• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ನಾಟಕ ಸರ್ಕಾರಕ್ಕೆ 50 ಸಾವಿರ ದಂಡ ಹಾಕಿದ ಸುಪ್ರೀಂಕೋರ್ಟ್

|
Google Oneindia Kannada News

ನವದೆಹಲಿ, ಡಿಸೆಂಬರ್ 1: ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡದ ಸರ್ಕಾರಗಳಿಗೆ ಸುಪ್ರೀಂಕೋರ್ಟ್ 50 ಸಾವಿರ ರೂ ದಂಡ ವಿಧಿಸಿದೆ.

ಕರ್ನಾಟಕ ಸೇರಿ ಒಟ್ಟು 7 ರಾಜ್ಯಗಳಿಗೆ ಸುಪ್ರೀಂಕೋರ್ಟ್ 50 ಸಾವಿರ ರೂ ದಂಡ ವಿಧಿಸಿದೆ. ಜಸ್ಟೀಸ್ ಮದನ್ ಬಿ ಲೋಕುರ್ ಅವರಿದ್ದ ಪೀಠ ಕರ್ನಾಟಕ, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ಅಸ್ಸಾಂ, ಗೋವಾ ರಾಜ್ಯಗಳಿಗೆ ದಂಡ ವಿಧಿಸಿದೆ.

ರಾಜಸ್ಥಾನದಲ್ಲಿ ಶೇ. 50 ಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಇವೆ, ಗೋವಾದಲ್ಲಿ ಶೇ.60ರಷ್ಟು ಹುದ್ದೆಗಳು ಖಾಲಿ ಇವೆ, ಅಸ್ಸಾಂನಲ್ಲಿ ಶೇ.40, ಕರ್ನಾಟಕದಲ್ಲಿ ಶೇ.50, ಮಹಾರಾಷ್ಟ್ರದಲ್ಲಿ ಶೇ 50, ಒಡಿಶಾದಲ್ಲಿ ಶೇ 33 ರಷ್ಟು, ಉತ್ತರ ಪ್ರದೇಶದಲ್ಲಿ ಶೇ. 80 ರಷ್ಟು ಹುದ್ದೆಗಳು ಖಾಲಿ ಇವೆ.

ಈಗಾಗಲೇ ಖಾಲಿ ಇರುವ ಹುದ್ದೆಗಳ ಕುರಿತು ಸರ್ಕಾರಗಳಿಗೆ ಮಾಹಿತಿ ಸಲ್ಲಿಸಲು ತಿಳಿಸಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನಾಲ್ಕು ವಾರದೊಳಗಾಗಿ ಸುಪ್ರೀಂಕೋರ್ಟ್ ಲೀಗಲ್ ಸರ್ವೀಸಸ್ ಕಮಿಟಿಗೆ 50 ಸಾವಿರ ರೂ ಸಂದಾಯ ಮಾಡುವಂತೆ ಕೋರ್ಟ್ ಆದೇಶಿಸಿದೆ.

English summary
The Supreme court on Saturday imposed a fine of Rs 50 thousand each on state for not cooperating with the centre in filling up vacancies in Forensic science laboratory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X