ಗೈರು ಹಾಜರಾದ ಸಚಿವನಿಗೆ ವೆಂಕಯ್ಯ ನಾಯ್ಡು ತರಾಟೆ!
ನವದೆಹಲಿ, ಜುಲೈ 19: ಸಂಸತ್ತಿಗೆ ಗೈರು ಹಾಜರಾದ ಸಚಿವರೊಬ್ಬರನ್ನು ರಾಜ್ಯ ಸಭೆ ಅಧ್ಯಕ್ಷ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಕೇಂದ್ರ ಪಶುಸಂಗೋಪನೆ, ಮೀನುಗಾರಿಕೆ ಮತ್ತು ಹೈನುಗಾರಿಕೆ ಸಚಿವ ಸಂಜೀವ್ ಕುಮಾರ್ ಬಲ್ಯಾಣ್ ಅವರು ಇತ್ತೀಚೆಗೆ ಸಂಸತ್ತಿಗೆ ಹಾಜರಾಗಿರಲಿಲ್ಲ. ಆದ್ದರಿಂದ ಅವರನ್ನು ತಮ್ಮ ಬಳಿ ಕರೆಸಿಕೊಂಡು, ಈ ತಪ್ಪನ್ನು ಪುನರಾವರ್ತಿಸಬೇಡಿ, ಸಂಸತ್ತಿಗೆ ಗೈರು ಹಾಜರಾಗುವುದನ್ನು ನಾವು ಪ್ರೋತ್ಸಾಹಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.
ಸಂಸತ್ತಿನ ಕಾರ್ಯ, ಕಲಾಪಗಳಿಗೆ ಪ್ರತಿಯೊಬ್ಬ ಸಂಸದರೂ ಹಾಜರಿರಬೇಕು. ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ, ಬೇರೆ ಸಮಯಗಳಲ್ಲಿ ಅವರು ಕಡ್ಡಾಯವಾಗಿ ಹಾಜರಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಆದೇಶಿಸಿದ್ದಾರೆ.

ಪ್ರತಿ ದಿನ ಸಂಜೆ ಹಾಜರಿ ಪುಸ್ತಕವನ್ನು ತಮಗೆ ತೋರಿಸುವಂತೆಯೂ ಹೇಳಿದ್ದಾರೆ. ಅದ್ದರಿಂದ ಎಲ್ಲ ಸಂಸದರೂ ಸಂಸತ್ತಿನಲ್ಲಿ ಪ್ರತಿದಿನ ಹಾಜರಿರುತ್ತಿದ್ದಾರೆ.
ರಾಜ್ಯ ಸಭೆ ಅಧ್ಯಕ್ಷರ ಸೂಚನೆ ಬಗ್ಗೆ ಮಾತನಾಡಿದ ಸಂಜೀವ್ ಕುಮಾರ್ ಬಲ್ಯಾಣ್, ನಾನು ಹಾಜರಿರಬೇಕಿತ್ತು. ಮತ್ತೆ ಈ ತಪ್ಪು ಆಗದಂತೆ ನೋಡಿಕೊಳ್ಳುತ್ತೇನೆ ಎಂದರು.












Click it and Unblock the Notifications