ತರಾರ್ ಜೊತೆ ದುಬೈನಲ್ಲಿ 3 ರಾತ್ರಿ ಕಳೆದರೇ ತರೂರ್?
ನವದೆಹಲಿ, ಜ. 12: ಸುನಂದಾ ಪುಷ್ಕರ್ ಕೊಲೆ ಪ್ರಕರಣದ ತನಿಖೆಯಲ್ಲಿ ಪ್ರತಿದಿನ ಹೊಸ ಹೊಸ ವಿಷಯಗಳು ಹೊರಬರುತ್ತಿವೆ. ಈಗ ಬಂದಿರುವ ಆರೋಪ ಏನೆಂದರೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಪಾಕಿಸ್ತಾನಿ ಪತ್ರಕರ್ತೆ ಮೆಹರ್ ತರಾರ್ ಜೊತೆ ದುಬೈನಲ್ಲಿ ತಂಗಿದ್ದರು ಎಂಬುದು.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ, "ಶಶಿ ತರೂರ್ ಅವರು ಶಂಕಿತ ಐಎಸ್ಐ ಪರ ಪತ್ರಕರ್ತೆ ತರಾರ್ ಜೊತೆ ದುಬೈನಲ್ಲಿ ಮೂರು ರಾತ್ರಿಗಳನ್ನು ಕಳೆದಿದ್ದಾರೆ. ಆದರೆ, ಆ ಸಮಯದಲ್ಲಿ ತರೂರ್ ಅವರು ಓರ್ವ ಕೇಂದ್ರ ಸಚಿವರಾಗಿದ್ದರು" ಎಂದು ಹೇಳಿದ್ದಾರೆ. [ಸುನಂದಾ ದಾಂಪತ್ಯದಲ್ಲಿ ಕಲಹ ತಂದ ಕೇಟಿ]
ಕೆಲವು ಸುದ್ದಿ ಚಾನಲ್‌ಗಳಲ್ಲಿ ಶಶಿ ತರೂರ್ ಹಾಗೂ ಮೆಹರ್ ತರಾರ್ ಇಬ್ಬರೂ ದುಬೈನಲ್ಲಿ ಮೂರು ದಿನ ಕಳೆದಿದ್ದರು ಎಂಬುದಾಗಿ ಓರ್ವ ಸಾಕ್ಷಿ ಹೇಳಿದ್ದಾರೆ ಎಂದು ವರದಿಯಾದ ನಂತರ ಸುಬ್ರಮಣಿಯನ್ ಸ್ವಾಮಿ ಈ ಪ್ರತಿಕ್ರಿಯೆ ನೀಡಿರುವುದು ಮಹತ್ವ ಪಡೆದಿದೆ. [ಸುನಂದಾ ಹತ್ಯೆ, ಇನ್ನಷ್ಟು ನಿಗೂಢ ಹೆಸರು ಬಯಲು]

ನವದೆಹಲಿ ಪೊಲೀಸ್ ಆಯುಕ್ತ ಬಿ.ಎಸ್. ಬಸ್ಸಿ ಪ್ರತಿಕ್ರಿಯಿಸಿ, "ತರೂರ್ ಅವರು ನವದೆಹಲಿಯಲ್ಲಿರುವುದು ನಮಗೆ ತಿಳಿಸಿದೆ. ನಮ್ಮ ವಿಶೇಷ ತನಿಖಾ ದಳವು ಅಗತ್ಯಬಿದ್ದರೆ ಅವರನ್ನು ವಿಚಾರಣೆಗೆ ಕರೆಯಲಿದೆ" ಎಂದು ತಿಳಿಸಿದ್ದಾರೆ. [ಸುನಂದಾ ಸಾಯುವ ಮೊದಲು ಭೇಟಿಯಾಗಿದ್ದ ಸುನಿಲ್ ಯಾರು]
When Tharoor allegedly spent three night with suspected ISI compliant journalist Tarar, he was India's Union Minister. That is like Profumo
— Subramanian Swamy (@Swamy39) January 12, 2015 "ಪಾಕಿಸ್ತಾನಿ ಪತ್ರಕರ್ತೆ ಮೆಹರ್ ತರಾರ್ ಅವರು ತರೂರ್ ಜೊತೆ ಸ್ನೇಹ ಸಂಬಂಧ ಹೊಂದಿದ್ದರು. ಇದೇ ಸುನಂದಾ ಪುಷ್ಕರ್ ಅಸಮಾಧಾನಕ್ಕೆ ಕಾರಣವಾಗಿತ್ತು ಎಂಬ ಅನುಮಾನವಿದೆ. ಆದ್ದರಿಂದ ಮೆಹರ್ ತರಾರ್ ಅವರನ್ನೂ ಪ್ರಶ್ನಿಸುವ ಯೋಚನೆಯಿದೆ" ಎಂದು ತಿಳಿಸಿದ್ದಾರೆ. [ಶಶಿ ಸುನಂದಾ ಮೆಹರ್ ಪ್ರೇಮ ಪ್ರಸಂಗ]
ಇಷ್ಟು ದಿನ ಕೇರಳದಲ್ಲಿ ಆಯುರ್ವೇದಿಕ್ ಚಿಕಿತ್ಸೆ ಪಡೆಯುತ್ತಿದ್ದ ತರೂರ್ ಅವರು ನವದೆಹಲಿಗೆ ಭಾನುವಾರವಷ್ಟೇ ಆಗಮಿಸಿದ್ದಾರೆ. ಆದರೆ, ಪತ್ರಕರ್ತರ ಯಾವುದೇ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ.












Click it and Unblock the Notifications