2019 ರಲ್ಲಿ ಸೋನಿಯಾ, ರಾಹುಲ್ ಇಬ್ಬರಿಗೂ ಸೋಲು: ಬಿಜೆಪಿ ಭವಿಷ್ಯ!

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 09: "ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಬ್ಬರೂ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಸೋಲು ಕಾಣಲಿದ್ದಾರೆ" ಎಂದು ಬಿಜೆಪಿ ಭವಿಷ್ಯ ನುಡಿದಿದೆ.

ಬಿಜೆಪಿ ಮುಖಂಡರಿಗೆ ದಲಿತರನ್ನು ಕಂಡರೆ ಆಗುವುದಿಲ್ಲ: ರಾಹುಲ್ ಗಾಂಧಿ

"ಬಿಜೆಪಿ ಇನ್ನು ಕೆಲವೇ ದಿನಗಳಲ್ಲಿ ಅತ್ಯಂತ ಹೀನಾಯ ಸೋಲು ಕಾಣಲಿದೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕ್ಷೇತ್ರವಾದ ವಾರಣಾಸಿಯಲ್ಲೇ ಸೋಲನುಭವಿಸಲಿದ್ದಾರೆ" ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ವಕ್ತಾರ ಅನಿಲ್ ಬಾಲುನಿ ಈ ರೀತಿ ಹೇಳಿದ್ದಾರೆ.

Sonia Gandhi and Rahul Gandhi will lose their constituencies in 2019: BJP

"ಈಗಿರುವ ರಾಜಕೀಯ ಸ್ಥಿತಿಗತಿಯನ್ನು ನೋಡಿದರೆ ರಾಹುಲ್ ಗಾಂಧಿ ತಮ್ಮ ಕ್ಷೇತ್ರವಾದ ಉತ್ತರ ಪ್ರದೇಶದ ಅಮೇಥಿ ಮತ್ತು ಸೋನಿಯಾ ಗಾಂಧಿ ತಮ್ಮ ಕ್ಷೇತ್ರವಾದ ರಾಯ್ಬರೇಲಿಯಲ್ಲಿ ಸೋಲನುಭವಿಸಲಿದ್ದಾರೆ. ಅವರಿಬ್ಬರೂ ತಮ್ಮ ಕ್ಷೇತ್ರಕ್ಕಾಗಿ ಏನನ್ನೂ ಮಾಡಿಲ್ಲ. ಜನರಿಗೆ ಅವರ ಕುರಿತು ಉತ್ತಮ ಅಭಿಪ್ರಾಯವಿಲ್ಲ" ಎಂದು ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"Formeer Congress president Sonia Gandhi and her son Rahul Gandhi will lose their constituencies in 2019 Lok Sabha elections" BJP made counter attack. Earlier AICC president Rahul Gandhi told, 'BJP would suffer the kind of collapse not seen in years. and PM Modi will lose in his Constituency Varanasi in 2019'

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ