ಕೋವಿಡ್ 19 ಗೆ ಬೆಸ್ಟ್ ಔಷಧಿ ಯಾವುದು; ಕೇಂದ್ರ ಆರೋಗ್ಯ ಸಚಿವರು ಹೇಳಿದ್ದೇನು?
ನವದೆಹಲಿ, ಏಪ್ರಿಲ್ 25: ಬೇಸಿಗೆಯಲ್ಲಿ ಹೆಚ್ಚಿನ ಉಷ್ಣತೆಯು ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂಬುದಕ್ಕೆ ಬಲವಾದ ಪುರಾವೆಗಳಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಶುಕ್ರವಾರ ಹೇಳಿದ್ದಾರೆ. ಹಾಗಾಗಿ ಸಾಮಾಜಿಕ ಅಂತರವೇ ಕೊರೊನಾ ತಡೆಯುವ ಪ್ರಬಲ ಅಸ್ತ್ರ ಎಂದು ಅವರು ಹೇಳಿದ್ದಾರೆ.
ಕೊರೊನಾ ವೈರಸ್ ಏಕಾಏಕಿ ತಾಪಮಾನ ಹೆಚ್ಚಾದಂತೆ ಕ್ಷೀಣಿಸುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಹವಾಮಾನವು ತಂಪಾಗಿರುವ ಪ್ರದೇಶಗಳಲ್ಲಿಕೊರೊನಾ ಹೆಚ್ಚು ಅಟ್ಟಹಾಸ ಮೆರೆಯುತ್ತಿರುಬಹುದು. ಇದು ಉಹಾಪೋಹಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.
ದಿ ಪ್ರಿಂಟ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಪ್ರಸ್ತುತ ಕೋವಿಡ್ -19 ಬಿಕ್ಕಟ್ಟಿಗೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಮತ್ತು ಸರ್ಕಾರವು ಅದನ್ನು ಹೇಗೆ ನಿಭಾಯಿಸುತ್ತಿದೆ ಎಂಬುದರ ಕುರಿತು ಮಾತನಾಡಿದ್ದಾರೆ. ಮಾಸ್ಕ್ ಮತ್ತು ಕೈಗವಸುಗಳ ಕೊರತೆಯನ್ನು ನೀಗಿಸಲು ಸರ್ಕಾರವು ಹೆಚ್ಚು ರಕ್ಷಣಾತ್ಮಕ ಸಾಧನಗಳನ್ನು ತಯಾರಿಸಲು ಕೆಲಸ ಮಾಡುತ್ತಿದೆ ಮತ್ತು ಸುಮಾರು ಒಂದು ತಿಂಗಳಲ್ಲಿ ದಿನಕ್ಕೆ ಒಂದು ಲಕ್ಷಕ್ಕೆ ಹೆಚ್ಚಿಸಲು ಯೋಜಿಸುತ್ತಿದೆ ಎಂದು ಅವರು ಹೇಳಿದರು.

ತಾಂತ್ರಿಕವಾಗಿ ಪ್ರಸರಣದ ಮೂರನೇ ಹಂತ ಎಂದು ಕರೆಯಲ್ಪಡುವ ವೈರಸ್‌ನ ಸಾಮೂಹಿಕ ಸಮುದಾಯ ಪ್ರಸರಣವನ್ನು ಭಾರತ ನೋಡುತ್ತಿಲ್ಲ ಎಂದು ಅವರು ಪುನರುಚ್ಚರಿಸಿದರು. ಸೋಂಕು ಹರಡುವುದನ್ನು ಲಾಕ್‌ಡೌನ್ ಪರಿಣಾಮಕಾರಿಯಾಗಿ ತಡೆದಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.












Click it and Unblock the Notifications