ಪ.ಬಂಗಾಳ; ಐವರು ಬಿಜೆಪಿ ನಾಯಕರಿಗೆ ರಿಲೀಫ್ ಕೊಟ್ಟ ಸುಪ್ರೀಂ ಕೋರ್ಟ್

ಕೋಲ್ಕತ್ತಾ, ಡಿಸೆಂಬರ್ 18: ಕ್ರಿಮಿನಲ್ ಪ್ರಕರಣದಲ್ಲಿದ್ದ ಐವರು ಬಿಜೆಪಿ ನಾಯಕರ ಮೇಲೆ ಮುಂದಿನ ವಿಚಾರಣೆವರೆಗೂ ಯಾವುದೇ ಕ್ರಮ ಕೈಗೊಳ್ಳದಂತೆ ಪಶ್ಚಿಮ ಬಂಗಾಳ ಪೊಲೀಸರಿಗೆ ಸೂಚಿಸುವ ಮೂಲಕ ಸುಪ್ರೀಂ ಕೋರ್ಟ್ ಅವರಿಗೆ ರಿಲೀಫ್ ನೀಡಿದೆ.

ಬಿಜೆಪಿಯ ಅರ್ಜುನ್ ಸಿಂಗ್, ಕೈಲಾಶ್ ವಿಜಯ್ ವರ್ಗೀಯ, ಪವನ್ ಸಿಂಗ್, ಸೌರವ್ ಸಿಂಗ್, ಮುಕುಲ್ ರಾಯ್ ಹಾಗೂ ಕಬೀರ್ ಶಂಕರ್ ಬೋಸ್, ತಮ್ಮ ಮೇಲಿನ ಪ್ರಕರಣಗಳನ್ನು ಸ್ವತಂತ್ರ ತನಿಖಾ ಏಜೆನ್ಸಿಗೆ ವರ್ಗಾಯಿಸುವಂತೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಈ ಅರ್ಜಿಗಳನ್ನು ಕೈಗೆತ್ತಿಕೊಂಡ ನ್ಯಾಯಾಲಯ, ಇವರ ಮೇಲೆ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳದಂತೆ ತಿಳಿಸಿದೆ.

ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ನ್ಯಾಯಪೀಠ ಈ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿ, ಜನವರಿ 2ನೇ ವಾರಕ್ಕೆ ವಿಚಾರಣೆ ಮುಂದೂಡಿದೆ.

SC Says No Action Should Be Taken Against BJP Leaders Till Next Hearing

"ರಾಜಕೀಯ ಚಟುವಟಿಕೆಗಳಿಂದ ನಮ್ಮನ್ನು ದೂರವಿಡಲು ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಈ ಎಲ್ಲಾ 64 ಪ್ರಕರಣಗಳು 2019ರದ್ದು. ಟಿಎಂಸಿ ಬಿಟ್ಟ ನಂತರ ಇವು ದಾಖಲಾಗಿವೆ" ಎಂದು ಅರ್ಜುನ್ ಸಿಂಗ್ ಅರ್ಜಿಯಲ್ಲಿ ತಿಳಿಸಿದ್ದರು. "ನಾನು ಪ. ಬಂಗಾಳದಲ್ಲೇ ಇಲ್ಲ. ಮಧ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದೇನೆ. ನಾನು ಇಲ್ಲಿಗೆ ಭೇಟಿ ನೀಡುವುದನ್ನು ತಪ್ಪಿಸಲು ಈ ರೀತಿ ಸಣ್ಣ ಪುಟ್ಟ ವಿಷಯಕ್ಕೂ ಪ್ರಕರಣ ದಾಖಲಿಸಲಾಗಿದೆ" ಎಂದು ಕೈಲಾಶ್ ವಿಜಯ್ ವರ್ಗಿಯಾ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳನ್ನು ತನಿಖಾ ಏಜೆನ್ಸಿಗೆ ವರ್ಗಾವಣೆ ಮಾಡುವಂತೆ ಕೋರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+