'ಮೃದು ಹಿಂದುತ್ವ' ಅನುಸರಿಸುವುದಕ್ಕೆ ಕಾಂಗ್ರೆಸ್ ಗೆ ಕುಟುಕಿದ ಶಶಿ ತರೂರ್

ನವದೆಹಲಿ, ಸೆಪ್ಟೆಂಬರ್ 8: ಹಿಂದಿ ಮಾತನಾಡುವ ಪ್ರದೇಶಗಳಲ್ಲಿ 'ಮೃದು ಹಿಂದುತ್ವ' ಧೋರಣೆ ಅನುಸರಿಸುವುದರಿಂದ ಕಾಂಗ್ರೆಸ್ ಮರುಹುಟ್ಟಿಗೆ ಪರಿಹಾರ ಸಿಗಲ್ಲ. ಅದು ಕೋಕ್ ಲೈಟ್ (ತಂಪು ಪಾನೀಯ) ಇದ್ದಂತೆ ಮತ್ತು ಅಂಥ ಪ್ರಯತ್ನಗಳು ಕಾಂಗ್ರೆಸ್ ಅನ್ನು ಕೊನೆಗೆ ಶೂನ್ಯಕ್ಕೆ ತಂದು ನಿಲ್ಲಿಸುತ್ತವೆ ಎಂದು ಕಾಂಗ್ರೆಸ್ ಸಂಸದ (ತಿರುವನಂತಪುರ ಲೋಕಸಭಾ ಕ್ಷೇತ್ರ) ಶಶಿ ತರೂರ್ ಭಾನುವಾರ ಅಭಿಪ್ರಾಯ ಪಟ್ಟಿದ್ದಾರೆ.

ತಾವೇ ಬರೆದಿರುವ 'ದ ಹಿಂದೂ ವೇ: ಆನ್ ಇಂಟ್ರಡಕ್ಷನ್ ಟು ಹಿಂದೂಯಿಸಂ' ಪುಸ್ತಕ ಬಿಡುಗಡೆಗೆ ಪೂರ್ವಭಾವಿಯಾಗಿ ಅವರು ಮಾತನಾಡಿದ್ದಾರೆ. ಯಾರು ಅಧಿಕಾರದಲ್ಲಿದ್ದು, ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದಾರೋ ಅದು ನಿಜವಾದ ಅರ್ಥದಲ್ಲಿ ಹಿಂದುತ್ವ ಅಲ್ಲ. ಅವರು ರಾಜಕೀಯ ಹಾಗೂ ಚುನಾವಣೆ ಲಾಭಕ್ಕಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

Recommended Video

      Lok Sabha Elections 2019 : ಶಶಿ ತರೂರ್ ವ್ಯಕ್ತಿಚಿತ್ರ | Oneindia Kannada

      ಎಲ್ಲಿ ಬಿಜೆಪಿ ತುಂಬ ಪ್ರಬಲವಾಗಿ ಬಹುಸಂಖ್ಯಾತರನ್ನು ಓಲೈಸುತ್ತಿದೆಯೋ ಅಲ್ಲೇ ಕಾಂಗ್ರೆಸ್ ನವರು ಸಹ ಓಲೈಸಲು ಪ್ರಯತ್ನಿಸುತ್ತಿದ್ದಾರೆ. ಆಗ ಜನರಿಗೆ ಮೂಲ ಹಾಗೂ ನಕಲು ಯಾವುದು ಎಂದು ಖಂಡಿತಾ ಗೊತ್ತಾಗುತ್ತದೆ. ಪ್ರತಿ ಸಲ ಜನರ ಆಯ್ಕೆ ಮೂಲ (ಒರಿಜಿನಲ್) ಆಗಿರುತ್ತದೆ ಎಂದು ಅವರು ಹೇಳಿದ್ದಾರೆ.

      Shashi Tharoor

      ನಿಷ್ಠಾವಂತರು ಯಾವಾಗಲೂ ಪಕ್ಷದ ಬದ್ಧತೆ ಹಾಗೂ ಅದನ್ನು ಪ್ರದರ್ಶಿಸುವ ನಮ್ಮ ಧೈರ್ಯವನ್ನು ಗೌರವಿಸುತ್ತಾರೆ. ಅದರ ಬದಲು ಮೃದು ಹಿಂದುತ್ವ ಅಂದರೆ, ಕೋಕ್ ಲೈಟು ಮತ್ತು ಪೆಪ್ಸಿ ಜೀರೋ ಇದ್ದಂತೆ. ಕೊನೆಗೆ ಅದು ಕಾಂಗ್ರೆಸ್ ಜೀರೋ ಜತೆ ಮುಗಿಯುತ್ತದೆ ಎಂದಿದ್ದಾರೆ.

      ಯಾರು ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದಾರೋ ಅವರು ಈ ಧರ್ಮವು ಹಿಂಸೆಯನ್ನು- ತಾರತಮ್ಯವನ್ನು ಬೆಂಬಲಿಸುವುದಿಲ್ಲ ಎಂಬ ಸಂಗತಿಯೂ ಮರೆತುಹೋಗಿದ್ದಾರೆ ಎಂದು ಕುಟುಕಿದರು ಶಶಿ ತರೂರ್.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+