ಮೋದಿ ಶಿವಲಿಂಗದ ಮೇಲಿನ ಚೇಳು ಹೇಳಿಕೆ: ತರೂರ್ ಗೆ ಜಾಮೀನು

ನವದೆಹಲಿ, ಜೂನ್ 07: ಕಳೆದ ಅಕ್ಟೋಬರ್ ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಮುಖಂಡ ಶಶಿ ತರೂರ್, "ನರೇಂದ್ರ ಮೋದಿ ಶಿವಲಿಂಗದ ಮೇಲಿರುವ ಚೇಳಿನ ಹಾಗೆ" ಎಂಬ ಹೇಳಿಕೆ ನೀಡಿದ್ದರು. ಈ ಕುರಿತು ಅವರ ವಿರುದ್ಧ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಶಶಿ ತರೂರ್ ಅವರಿಗೆ ದೆಹಲಿಯ ನ್ಯಾಯಾಲಯವೊಂದು ಜಾಮೀನು ನೀಡಿದೆ.

20000 ರೂ.ಗಳ ಮುಚ್ಚಳಿಕೆಯೊಂದಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದ್ದು, ತರೂರ್ ವಿರುದ್ಧ ಬಿಜೆಪಿ ಮುಖಂಡ ರಾಜೀವ್ ಬಬ್ಬರ್ ಪ್ರಕರಣ ದಾಖಲಿಸಿದ್ದರು.

Shashi Tharoor gets bail from Delhi court for his Scorpion remark on PM Modi

ಕಳೆದ ವರ್ಷ ಅಕ್ಟೋಬರ್ ನಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಶಶಿ ತರೂರ್, 'ಪ್ರಧಾನಿ ನರೇಂದ್ರ ಮೋದಿ ಅವರು ಶಿವಲಿಂಗದ ಮೇಲಿರುವ ಚೇಳಿನ ಹಾಗೆ. ಬರಿ ಕೈಯಿಂದ ಅದನ್ನು ಸರಿಸುವುದಕ್ಕೂ ಆಗುವುದಿಲ್ಲ. ಚಪ್ಪಲಿಯಿಂದ ಹೊಡೆಯಲೂ ಸಾಧ್ಯವಿಲ್ಲ' ಎಂಬ ಹೇಳಿಕೆ ನೀಡಿದ್ದರು. ಮೋದಿ ಅವರನ್ನು ನಿಯಂತ್ರಿಸಲಾಗದ ಆರೆಸ್ಸೆಸ್ ನಾಯಕರೇ ಒಬ್ಬರು ಇಂಥ ಹೇಳಿಕೆ ನೀಡಿದ್ದರು ಎಂದು ತರೂರ್ ಹೇಳಿದ್ದರು.

ಈ ಹೇಳಿಕೆ ಆ ಸಮಯದಲ್ಲಿ ಭಾರೀ ವಿವಾದ ಸೃಷ್ಟಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+