ಗೋತ್ರ ಯಾವುದೆಂದು ಕಿಚಾಯಿಸಿದವನಿಗೆ ತಪರಾಕಿ ಕೊಟ್ಟ ಸ್ಮೃತಿ ಇರಾನಿ
ನವದೆಹಲಿ, ನವೆಂಬರ್ 28: ಅತ್ತ ಬಿಜೆಪಿ ಬೆಂಬಲಿಗರು ರಾಹುಲ್ ಗಾಂಧಿ ಅವರ ಗೋತ್ರದ ವಿಚಾರವನ್ನು ಮುಂದಿಟ್ಟುಕೊಂಡು ಚರ್ಚೆ ನಡೆಸುತ್ತಿದ್ದರೆ, ಇತ್ತ ಕಾಂಗ್ರೆಸ್ ಬೆಂಬಲಿಗರೂ ಗೋತ್ರದ ವಿಚಾರಗಳನ್ನು ಕೆದಕುತ್ತಿದ್ದಾರೆ.
ಹೀಗೆ ಗೋತ್ರ ವಿವರ ಕೆದಕುವುದರ ಜತೆಗೆ ಕೆಣಕಲು ಹೋದ ಟ್ವಿಟ್ಟರಿಗನೊಬ್ಬ, ಸಚಿವೆ ಸ್ಮೃತಿ ಇರಾನಿ ಅವರಿಂದ ಮಾತಿನ ಚಾಟಿಯೇಟು ತಿಂದಿದ್ದಾನೆ.
ರಿತುರಾಜ್ ಕೊನ್ವಾರ್ ಎಂಬಾತ ಸ್ಮೃತಿ ಇರಾನಿ ಅವರನ್ನು ಪ್ರಶ್ನಿಸಿ ಟ್ವಿಟ್ಟರ್‌ನಲ್ಲಿ ಮುಖಭಂಗ ಅನುಭವಿಸಿದ್ದಾರೆ.

'ಸ್ಮೃತಿ ಇರಾನಿ, ಅವರ ಗಂಡ ಮತ್ತು ಮಕ್ಕಳ ಗೋತ್ರವನ್ನು ಕೇಳಲು ನನಗೆ ಅವಕಾಶವಿದೆಯೇ? ಸ್ಮೃತಿ ಅವರ ಇರಿಸುವ ಸಿಂಧೂರ ಧಾರ್ಮಿಕವೇ ಅಥವಾ ಸ್ಟೈಲ್ ಗಾಗಿ ಇರಿಸಿದ್ದಾರೆಯೇ?' ಎಂದು ರಿತುರಾಜ್ ಎಂಬುವವರು ಸ್ಮೃತಿ ಇರಾನಿ ಮಾತ್ರವಲ್ಲದೆ, ಸಂಬಿತ್ ಸ್ವರಾಜ್, ರಾಹುಲ್ ಗಾಂಧಿ, ಪ್ರಧಾನಿ ಕಾರ್ಯಾಲಯ, ಕಾಂಗ್ರೆಸ್, ಶಶಿ ತರೂರ್ ಮುಂತಾದವರನ್ನು ಟ್ಯಾಗ್ ಮಾಡಿ ವ್ಯಂಗ್ಯದಿಂದ ಪ್ರಶ್ನಿಸಿದ್ದರು.
My gotra is Kaushal Sir as is my father’s as was his father’s and his father’s and his father’s...My husband and children are Zoroastrians so can’t have a gotra. The sindoor I wear is my belief as a practising Hindu. Now get back to your life. धन्यवाद🙏
— Smriti Z Irani (@smritiirani) 28 November 2018
ಇದಕ್ಕೆ ಟ್ವಿಟ್ಟರ್‌ನಲ್ಲಿ ತಪರಾಕಿ ಕೊಟ್ಟ ಸ್ಮೃತಿ, ನನ್ನದು ಕೌಶಾಲ್ ಗೋತ್ರ ಸರ್. ನನ್ನ ತಂದೆ, ಅವರ ತಂದೆ ಮತ್ತು ಅವರ ತಂದೆಯದ್ದೂ ಇದೇ ಗೋತ್ರ. ಆದರೆ, ನನ್ನ ಗಂಡ ಮತ್ತು ಮಕ್ಕಳು ಜೊರಾಷ್ಟ್ರಿಯನ್ನರು. ಆದ್ದರಿಂದ ಅವರಿಗೆ ಗೋತ್ರ ಹೊಂದಲು ಸಾಧ್ಯವಿಲ್ಲ. ನಾನು ಹಣೆಗೆ ಇರಿಸುವ ಸಿಂಧೂರ ಒಬ್ಬ ಹಿಂದೂ ಆಗಿ ಪಾಲಿಸುತ್ತಿರುವುದು. ಈಗ ನಿಮ್ಮ ಬದುಕು ನೋಡಿಕೊಳ್ಳಿ. ಧನ್ಯವಾದ ಎಂದು ತೀಕ್ಷ್ಣವಾಗಿ ಉತ್ತರಿಸಿದ್ದರು.
Public Disclaimer —- as a public figure when asked questions (no matter how infuriating )it is my responsibility to respond however as an Indian let me proudly say मेरा धर्म हिंदुस्तान है मेरा कर्म हिंदुस्तान है मेरी आस्था हिंदुस्तान है मेरा विश्वास हिंदुस्तान है 🙏
— Smriti Z Irani (@smritiirani) 28 November 2018
ಬಳಿಕ ಸಾರ್ವಜನಿಕ ಪ್ರಕಟಣೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದ ಸ್ಮೃತಿ, ಸಾರ್ವಜನಿಕ ವ್ಯಕ್ತಿಯಾಗಿ ಯಾರಾದರೂ ಪ್ರಶ್ನೆ ಮಾಡಿದಾಗ (ಎಷ್ಟು ರೇಗಿಸಿದ್ದರು ಎನ್ನುವುದು ಮಹತ್ವವಲ್ಲ) ಪ್ರತಿಕ್ರಿಯೆ ನೀಡುವುದು ನನ್ನ ಜವಾಬ್ದಾರಿ. ಆದರೆ, ಭಾರತೀಯಳಾಗಿ ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ, ನನ್ನ ಧರ್ಮ ಹಿಂದೂಸ್ತಾನ. ನನ್ನ ಕಾರ್ಯ ಹಿಂದೂಸ್ತಾನ, ನನ್ನ ವಿಶ್ವಾಸ ಹಿಂದೂಸ್ತಾನವಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications