ಹಿಂದಿ, ಹಿಂದು, ಹಿಂದುತ್ವ: ತರೂರ್ ಟ್ವೀಟಿಗೆ ಬಿಜೆಪಿ ತಕರಾರು
ನವದೆಹಲಿ, ಫೆಬ್ರವರಿ 01: ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರು ಗುರುವಾರ ಮಾಡಿದ ಟ್ವೀಟ್ ವೊಂದು ಇದೀಗ ಭಾರೀ ಚರ್ಚೆಗೆ ವಿಷಯವಾಗಿದೆ.
ಶಶಿ ತರೂರ್ ಅವರು ಹಿಂದುತ್ವದ ಕುರಿತು ಮಾಡಿದ ಟ್ವೀಟ್ ಕುರಿತು ಆಕ್ರೋಶ ವ್ಯಕ್ತಪಡಿಸಿದರು ಬಿಜೆಪಿ, 'ಕಾಂಗ್ರೆಸ್ ಮತ್ತು ಅದರ ನಾಯಕರು ಹಿಂದುತ್ವಕ್ಕೆ ಅವಮಾನ ಮಾಡುತ್ತಿದ್ದಾರೆ' ಎಂದು ದೂರಿದೆ.
ಗುರುವಾರ ಟ್ವೀಟ್ ಮಾಡಿದ್ದ ತರೂರ್, "ಹಿಂದಿ, ಹಿಂದು, ಹಿಂದುತ್ವ ಸಿದ್ಧಾಂತವೇ ನಮ್ಮ ದೇಶವನ್ನು ವಿಭಜಿಸುತ್ತಿದೆ. ನಮಗೆ ಬೇಕಿರುವುದು ಒಗ್ಗಟ್ಟು, ಏಕರೂಪತೆಯಲ್ಲ" ಎಂದಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, "ಇಂದು ಶಶಿ ತರೂರ್ ಮಾಡಿದ ಟ್ವೀಟ್ ಖಂಡನಾರ್ಹ. ನಾವು ಅವರ ಟ್ವೀಟ್ ಅನ್ನು ಕಾಂಗ್ರೆಸ್ಸಿನ ಅಭಿಪ್ರಾಯ ಎಂದು ಭಾವಿಸುತ್ತೇವೆ. ಏಕೆಂದರೆ ಶಶಿ ತರೂರ್ ಮೇಲೆ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಎಲ್ಲಿಲ್ಲದ ಪ್ರೀತಿ. ತರೂರ್ ಏನನ್ನು ಹೇಳುತ್ತಾರೋ ಅದನ್ನು ಕಾಂಗ್ರೆಸ್ ಕೇಳುತ್ತದೆ" ಎಂದಿದ್ದರು.
"ಜನರಿಗೆ ಕಾಂಗ್ರೆಸ್ಸಿನ ನಿಜವಾದ ಮುಖ ಕಾಣಿಸುತ್ತಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ಸಿಗೆ ತಕ್ಕ ಉತ್ತರ ನೀಡಲಿದ್ದಾರೆ" ಎಂದಿದೆ.












Click it and Unblock the Notifications