"ಸೋನಿಯಾ ಗಾಂಧಿ ಜೆಡಿಯುನಲ್ಲಿ ಒಡಕು ಮೂಡಿಸುತ್ತಿದ್ದಾರೆ "

ನವದೆಹಲಿ, ಆಗಸ್ಟ್ 11: 'ಸೋನಿಯಾ ಗಾಂಧಿ ಜೆಡಿಯು ಪಕ್ಷದಲ್ಲಿ ಒಡಕು ಮೂಡಿಸುತ್ತಿದ್ದಾರೆ' ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಹೇಳಿದ್ದಾರೆ.

ಜೆಡಿಯು ಮುಖ್ಯಸ್ಥ ಶರದ್ ಯಾದವ್ ಅವರನ್ನು ಆಗಸ್ಟ್ 11 ರಂದು ನಡೆಯುವ ಪ್ರತಿಪಕ್ಷಗಳ ಸಭೆಗೆ ಆಮಂತ್ರಿಸುವ ಮೂಲಕ ಅವರು ಜೆಡಿಯು ನಾಯಕರ ನಡುವೆ ಬಿರುಕು ಮೂಡಿಸುತ್ತಿದ್ದಾರೆಂದು ತ್ಯಾಗಿ ದೂರಿದ್ದಾರೆ.

Sonia Gandhi deviding JDU: K C Tyagi

ನಾವು ಈಗಾಗಲೇ ಯುಪಿಎಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡಿದ್ದೇವೆ. ಆದರೂ ಶರದ್ ಯಾದವ್ ಅವರನ್ನು ಸಭೆಗೆ ಆಮಂತ್ರಿಸಿರುವ ಹಿಂದೆ ಪಕ್ಷವನ್ನು ಒಡೆಯುವ ಮತ್ತು ನಮ್ಮ ನಮ್ಮ ನಡುವಲ್ಲೇ ಬಿರುಕು ಮೂಡಿಸುವ ಉದ್ದೇಶವಲ್ಲದೆ ಇನ್ನೇನಿರುವುದಕ್ಕೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಯುಪಿಎಯೊಂದಿಗಿನ ಮಹಾಮೈತ್ರಿಯನ್ನು ಮುರಿದುಕೊಂಡ ಜೆಡಿಯು, ಇದೀಗ ಎನ್ ಡಿಎ ಯೊಂದಿಗೆ ಮೈತ್ರಿ ಸಾಧಿಸಿ ಬಿಹಾರದಲ್ಲಿ ಸರ್ಕಾರ ರಚನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+