'ಅಪ್ಪುಗೆ ಕಳಿಸು' ಎಂದ ಸ್ಮೃತಿ ಇರಾನಿಗೆ 'ಅವಳು' ಕಳಿಸಿದ್ದೇನು?

ನವದೆಹಲಿ, ಜೂನ್ 27: "'ಅಪ್ಪುಗೆ ಕಳಿಸು' ಎಂದಿದ್ದಕ್ಕೆ 'ಅವಳು' ಇದನ್ನು ಕಳಿಸಿದಳು" ಎಂದು ಇಂಗ್ಲಿಷ್ ನಲ್ಲಿ "HUG" ಎಂದು ಬರೆದ ಚಿತ್ರವೊಂದನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಸ್ಮೃತಿ ಇರಾನಿ ಇನ್ ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

'ಅವಳು' ಎಂದರೆ ಅದು ಸ್ಮೃತಿ ಇರಾನಿ ಅವರ ಪುತ್ರಿ ಝೋಯಿಶ್ ಇರಾನಿ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ! "ನಿನಗೆ ಆಫೀಸಿನಲ್ಲಿ ಕೆಲಸ ಮಾಡುವಾಗ ಏನಾದರೂ ಬೇಕಿದ್ದರೆ ನನ್ನ ಕೇಳು ಎಂದು 'ಅವಳು' ಹೇಳಿದ್ದಳು. ನಾನು ಅದಕ್ಕೆ, 'ಅಪ್ಪುಗೆ ಕಳಿಸು' ಎಂದೆ. ಅದಕ್ಕೆ ಅವಳು ಮನೆಯಿಂದ ಇದನ್ನು ಕಳಿಸಿದಳು" ಎಂದು ಹಗ್ ಎಂದು ಬರೆದ ಚೀಟಿಯನ್ನು ಸ್ಮೃತಿ ಇರಾನಿ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ ಸ್ಟಾಗ್ರಾಂ ನಲ್ಲಿ ಸದಾ active ಆಗಿರುವ ಸ್ಮೃತಿ ಇರಾನಿ ಇತ್ತೀಚೆಗಷ್ಟೇ ತನ್ನ ಮಗಳನ್ನು ಚುಡಾಯಿಸಿದ ಹುಡುಗನೊಬ್ಬನನ್ನು ಇನ್ ಸ್ಟಾಗ್ರಾಂನಲ್ಲೇ ತರಾಟೆಗೆ ತೆಗೆದುಕೊಂಡಿದ್ದರು.

Smriti Iranis Hug post in instagram will make you laugh

ಸ್ಮೃತಿ ಇರಾನಿ ಅವರು ತಮ್ಮ ಮಗಳು ಝೋಯಿಶ್ ಇರಾನಿಯ ಸೆಲ್ಫಿಯೊಂದನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಾಕಿದ್ದರು. ಇದನ್ನು ನೋಡಿದ ಆಕೆಯ ಸಹಪಾಠಿಯೊಬ್ಬ ಆಕೆಯನ್ನು ಲೇವಡಿ ಮಾಡಿದ್ದ. ಅದರಿಂದ ಮುಜುಗರಕ್ಕೊಳಗಾದ ಮಗಳು ಮನೆಗೆ ಬಂದು, ಆ ಚಿತ್ರವನ್ನು ಡಿಲೀಟ್ ಮಾಡುವಂತೆ ತಾಯಿ ಸ್ಮೃತಿಗೆ ದುಂಬಾಲು ಬಿದ್ದಿದ್ದಳು. ಆಕೆಯ ಬೇಸರ ನೋಡಲಾಗದೆ ಸ್ಮೃತಿ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದರು.

ಆದರೆ ಮರುದಿನ ಮತ್ತೆ ಅದೇ ಚಿತ್ರವನ್ನು ಪೋಸ್ಟ್ ಮಾಡಿ, "ಆಕೆಯ ಕಣ್ಣೀರು ನೋಡಲಾಗದೆ ನಾನು ಆ ಚಿತ್ರವನ್ನು ಡಿಲೀಟ್ ಮಾಡಿದೆ. ಆದರೆ ನಂತರ ನನಗೆ ತಿಳಿಯಿತು,ನಾನು ಅದನ್ನು ಡಿಲೀಟ್ ಮಾಡುವುದರಿಂದ ಹೀಗೆ ಚುಡಾಯಿಸುವವರಿಗೆ ಹೆದರಿದ ಹಾಗೆ ಮತ್ತು ಅವರನ್ನು ಪರೋಕ್ಷವಾಗಿ ಬೆಂಬಲಿಸಿದಂತಾಗುತ್ತದೆ. ಆದ್ದರಿಂದ ಈ ಚಿತ್ರವನ್ನು ನಾನು ಮತ್ತೆ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡುತ್ತಿದ್ದೇನೆ. ಮಿ.ಜಾ, ನನ್ನ ಮಗಳು ಒಬ್ಬ ಕ್ರೀಡಾಪಟು. ಲಿಮ್ಕಾ ಬುಕ್ ನಲ್ಲಿ ದಾಖಲೆ ಬರೆದಿದ್ದಾಳೆ. ಅಷ್ಟೇ ಅಲ್ಲ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದಾಳೆ. ಎರಡು ಬಾರಿ ವಿಶ್ವ ಚಾಂಪಿಯನ್ ನಲ್ಲಿ ಕಂಚಿನ ಪದಕ ಗೆದ್ದಿದ್ದಾಳೆ. ಅಷ್ಟೇ ಅಲ್ಲ ತುಂಬಾ ಸುಂದರಿ. ನಿನಗೆ ಎಷ್ಟು ಚುಡಾಯಿಸಬೇಕು ಅನ್ನಿಸುತ್ತೋ ಚುಡಾಯಿಸು. ಅವಳು ಅದರ ವಿರುದ್ಧ ಅಷ್ಟೇ ಸಮರ್ಥವಾಗಿ ಹೋರಾಡುತ್ತಾಳೆ. ಅವಳು ಝೋಯಿಶ್ ಇರಾನಿ, ನನಗೆ ಅವಳ ಅಮ್ಮ ಆಗಿರುವುದಕ್ಕೆ ಹೆಮ್ಮೆ ಇದೆ " ಎಂದು ಸ್ಮೃತಿ ಇರಾನಿ ಬರೆದುಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+