ಸ್ಮೃತಿ ಇರಾನಿ ಡಿಗ್ರಿ ಪ್ರಕರಣ ವಿಚಾರಣೆ ಆ. 28ಕ್ಕೆ ಮುಂದೂಡಿಕೆ

ನವದೆಹಲಿ, ಜೂ, 24 : ನಕಲಿ ಪ್ರಮಾಣ ಪತ್ರ ಸಲ್ಲಿಕೆ ಆರೋಪ ಕುರಿತು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರ ವಿರುದ್ಧ ದೂರು ದಾಖಲಾಗಿತ್ತು. ಇದರ ವಿಚಾರಣೆಯನ್ನು ಇದೀಗ ಆಗಸ್ಟ್ 28 ಕ್ಕೆ ಮುಂದೂಡಲಾಗಿದೆ.

ಲೇಖಕ ಅಹ್ಮೀರ್ ಖಾನ್ ಇರಾನಿ ವಿರುದ್ದ ದೂರು ಸಲ್ಲಿಸಿದ್ದರು. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಸ್ಮೃತಿ ಇರಾನಿ ತಮ್ಮ ವಿದ್ಯಾಭ್ಯಾಸದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಅವರು ಪದವಿ ಪೂರೈಸಿಲ್ಲ ಎಂದು ದೂರಿದ್ದರು.

ಖಾನ್ ಪರ ವಕೀಲ ಕೆ.ಕೆ.ಮೆನನ್ ಇರಾನಿ ಅವರ ವಿಚಾರಣೆ ನಡೆಸುವಂತೆ ಮೆಟ್ರೋ ಪಾಲಿಟನ್ ಕೋರ್ಟ್ ನ್ಯಾಯಾಮೂರ್ತಿ ಅವರಿಗೆ ಮನವಿ ಮಾಡಿದ್ದರು. ಬುಧವಾರ ತೀರ್ಪು ಪ್ರಕಟಗೊಂಡಿದ್ದು, ವಿಚಾರಣೆಗೆ ಒಪ್ಪಿಗೆ ನೀಡಿದ್ದ ಕೋರ್ಟ್ ಮುಂದಿನ ವಿಚಾರಣೆಯನ್ನು ಆ. 28ಕ್ಕೆ ಮುಂದೂಡಿದೆ.[ಫ್ಯಾಬ್ ಇಂಡಿಯಾ ಮಳಿಗೆಯಲ್ಲಿ ಸ್ಮೃತಿ ಇರಾನಿ ಕಂಡಿದ್ದೇನು?]

Smriti Irani degree row: Court says plea maintainable, next hearing on August 28

ಗೊಂದಲವೇನು ?

ಏಪ್ರಿಲ್ 2014 ರ ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದ ಅಮೇಠಿಯಿಂದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಇರಾನಿ ಅವರು ತಮ್ಮ ಪ್ರಮಾಣ ಪತ್ರದಲ್ಲಿ ಬಿ,ಎ ಪದವಿಯನ್ನು 1996ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ಪಡೆದುದಾಗಿ ತಿಳಿಸಿದ್ದರು.

ನಂತರ 2011ರಲ್ಲಿ ಗುಜರಾತಿನಿಂದ ರಾಜ್ಯ ಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ದೆಹಲಿ ಮುಕ್ತ ವಿಶ್ವವಿದ್ಯಾನಿಲಯಲ್ಲಿ ಬಿ.ಕಾಂ ಪ್ರಥಮ ವರ್ಷದ ಪದವಿ ಗಳಿಸಿರುವುದಾಗಿ ಘೋಷಿಸಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+