• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ವಿದೇಶಿ ಮಹಿಳೆ ಮಗನಿಗೆ ದೇಶಭಕ್ತಿ ಇರಲು ಸಾಧ್ಯವಿಲ್ಲ'

|

ನವದೆಹಲಿ, ಡಿಸೆಂಬರ್ 16: ವಿದೇಶಿ ಮಹಿಳೆಗೆ ಜನಿಸಿದ ಮಗುವಿಗೆ ದೇಶಭಕ್ತಿ ಇರಲು ಸಾಧ್ಯವಿಲ್ಲ ಅಥವಾ ಹೃದಯದಲ್ಲಿ ದೇಶದ ಹಿತಾಸಕ್ತಿಯೂ ಇರುವುದಿಲ್ಲ ಎಂದು ಬಿಜೆಪಿಯ ನಾಯಕರು ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ. ಹ್ಯಾಷ್ ಟ್ಯಾಗ್ #SaturdayMotivation ಮಾಡಿ, ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ವಿಚಾರವಾಗಿ ಮಾಡಿದ ಟೀಕೆಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ರಾಹುಲ್ ಅವರ ತಾಯಿ ಸೋನಿಯಾ ಗಾಂಧಿ ಮೂಲತಃ ಇಟಲಿಯವರು. ಆದರೆ ಅವರು ಭಾರತವನ್ನೇ ತಮ್ಮ ದೇಶ ಅಂದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು, ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ ಕೈಲಾಶ್ ವಿಜಯ್ ವರ್ಗಿಯ ಕ್ಷಮೆ ಕೇಳಿಲ್ಲ.

ರಾಹುಲ್ ಮತ್ತು ಮೋದಿ ನಡುವೆ ಅಂತಿಮ ನಗೆ ನಕ್ಕವರು ಯಾರು?

ವಿಜಯ ವರ್ಗಿಯ ಅವರಿಗೆ ತುರ್ತಾಗಿ ಮಾನಸಿಕ ಚಿಕಿತ್ಸೆ ಬೇಕಾಗಿದೆ. ಏಕೆಂದರೆ ಮಧ್ಯಪ್ರದೇಶ ಚುನಾವಣೆ ಸೋಲು ಅವರಿಗೆ ಭಾರೀ ಘಾಸಿ ಮಾಡಿದೆ ಎಂದು ಟ್ವೀಟ್ ಬಗ್ಗೆ ಕಾಂಗ್ರೆಸ್ ವಕ್ತಾರರಾದ ಪ್ರಿಯಾಂಕ ಚತುರ್ವೇದಿ ತಿರುಗೇಟು ನೀಡಿದ್ದಾರೆ. ವಿಜಯ್ ವರ್ಗಿಯ ಅವರು ಇಂದೋರ್ ನಿಂದ ಆಯ್ಕೆ ಆಗಿರುವ ಜನಪ್ರತಿನಿಧಿ.

ಮಧ್ಯಪ್ರದೇಶದಲ್ಲಿ ಕೆಲ ಭಾಗದ ಚುನಾವಣೆ ಪ್ರಚಾರ ಹೊಣೆಯನ್ನು ವಿಜಯ್ ವರ್ಗಿಯ ವಹಿಸಿಕೊಂಡಿದ್ದರು. ಆ ರಾಜ್ಯದಲ್ಲಿ ಬಿಜೆಪಿ 109 ಸ್ಥಾನ ಪಡೆದರೆ, ಕಾಂಗ್ರೆಸ್ 114 ಕ್ಷೇತ್ರಗಳಲ್ಲಿ ಜಯ ಗಳಿಸಿ, ಕೈ ಪಕ್ಷದ ಕಮಲ್ ನಾಥ್ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ಬಿಜೆಪಿ ದೇಶವನ್ನೇ ನಾಶ ಮಾಡಲಿದೆ: ರಾಹುಲ್ ಗಾಂಧಿ ವಾಗ್ದಾಳಿ

ಐದು ವರ್ಷದ ಹಿಂದೆ ಕೂಡ ಒಮ್ಮೆ ವಿಜಯ್ ವರ್ಗಿಯ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಒಂದು ಮಿತಿ ಇರುತ್ತದೆ. ಅದನ್ನು ಮೀರಿದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಅತ್ಯಾಚಾರ ಪ್ರಕರಣಗಳ ಬಗ್ಗೆ ಹೇಳಿಕೆ ನೀಡಿದ್ದರು. ಇನ್ನು ವ್ಯಾಪಂ ಹಗರಣ ದೊಡ್ಡ ಹಗರಣ ಅಲ್ಲವೇ ಅಲ್ಲ ಎಂದು ಹೇಳಿದ್ದರು.

English summary
BJP leader Kailash Vijayvargiya has attacked Congress president Rahul Gandhi's ascent in national politics by questioning his lineage in a near-abusive remark. "A child born from a foreign woman can never be patriotic, nor have national interests at heart," the party leader said in a tweet, hashtagged #SaturdayMotivation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X