ಧಿ ಮಾಡಬೇಕು, ಈ ನಾಯಕರನ್ನು ಆಯ್ಕೆ ಮಾಡಿರುವುದಕ್ಕೆ ಬಿಹಾರದ ಜನತೆ ಹೆಮ್ಮೆ ಪಡುವಂತಾಗಬೇಕು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+