ಬಿಸಿಲಿನ ಬಿಸಿಗೆ ಚಾರ್ಜ್ ಆಗುವುದನ್ನೇ ನಿಲ್ಲಿಸುತ್ತಿದೆಯಾ ಐಫೋನ್? ಈ 5 ತಪ್ಪುಗಳನ್ನು ತಕ್ಷಣ ಬದಲಾಯಿಸಿಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಐಫೋನ್ ಬಳಕೆದಾರರನ್ನು ಈ ಒಂದು ಸಮಸ್ಯೆ ಅತಿಯಾಗಿ ಕಾಡುತ್ತಿದೆ. ಭಾರತದ ಹಲವು ರಾಜ್ಯಗಳಲ್ಲಿ ತಾಪಮಾನ 40-42 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಬಿಸಿಲ ಬೇಗೆಗೆ ಮನುಷ್ಯರು ಮಾತ್ರವಲ್ಲದೆ ನಮ್ಮ ಜೇಬಿನಲ್ಲಿರುವ ಗ್ಯಾಜೆಟ್‌ಗಳು ಕೂಡಾ ತೊಂದರೆಗೊಳಗಾಗುವ ಹಾಗಾಗಿದೆ. ಹೆಚ್ಚುತ್ತಿರುವ ತಾಪಮಾನದಿಂದಾಗಿ ಐಫೋನ್ ಬಳಕೆದಾರರು ಹೆಚ್ಚಿನ ತೊಂದರೆಯನ್ನು ಎದುರಿಸುತ್ತಿದ್ದಾರೆ. ಫೋನ್‌ನ ಸ್ಕ್ರೀನ್‌ ಇದ್ದಕ್ಕಿದ್ದಂತೆ ಮಸುಕಾಗುತ್ತಿದ್ದರೆ ಅಥವಾ ಚಾರ್ಜಿಂಗ್ ಮಧ್ಯದಲ್ಲಿಯೇ ನಿಂತು ಬಿಟ್ಟರೆ ಐಫೋನ್ ಮಿತಿ ಮೀರಿ ಬಿಸಿಯಾಗಿದೆ ಎಂದರ್ಥ. ಕೆಲವು ಸರಳ ಮಾರ್ಗಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಿಮ್ಮ ಐಫೋನ್‌ಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬಹುದು.

ಆಪಲ್ ಪ್ರಕಾರ, ಐಫೋನ್ ಅನ್ನು 0°C ಮತ್ತು 35°C ನಡುವಿನ ತಾಪಮಾನದಲ್ಲಿ ಬಳಸಲು ವಿನ್ಯಾಸಗೊಳಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಏರುತ್ತಿರುವ ತಾಪಮಾನ ಈ ಮಿತಿಯನ್ನು ಸುಲಭವಾಗಿ ಮೀರುತ್ತಿದೆ. ಹಾಗಾಗಿ ಇದ್ದಕ್ಕಿದ್ದಂತೆ ವಿಪರೀತ ಬಿಸಿಯಾಗುವ ಮೂಲಕ ಐ ಫೋನ್‌ ಆಫ್‌ ಆಗುತ್ತಿರುವ ಸಮಸ್ಯೆಯನ್ನು ಎಲ್ಲಾ ಐಫೋನ್‌ ಬಳಕೆದಾರರು ಎದುರಿಸುತ್ತಿದ್ದಾರೆ.

iPhone Overheating

ಐಫೋನ್ ಶಾಖದ ಅಲೆಗೆ ಹೇಗೆ ಪ್ರತಿಕ್ರಿಯಿಸುತ್ತದೆ?:

ನಿಮ್ಮ ಐಫೋನ್‌ನ ಆಂತರಿಕ ತಾಪಮಾನವು ಅಪಾಯಕಾರಿ ಮಟ್ಟವನ್ನು ತಲುಪಿದಾಗ, ತಕ್ಷಣವೇ ಥರ್ಮಲ್‌ ಮ್ಯಾನೇಜ್‌ಮೆಂಟ್‌ ಮೋಡ್‌ ಆನ್‌ ಆಗುತ್ತದೆ. ಇದರ ಕೆಲವು ವಿಶಿಷ್ಟ ಲಕ್ಷಣಗಳು ಹೀಗಿವೆ.

ಡಿಸ್‌ಪ್ಲೇ ಮಬ್ಬಾಗುವುದು:

ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ, ಶಾಖ ಉತ್ಪಾದನೆಯನ್ನು ಕಡಿಮೆ ಮಾಡಲು ಸ್ಕ್ರೀನ್‌ನ ಬ್ರೈಟ್‌ನೆಸ್‌ ಸ್ವಯಂಚಾಲಿತವಾಗಿ ಕಡಿಮೆಯಾಗುತ್ತದೆ.

ಫೋನ್ ಬಿಸಿಯಾದಾಗ ಚಾರ್ಜಿಂಗ್ ಆನ್ ಹೋಲ್ಡ್ ಎನ್ನುವ ನೋಟಿಫಿಕೇಶನ್‌ ಕಾಣಿಸಿಕೊಳ್ಳುತ್ತವೆ. ಬ್ಯಾಟರಿ ಲೈಫ್‌ ಕಾಪಾಡಲು ಫೋನ್ ಸಾಮಾನ್ಯವಾಗಿ 80 ಪ್ರತಿಶತದ ನಂತರ ಚಾರ್ಜ್ ಆಗುವುದನ್ನು ನಿಲ್ಲಿಸುತ್ತದೆ.

ಕಾರ್ಯಕ್ಷಮತೆ:

ಭಾರೀ ಅಪ್ಲಿಕೇಶನ್‌ಗಳನ್ನು ಚಲಾಯಿಸುವಾಗ ಕ್ಯಾಮೆರಾ ವಿಳಂಬವಾಗುತ್ತದೆ. ಫ್ಲ್ಯಾಷ್ ಆನ್ ಆಗುವುದಿಲ್ಲ ಮತ್ತು ಫೋನ್‌ನ ವೇಗ ನಿಧಾನವಾಗುತ್ತದೆ.

ಹೆಚ್ಚು ಬಿಸಿಯಾದಾಗ ಫೋನ್ ಅನ್ನು ಸಂಪೂರ್ಣವಾಗಿ ಲಾಕ್ ಆಗುತ್ತದೆ. ಜೊತೆಗೆ ಥರ್ಮಾಮೀಟರ್ ಐಕಾನ್‌ನೊಂದಿಗೆ ಅಲರ್ಟ್‌ ನೀಡುತ್ತದೆ.

ನಿಮ್ಮ ಐಫೋನ್ ಅನ್ನು ತಣ್ಣಗಾಗಿಸಲು ಹೀಗೆ ಮಾಡಿ:

ವಿಪರೀತ ಬಿಸಿಲಿನಲ್ಲಿ ನಿಮ್ಮ ಐಫೋನ್ ಸರಾಗವಾಗಿ ಕೆಲಸ ಮಾಡಬೇಕಾದರೆ ಈ ಸಲಹೆಗಳನ್ನು ಅನುಸರಿಸಿ ನೋಡಿ:

ನಿಮ್ಮ ಐಫೋನ್‌ಗೆ ಭಾರವಾದ ಅಥವಾ ದೃಢವಾದ ಕೇಸ್ ಹಾಕಿದ್ದರೆ, ಬೇಸಿಗೆಯ ಶಾಖದಲ್ಲಿ ಅದನ್ನು ತೆಗೆದುಹಾಕಿ. ಈ ಕವರ್‌ಗಳು ಶಾಖವು ಹೊರಹೋಗದಂತೆ ತಡೆಯುತ್ತದೆ. ಕೇಸ್ ತೆಗೆಯುವುದರಿಂದ ಫೋನಿನ ಬಾಡಿ ತಣ್ಣಗಾಗಲು ಅನುವು ಮಾಡಿಕೊಟ್ಟಂತಾಗುತ್ತದೆ.

ಸಾಧ್ಯವಾದರೆ ಬೇಸಿಗೆಯಲ್ಲಿ ವೈರ್‌ಲೆಸ್ ಚಾರ್ಜಿಂಗ್ ಅನ್ನು ತಪ್ಪಿಸಿ. ವೈರ್‌ಲೆಸ್ ಚಾರ್ಜರ್‌ಗಳು ಹೆಚ್ಚಿನ ಶಾಖವನ್ನು ಉತ್ಪಾದಿಸುತ್ತವೆ. ಬೇಸಿಗೆಯಲ್ಲಿ ಮೂಲ ಕೇಬಲ್ ಚಾರ್ಜರ್ ಅನ್ನು ಮಾತ್ರ ಬಳಸಿ. ಸಾಧ್ಯವಾದರೆ, ಫೋನ್ ಅನ್ನು ಹವಾನಿಯಂತ್ರಿತ ಕೋಣೆಯಲ್ಲಿ ಚಾರ್ಜ್ ಮಾಡಿ.

ನೇರ ಸೂರ್ಯನ ಬೆಳಕನ್ನು ತಪ್ಪಿಸಿ:

ಅಲ್ಲದೆ, ನಿಮ್ಮ ಫೋನ್ ಅನ್ನು ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಅಥವಾ ನೇರ ಸೂರ್ಯನ ಬೆಳಕಿನಲ್ಲಿ ಇಡಬೇಡಿ. ಸೂರ್ಯನ ಬೆಳಕು ನಿಮ್ಮ ಫೋನ್‌ನ ಸಂವೇದಕಗಳು ಮತ್ತು ಬ್ಯಾಟರಿಯನ್ನು ನಿಮಿಷಗಳಲ್ಲಿ ಹಾನಿಗೊಳಿಸುತ್ತದೆ.

ಕಡಿಮೆ ಪವರ್ ಮೋಡ್‌ನ ಮ್ಯಾಜಿಕ್:

ನೀವು ಹೊರಗಿದ್ದರೆ ಮತ್ತು ಬಿಸಿಲಿನಲ್ಲಿದ್ದರೆ, ನಿಮ್ಮ ಐಫೋನ್‌ನ ಲೋ ಪವರ್ ಮೋಡ್ ಅನ್ನು ಆನ್ ಮಾಡಿ. ಇದರಿಂದ ಬ್ಯಾಕ್‌ ಗ್ರೌಂಡ್‌ ಅಕ್ಟಿವಿಟಿ ಕಡಿಮೆಯಾಗುತ್ತದೆ. ಜೊತೆಗೆ ಪ್ರೊಸೆಸರ್ ಅನ್ನು ಲೋಡ್ ಮಾಡುತ್ತದೆ. ಆಗ ಫೋನ್ ಹೆಚ್ಚು ಬಿಸಿಯಾಗುವುದನ್ನು ತಡೆಯುತ್ತದೆ.

ದೊಡ್ಡ ಅಪ್ಲಿಕೇಶನ್‌ಗಳ ಬಳಕೆಯನ್ನು ಮಿತಿಗೊಳಿಸಿ:

ಬೇಸಿಗೆಯ ಬಿಸಿಲಿನಲ್ಲಿ ಗೇಮಿಂಗ್ ಅಥವಾ ಉತ್ತಮ ಗುಣಮಟ್ಟದ ವೀಡಿಯೊಗಳನ್ನು ರೆಕಾರ್ಡ್ ಮಾಡುವುದನ್ನು ತಪ್ಪಿಸಿ. ಇವು ಪ್ರೊಸೆಸರ್ ಅನ್ನು ಹೆಚ್ಚು ಬಿಸಿಯಾಗಿಸಬಹುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+