ಕರ್ನಾಟಕದ ರೆಬೆಲ್ ಶಾಸಕರಿಗೆ ಖಡಕ್ ಆದೇಶ ಕೊಟ್ಟ ಸುಪ್ರೀಂಕೋರ್ಟ್

ನವದೆಹಲಿ, ಜುಲೈ 11: ಕರ್ನಾಟಕದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಅಸ್ತಿತ್ವ ಹಾಗೂ ಬಿಜೆಪಿಯ ಹೊಸ ಸರ್ಕಾರ ಉದಯಕ್ಕೆ ನಿರ್ಣಾಯಕವಾಗಬಲ್ಲ ನಿರ್ಣಯವನ್ನು ತೆಗೆದುಕೊಂಡಿರುವ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಮುಂದೆ ಖುದ್ದು ಹಾಜರಾಗುವಂತೆ ರೆಬೆಲ್ ಶಾಸಕರಿಗೆ ಸುಪ್ರೀಂಕೋರ್ಟ್ ನ್ಯಾಯಪೀಠವು ಗುರುವಾರ(ಜುಲೈ 11)ದಂದು ಮಹತ್ವದ ಆದೇಶ ನೀಡಿದೆ.

ರಾಜೀನಾಮೆ ಅಂಗೀಕಾರ ಮಾಡದೆ ವಿಳಂಬ ಮಾಡುತ್ತಿರುವ ಸ್ಪೀಕರ್ ವಿರುದ್ಧ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್ ಅವರಿದ್ದ ನ್ಯಾಯಪೀಠವು, ಅತೃಪ್ತರ ಪರ ವಕೀಲರಾದ ಮುಕುಲ್ ರೊಹಟಗಿ ಅವರ ವಾದ ಆಲಿಸಿ, ಅಜಿ ವಿಚಾರಣೆಯನ್ನು ಜುಲೈ 12ಕ್ಕೆ ಮುಂದೂಡಿದೆ.

ಕ್ರಮಬದ್ಧವಾದ ರಾಜೀನಾಮೆಗಳನ್ನು ಕೂಡಾ ಸ್ಪೀಕರ್ ರಮೇಶ್ ಕುಮಾರ್ ಅವರು ಅಂಗೀಕರಿಸಿಲ್ಲ, ಉಳಿದ ರಾಜೀನಾಮೆಗಳನ್ನು ತಿರಸ್ಕರಿಸಲು ಸೂಕ್ತ ಕಾರಣ ಕೂಡಾ ನೀಡದೆ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಆರೋಪಿಸಿ ರಮೇಶ್ ಕುಮಾರ್ ವಿರುದ್ಧ ಅತೃಪ್ತ ಶಾಸಕರು, ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ಸ್ಪೀಕರ್ ರಮೇಶ್ ಮುಂದಿರುವ 7 ಆಯ್ಕೆಗಳು
13 ಶಾಸಕರ ರಾಜೀನಾಮೆಯನ್ನು ಪರಿಶೀಲಿಸಿದ್ದು, ಈ ಪೈಕಿ 8 ಶಾಸಕರದ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂದು ರಮೇಶ್ ಕುಮಾರ್ ಅವರು ಹೇಳಿರುವುದು ಭಿನ್ನಮತೀಯ ಶಾಸಕರಿಗೆ ಅಸಮಾಧಾನ ಉಂಟು ಮಾಡಿತ್ತು.

ನ್ಯಾಯಪೀಠದ ಆದೇಶದ ಮುಖ್ಯಾಂಶ

ನ್ಯಾಯಪೀಠದ ಆದೇಶದ ಮುಖ್ಯಾಂಶ

* ಅತೃಪ್ತ ಶಾಸಕರು ಗುರುವಾರ(ಜುಲೈ 11) ಸಂಜೆ 6 ಗಂಟೆಯೊಳಗೆ ಕರ್ನಾಟಕ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಮುಂದೆ ಖುದ್ದು ಹಾಜರಾಗಬೇಕು.
* ಕ್ರಮಬದ್ಧವಲ್ಲದ ರಾಜೀನಾಮೆ ಸಲ್ಲಿಸಿದವರು, ಖುದ್ದು ಹಾಜರಾದ ವೇಳೆಯಲ್ಲಿ ಮತ್ತೊಮ್ಮೆ ರಾಜೀನಾಮೆ ನೀಡಬಹುದು. ಈ ಸಂದರ್ಭದಲ್ಲಿ ಶಾಸಕರು ಹಾಗೂ ಸ್ಪೀಕರ್ ಗೆ ಭದ್ರತೆ ಒದಗಿಸುವಂತೆ ಕರ್ನಾಟಕ ಪೊಲೀಸರಿಗೆ ಸೂಚನೆ.
* 10 ಶಾಸಕರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ ಎಂದ ಮುಕುಲ್ ರೋಹಟಗಿ ಅವರು ಇಂದಿನ ವಿಚಾರಣೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಬಲವಂತವಾಗಿ ಅನರ್ಹಗೊಳಿಸಲು ಯತ್ನ ಎಂಬ ಆರೋಪ

ಬಲವಂತವಾಗಿ ಅನರ್ಹಗೊಳಿಸಲು ಯತ್ನ ಎಂಬ ಆರೋಪ

ಶಾಸಕರು ಸಲ್ಲಿಸಿದ್ದ ರಾಜೀನಾಮೆ ಸಲ್ಲಿಸಿದ್ದ ಕ್ರಮ ಸರಿಯಲ್ಲ ಎಂದು ಹೇಳಿ, ಬಲವಂತವಾಗಿ ಅನರ್ಹಗೊಳಿಸಲು ಯತ್ನಿಸಿದ್ದಾರೆ ಎಂದು ವಾದಿಸಿದ ಮುಕುಲ್ ರೋಹಟಗಿ. ಈ ಬಗ್ಗೆ ಜುಲೈ 12ರಂದು ವಿಚಾರಣೆ ನಡೆಯಲಿದೆ. ಇದಲ್ಲದೆ, ಸ್ಪೀಕರ್ ಮುಂದೆ ಹಾಜರಾದ ಬಳಿಕ, ರಾಜೀನಾಮೆ ಸ್ವೀಕರಿಸಿ, ಸ್ಪೀಕರ್ ನೀಡುವ ಪ್ರತಿಕ್ರಿಯೆಯನ್ನು ನಾಳೆ ದಿನ ವಿಚಾರಣೆ ವೇಳೆ ಕೋರ್ಟಿಗೆ ತಿಳಿಸಬೇಕಾಗುತ್ತದೆ.

ಯಾರ ರಾಜೀನಾಮೆ ಕ್ರಮಬದ್ಧವಾಗಿಲ್ಲ

ಯಾರ ರಾಜೀನಾಮೆ ಕ್ರಮಬದ್ಧವಾಗಿಲ್ಲ

ಯಾರ ರಾಜೀನಾಮೆ ಕ್ರಮಬದ್ಧವಾಗಿಲ್ಲ: ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್‌, ನಾರಾಯಣ ಗೌಡ, ರಾಮಲಿಂಗಾರೆಡ್ಡಿ, ಗೋಪಾಲಯ್ಯ ಅವರ ರಾಜೀನಾಮೆ ಪತ್ರ ಕ್ರಮಬದ್ಧವಾಗಿದ್ದು, ಉಳಿದ 8 ಜನ ಶಾಸಕರ ರಾಜೀನಾಮೆ ರೂಲ್ಸ್ 202ರ ಪ್ರಕಾರ ಕ್ರಮಬದ್ಧವಾಗಿಲ್ಲ.ಸಂವಿಧಾನ ಬದ್ಧವಾಗಿ ನಾನು ಕಾನೂನು ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳುತ್ತಿದ್ದೇನೆ. ಈ ಬಗ್ಗೆ ರಾಜ್ಯಪಾಲರಿಗೆ ಪತ್ರದ ಮೂಲಕ ತಿಳಿಸುತ್ತೇನೆ ಎಂದು ರಮೇಶ್ ಕುಮಾರ್ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಜುಲೈ 11ರಂದು 16 ಮಂದಿ ರಾಜೀನಾಮೆ ಬಳಿಕ

ಜುಲೈ 11ರಂದು 16 ಮಂದಿ ರಾಜೀನಾಮೆ ಬಳಿಕ

ಜುಲೈ 11ರಂದು 16 ಮಂದಿ ರಾಜೀನಾಮೆ ಬಳಿಕ ವಿಧಾನಸಭೆಯಲ್ಲಿ ಪಕ್ಷವಾರು ಬಲಾಬಲ:
ಒಟ್ಟು ಸದಸ್ಯ ಬಲ : 224
ಕಾಂಗ್ರೆಸ್ + ಜೆಡಿಎಸ್ : 118
ಮ್ಯಾಜಿಕ್ ನಂಬರ್ : 113
ಬಿಜೆಪಿ : 105
ಬಿಎಸ್ ಪಿ: 1 (ಎನ್ ಮಹೇಶ್)
ಪಕ್ಷೇತರ : 2 (ಎಚ್ ನಾಗೇಶ್, ಶಂಕರ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+