ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಕುರಿತು ಮೋದಿಗೆ ಪ್ರಶ್ನೆಗಳ ಸುರಿಮಳೆಗೈದ ಸೋನಿಯಾ ಗಾಂಧಿ

|
Google Oneindia Kannada News

ದೆಹಲಿ, ಜೂನ್ 17: ಲಡಾಖ್‌ನ ಗಾಲ್ವಿನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದ್ದು, ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ.

Recommended Video

History of India China border dispute | Oneindia Kannada

ಭಾರತದ ಗಡಿಯೊಳಗೆ ಪ್ರವೇಶಿಸಿರುವ ಚೀನಾ ನಮ್ಮ ಯೋಧರನ್ನು ಕೊಂದಿದೆ. ನಮ್ಮ ದೇಶದ ಜಾಗವನ್ನು ಆಕ್ರಮಿಸಿಕೊಂಡಿದೆ. ಈ ಕುರಿತು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಸತ್ಯ ಹೇಳಬೇಕಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ.

'ನಮ್ಮನ್ನು ಪ್ರಚೋದಿಸಿದರೆ ತಕ್ಕ ಉತ್ತರ ಕೊಡ್ತೇವೆ': ಚೀನಾಗೆ ಮೋದಿ ಖಡಕ್ ಎಚ್ಚರಿಕೆ'ನಮ್ಮನ್ನು ಪ್ರಚೋದಿಸಿದರೆ ತಕ್ಕ ಉತ್ತರ ಕೊಡ್ತೇವೆ': ಚೀನಾಗೆ ಮೋದಿ ಖಡಕ್ ಎಚ್ಚರಿಕೆ

ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿರುವ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರ ಚೀನಾ ವಿಚಾರದಲ್ಲಿ ವಾಸ್ತವ ತಿಳಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಭಾರತದ ಪ್ರದೇಶವನ್ನು ಚೀನಾ ಹೇಗೆ ಆಕ್ರಮಿಸಿಕೊಂಡಿದೆ? ನಮ್ಮ 20 ಜನ ಯೋಧರು ಹೇಗೆ ಮೃತರಾದರು ಎಂದು ರಾಷ್ಟ್ರ ಜನರ ಮುಂದೆ ಹೇಳಿ ಎಂದು ಆಗ್ರಹಿಸಿದ್ದಾರೆ. ನಮ್ಮ ಸೈನಿಕರ ಅಥವಾ ಸೈನ್ಯಾಧಿಕಾರಿಗಳು ಕಾಣೆಯಾಗಿದ್ದಾರಾ? ಈ ಘಟನೆಯಲ್ಲಿ ಎಷ್ಟು ಜನ ಯೋಧರು ಹಾಗೂ ಅಧಿಕಾರಿಗಳು ಗಾಯಗೊಂಡಿದ್ದಾರೆ? ಭಾರತದ ಯಾವ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ? ಈ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಎಂದು ಕೇಳಿದ್ದಾರೆ.

Sonia Gandhi Asked To Pm Should Tell The Truth That How Did China Occupy Our Land

ಜವಾನರು ಹುತಾತ್ಮರಾಗಿರುವುದಕ್ಕೆ ಸಂತಾಪ ವ್ಯಕ್ತಪಡಿಸಿರುವ ಸೋನಿಯಾ ಗಾಂಧಿ, ''ಇಂತಹ ಬಿಕ್ಕಟ್ಟಿನಲ್ಲಿ ನಮ್ಮ ಕಾಂಗ್ರೆಸ್ ಪಕ್ಷವೂ ಸೈನಿಕರು, ಸೇನೆ, ಅವರ ಕುಟುಂಬ ಹಾಗೂ ಸರ್ಕಾರದ ಜೊತೆ ನಿಂತಿದೆ'' ಎಂದು ಹೇಳಿದ್ದಾರೆ.

ಇನ್ನು ಚೀನಾ-ಭಾರತ ಘರ್ಷಣೆ ಕುರಿತು ಪ್ರತಿಕ್ರಿಯೆ ನೀಡಿರುವ ಮೋದಿ ''ಭಾರತ ಶಾಂತಿ ಬಯಸುತ್ತದೆ, ನಮ್ಮನ್ನು ಪ್ರಚೋದಿಸಿದರೆ, ಅದು ಯಾವುದೇ ಪರಿಸ್ಥಿತಿ ಇರಲಿ ನಾವು ಸಹ ಸೂಕ್ತ ಉತ್ತರ ನೀಡಲು ಸಮರ್ಪಕವಾಗಿದ್ದೇವೆ. ನಮ್ಮ ಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ನಾನು ದೇಶದ ಜನತೆಗೆ ಭರವಸೆ ನೀಡುತ್ತೇನೆ. ನಮಗೆ ದೇಶದ ಐಕ್ಯತೆ ಮತ್ತು ಸಾರ್ವಭೌಮತ್ವವು ಅತ್ಯಂತ ಮುಖ್ಯವಾದುದು'' ಎಂದು ಹೇಳಿದ್ದರು.

English summary
PM should come forward & tell the truth to the country that how did China occupy our land and why did our 20 soldiers lose their lives? What is the situtaion there today?: Congress Interim President Sonia Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X