• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೋನಿಯಾ, ರಾಹುಲ್ ಗಾಂಧಿ ಇಲ್ಲದೆ ಕಾಂಗ್ರೆಸ್ ಹಿರಿಯ ನಾಯಕರ ಸಭೆ!

|
   ದೆಹಲಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಸಭೆ | Oneindia Kannada

   ನವದೆಹಲಿ, ಜೂನ್ 13: ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರ ಸಭೆ ಎಂದರೆ ಅದರಲ್ಲಿ ಒಂದೋ ರಾಹುಲ್ ಗಾಂಧಿ ಇರಬೇಕು, ಇಲ್ಲವೇ ಸೋನಿಯಾ ಗಾಂಧಿ ಇರಬೇಕು, ಇಬ್ಬರೂ ಇಲ್ಲವೆಂದರೆ ಕಡೇ ಪಕ್ಷ ಪ್ರಿಯಾಂಕಾ ಗಾಂಧಿ ಅವರಾದರೂ ಇರಬೇಕು ಎಂಬಂಥ ಅಭಿಪ್ರಾಯ ಇಂದಿಗೂ ಕಾಂಗ್ರೆಸ್ ನಲ್ಲಿದೆ.

   ಆದರೆ ಎಷ್ಟೋ ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ... ಒಟ್ಟಿನಲ್ಲಿ ಗಾಂಧಿ ಕುಟುಂಬದ ಯಾರೂ ಹಾಜರಾಗದ ಸಭೆಯೊಂದನ್ನು ಕಾಂಗ್ರೆಸ್ ಹಿರಿಯ ನಾಯಕರು ನಡೆಸಿದರು. ಈ ಸಭೆ ದೇಶದಾದ್ಯಂತ ಕುತೂಹಲ ಸೃಷ್ಟಿಸಿತ್ತು.

   ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಬಗ್ಗೆ ವಕ್ತಾರರಿಂದ ಮಹತ್ವದ ಹೇಳಿಕೆ

   ಆದರೆ ಈ ಸಭೆಯನ್ನು ಗಾಂಧಿ ಕುಟುಂಬದ ವಿರುದ್ಧವಾಗಲೀ, ಕಾಂಗ್ರೆಸ್ ನಾಯಕತ್ವ ಬದಲಾವಣೆಯ ಬಗ್ಗೆಯಾಗಲೀ ನಡೆಸಿಲ್ಲ. ಅಸಲಿ ವಿಷಯವೆಂದರೆ ಬುಧವಾರ ಸಭೆ ಮೊದಲೇ ನಿಗದಿಯಾಗಿತ್ತಾದರೂ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರೂ ರಾಯ್ಬರೇಲಿಗೆ ತೆರಳಿದ್ದರಿಂದ ಅವರಿಬ್ಬರೂ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ರಾಹುಲ್ ಗಾಂಧಿ ವೈಯಕ್ತಿಕ ಕಾರಣಗಳಿಂದ ಸಭೆಗೆ ಹಾಜರಾಗಿರಲಿಲ್ಲ.

   ಸಭೆಯಲ್ಲಿ, ಅಧ್ಯಕ್ಷ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂಬ ಮಾತಿಗೆ ಎಲ್ಲ ನಾಯಕರೂ ಒಕ್ಕೊರಲಿನಿಂದ ತಲೆಯಾಡಿಸಿದರು ಎನ್ನಲಾಗಿದೆ. ಕಾಂಗ್ರೆಸ್ ನ ಹಿರಿಯ ನಾಯಕ ಎಕೆ ಆಂಟನಿ ಅವರೇ ಈ ಸಭೆಯ ಮುಂದಾಳತ್ವ ವಹಿಸಿದ್ದರು ಎನ್ನಲಾಗಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಸೇರಿದಂತೆ ಪ್ರಮುಖರು ಸಭೆಯಲ್ಲಿ ಹಾಜರಿದ್ದರು.

   English summary
   After many years senior Congress leaders hold meeting in Delhi without party president Rahul gandhi and Sonia Gandhi.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X