ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಜೋಡಣೆ ಕುರಿತು ಸುಪ್ರೀಂ ಮಧ್ಯಂತರ ಆದೇಶ: ಮಾರ್ಚ್ 31 ಕೊನೇ ದಿನ

|
Google Oneindia Kannada News

ನವದೆಹಲಿ, ಡಿಸೆಂಬರ್ 15: ಎಲ್ಲಾ ಸೇವೆಗಳೊಂದಿಗೆ ಆಧಾರ್ ಸಂಖ್ಯೆ ಜೋಡಿಸುವ ದಿನಾಂಕವನ್ನು ಮಾರ್ಚ್ 31, 2018 ಕ್ಕೆ ಮುಂದೂಡಿ, ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.

ಬ್ಯಾಂಕ್ ಖಾತೆ ಜೊತೆ ಆಧಾರ್ ಜೋಡಣೆ ದಿನಾಂಕ ಮಾರ್ಚ್ 31ಕ್ಕೆ ಮುಂದೂಡಿಕೆಬ್ಯಾಂಕ್ ಖಾತೆ ಜೊತೆ ಆಧಾರ್ ಜೋಡಣೆ ದಿನಾಂಕ ಮಾರ್ಚ್ 31ಕ್ಕೆ ಮುಂದೂಡಿಕೆ

ಆಧಾರ್ ಸಂಖ್ಯೆಯನ್ನು ಬೇರೆ ಬೇರೆ ಸೇವೆಗಳಿಗೆ ಮತ್ತು ಸರ್ಕಾರಿ ಸೌಲಭ್ಯಗಳೊಂದಿಗೆ ಜೋಡಿಸಲು ಈಗಾಗಲೇ ಇದ್ದ ಡಿ.31 ರ ಗಡುವನ್ನು ವಿಸ್ತರಿಸಿ, ಮಾರ್ಚ್ 31 ರವರೆಗೆ ಕಾಲಾವಕಾಶ ನೀಡುವಂತೆ ಕೇಂದ್ರ ಸರ್ಕಾರ ಮಾಡಿದ್ದ ಮನವಿಗೆ ಸುಪ್ರೀಂ ಕೋರ್ಟ್ ಈ ಮೂಲಕ ಸ್ಪಂದಿಸಿದೆ. ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ವಿವಿಧ ಸೇವೆಗಳಿಗೆ ಆಧಾರ್ ಜೋಡಣೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.

SC extends Aadhaar linking to all services, schemes to March 31

ಆಧಾರ್ ಜೋಡಣೆಗೆ ಕುರಿತಂತೆ, ಕೇಂದ್ರ ಸರ್ಕಾರದ ಮನವಿಯನ್ನು ಇಂದು(ಡಿ.15) ಪರಿಗಣಿಸಿದ ಸುಪ್ರೀಂ ಕೋರ್ಟ್ ಮಾರ್ಚ್ 31 ರವರೆಗೆ ಕಾಲಾವಕಾಶ ನೀಡಿದೆ.

ಆಧಾರ್ ಜೋಡಣೆ ಮಾರ್ಚ್ 31ಕ್ಕೆ ಮುಂದೂಡಿಕೆ? ಷರತ್ತುಗಳು ಅನ್ವಯ!ಆಧಾರ್ ಜೋಡಣೆ ಮಾರ್ಚ್ 31ಕ್ಕೆ ಮುಂದೂಡಿಕೆ? ಷರತ್ತುಗಳು ಅನ್ವಯ!

ಬ್ಯಾಂಕ್ ಖಾತೆ, ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದಕ್ಕೆ ಆಧಾರ್ ಸಂಖ್ಯೆಯನ್ನು ಜೋಡಿಸಲು ಮಾರ್ಚ್ 31 ಕಡೆಯ ದಿನಾಂಕವಾಗಿದೆ. ಸದ್ಯಕ್ಕೆ ಕೇವಲ ಮಧ್ಯಂತರ ಆದೇಶವನ್ನಷ್ಟೇ ನೀಡಿರುವ ಸುಪ್ರೀ, ಜನರವರಿಯಲ್ಲಿ ಮತ್ತೆ ಈ ಕುರಿತು ವಿಚಾರಣೆ ನಡೆಸಲಿದೆ. ಕಾಸಗಿ ತನದ ಹಕ್ಕಿಗೆ ಸಂಬಂಧಿಸಿದಂತೆ ಎದ್ದಿರುವ ಕೂಗಿನ ಕುರಿತು ಆ ಸಮಯದಲ್ಲಿ ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠ ವಿಚಅರಣೆ ನಡೆಸಲಿದ್ದು, ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ ನೀಡಬೇಕೇ ಬೇಡವೆ ಎಂಬ ಕುರಿತು ಆ ಸಮಯದಲ್ಲಿ ಚರ್ಚೆ ನಡೆಯಲಿದೆ.

English summary
The Supreme Court has extended the deadline to link Aadhaar with all services to March 31 2018. The court passed this interim order while agreeing to the submissions made by the Centre in which it had said that the new deadline would be March 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X