• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ; ಯಾವ, ಯಾವ ರಾಜ್ಯಗಳ ವಿರೋಧ?

|

ನವದೆಹಲಿ, ಡಿಸೆಂಬರ್ 14; ಸಾಕಷ್ಟು ವಿರೋಧಗಳ ನಡುವೆಯೂ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ಸಂಸತ್ ನ ಅನುಮೋದನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ, ಈ ಕಾಯ್ದೆ ಜಾರಿಗೆ ಬಂದರೆ ನಾವು ಅದನ್ನು ಜಾರಿಗೊಳಿಸುವುದಿಲ್ಲ ಎಂದು ಆರು ರಾಜ್ಯಗಳು ಇದೀಗ ಹಠ ಹಿಡಿದು ಕುಳತಿವೆ.

ಕೇರಳ, ಪಶ್ಚಿಮ ಬಂಗಾಳ, ಪಂಜಾಬ, ಛತ್ತಿಸಗಢ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳು ಕಾಯ್ದೆ ಜಾರಿಗೊಳಿಸಲು ಆಗುವುದಿಲ್ಲ ಎಂದು ಹೇಳಿವೆ. ಆದರೆ ಇದಕ್ಕೆ ಕೇಂದ್ರ ಸರ್ಕಾರ ತೀವ್ರ ವಿರೋಧ ಮಾಡಿದ್ದು, ಕಾಯ್ದೆ ಜಾರಿಗೊಳಿಸುವುದಿಲ್ಲ ಎನ್ನುವ ಅಧಿಕಾರ ರಾಜ್ಯಗಳಿಗೆ ಇಲ್ಲ ಎಂದು ಹೇಳಿದೆ. ಆರೂ ರಾಜ್ಯಗಳು ಮಾತ್ರ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಸುಪ್ರೀ ಮೊರೆ ಹೋಗುವ ಸುಳಿವು ನೀಡಿವೆ.

ಪೌರತ್ವ ಮಸೂದೆಗೆ ರಾಜ್ಯಗಳ ವಿರೋಧ ಏಕೆ?

ಪೌರತ್ವ ಮಸೂದೆಗೆ ರಾಜ್ಯಗಳ ವಿರೋಧ ಏಕೆ?

ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ 2019, 1955ರಲ್ಲಿ ಜಾರಿಗೆ ತರಲಾಗಿದ್ದ ನಾಗರಿಕ ಕಾಯ್ದೆಗೆ ತಿದ್ದುಪಡಿಯಾಗಿದೆ. ನೆರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನಗಳ ಮುಸ್ಲಿಂಯೇತರ ನಿರಾಶ್ರಿತರಿಗೆ, ಅಲ್ಲಿ ಧಾರ್ಮಿಕ ಹಿಂಸೆ ಮತ್ತು ಕಿರುಕುಳಕ್ಕೆ ಒಳಗಾಗಿ ಜೀವನ ನಡೆಸಲು ಸಾಧ್ಯವಾಗದೆ ಭಾರತಕ್ಕೆ ಆಶ್ರಯ ಕಂಡುಕೊಂಡು ಬಂದಿರುವ ನಾಗರಿಕರಿಗೆ ಭಾರತದ ಖಾಯಂ ಪೌರತ್ವ ನೀಡುವ ಮಸೂದೆಯಾಗಿದೆ. ಇದು ಜಾರಿಗೆ ಬಂದರೆ ಮುಸ್ಲಿಂ ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತದೆ. ಧರ್ಮದಿಂದ ಪೌರತ್ವ ನೀಡುವುದು ಸರಿಯಲ್ಲ ಎಂದು ವಿರೋಧಿಸುತ್ತಿವೆ.

ಪೌರತ್ವ ತಿದ್ದುಪಡಿ ಕಾಯ್ದೆಗೆ ತಸ್ಲಿಮಾ ನಸ್ರೀನ್ ಬೆಂಬಲ

ಜಾರಿಗೆ ಮಾಡಲೇಬೇಕು

ಜಾರಿಗೆ ಮಾಡಲೇಬೇಕು

ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನದ ಆರ್ಟಿಕಲ್ ೭ ರ ಅಡಿಯಲ್ಲಿ ಜಾರಿಗೊಳಿಸಲಾಗಿದೆ. ಈ ಪ್ರಕಾರ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ೨೦೧೯ ಕೇಂದ್ರದ ಶಾಸನವಾಗುತ್ತೆ. ಇದು ಸಮವರ್ತಿ ಪಟ್ಟಿಯಲ್ಲಿ ಬರದ ಶಾಸನ. ಹೀಗಾಗಿ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಎಲ್ಲ ರಾಜ್ಯಗಳು ಇದನ್ನು ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ.

ಕಾಂಗ್ರೆಸ್ ಹೊಟ್ಟೆ ಕೆಟ್ಟಿದೆ

ಕಾಂಗ್ರೆಸ್ ಹೊಟ್ಟೆ ಕೆಟ್ಟಿದೆ

ಸಂಸತ್ ನಲ್ಲಿ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ೨೦೧೯ ಕ್ಕೆ ಅನುಮೋದನೆ ಪಡೆಯಲು ಸಫಲವಾಗಿರುವ ಎನ್ ಡಿ ಎ ಸರ್ಕಾರ ಮಹತ್ವದ ಗೆಲುವು ಸಾಧಿಸಿದೆ. ಈ ಕಾಯ್ದೆ ವಿರೋಧಿಸುತ್ತಿರುವ ಕಾಂಗ್ರೆಸ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ ಶಾ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಕಾಯ್ದೆ ಜಾರಿಗೆ ಬಂದ ಮೇಲೆ ಕಾಂಗ್ರೆಸ್ ಹೊಟ್ಟೆ ಕಡಿಯುತ್ತಿದೆ. ದೇಶವನ್ನು ನಾವು ದೃಷ್ಠಿಕೋನದಿಂದ ನಿರ್ಮಿಸುತ್ತಿದ್ದೇವೆ. ಮತಬ್ಯಾಂಕ್ ಜೊತೆ ರಾಜಕಾರಣ ಮಾಡುವವರು ಇದನ್ನು ವಿರೋಧಿಸುತ್ತಾರೆ ಎಂದಿದ್ದಾರೆ.

ರಾಷ್ಟ್ರಪತಿಗಳ ಅಂಕಿತ ಬಾಕಿ

ರಾಷ್ಟ್ರಪತಿಗಳ ಅಂಕಿತ ಬಾಕಿ

ಈಗ ದೇಶಾದ್ಯಂತ ಸದ್ದು ಮಾಡುತ್ತಿರುವುದು ಈ ಮಸೂದೆ ಪರ-ವಿರೋಧ ಸಾಕಷ್ಟು ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಸಂಸತ್ತಿನಲ್ಲಿ ಈ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಈ ವಿವಾದಿತ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳೆದ ಸೋಮವಾರ ಲೋಕಸಭೆಯಲ್ಲಿ ಮಂಡಿಸಿ ಅದಕ್ಕೆ ಬಹುಮತ ಸಿಕ್ಕಿ ಅನುಮೋದನೆಗೊಂಡು ರಾಜ್ಯಸಭೆಯಲ್ಲಿ ಮಂಡನೆಯಾಗಿದೆ. ರಾಷ್ಟ್ರಪತಿಗಳ ಅಂಕಿತ ಒಂದೇ ಬಾಕಿ ಇದೆ. ಈ ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದು ಅಲ್ಪಸಂಖ್ಯಾತರ ವಿರುದ್ಧವಾಗಿದೆ ಎಂಬುದು ವಿರೋಧಿಸುತ್ತಿರುವವರ ವಾದ.

English summary
Six States Opposes Anti Citizenship Amendment Bill 2019. West Bengal, Punjab, Kerala, Madyapradesh, Chattisghad and Maharastra Opposes the bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X