ಇವಿಎಂ ಜೊತೆ ಶೇ.100 ವಿವಿಪ್ಯಾಟ್ ತಾಳೆ, ಅಗತ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ನವದೆಹಲಿ, ಮೇ 21: ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶದ ನಂತರ 100 ಪ್ರತಿಶತ ವಿವಿಪ್ಯಾಟ್ ಗಳನ್ನು ಇವಿಎಂ ಜೊತೆ ತಾಳೆ ಮಾಡಬೇಕು ಎಂದು ತಂತ್ರಜ್ಞರ ತಂಡವೊಂದು ಹೂಡಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

"ಇವಿಎಂ(ವಿದ್ಯುನ್ಮಾನ ಮತಯಂತ್ರ) ಮತ್ತು ವಿವಿಪ್ಯಾಟ್ (ಮತ ಖಾತ್ರಿ ಯಂತ್ರ)ಗಳನ್ನು ಶೇ.100 ರಷ್ಟು ತಾಳೆ ಮಾಡುವ ಅಗತ್ಯವಿಲ್ಲ. ಜನರ ಆಯ್ಕೆಯನ್ನು ಅನುಮಾನಿಸುವುದಕ್ಕೆ ಸಾಧ್ಯವಿಲ್ಲ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶದಲ್ಲಿ ಮತ್ತೊಮ್ಮೆ ಎನ್ ಡಿಎ ಸರ್ಕಾರವೇ ಅಧಿಕಾರಕ್ಕೆ ಬರುವುದು ಖಚಿತವಾದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳೂ ಇವಿಎಂ ಮತ್ತು ವಿವಿಪ್ಯಾಟ್ ಬಗ್ಗೆ ಕ್ಯಾತೆ ತೆಗೆದಿವೆ. ಶೇ.50 ರಷ್ಟು ವಿವಿಪ್ಯಾಟ್ ಸ್ಲಿಪ್ ಗಳನ್ನು ಲೆಕ್ಕ ಮಾಡುವುದಕ್ಕೆ ಅನುಮತಿ ನೀಡಬೇಕು ಎಂದು ವಿಪಕ್ಷಗಳು ಮಾಡಿದ್ದ ಮನವಿಯನ್ನೂ ಚುನಾವಣಾ ಆಯೋಗ ತಿರಸ್ಕರಿಸಿತ್ತು. ಈಗಾಗಲೇ ಶೇ.5 ರಷ್ಟು ವಿವಿಪ್ಯಾಟ್ ಗಳನ್ನು ಇವಿಎಂ ಜೊತೆ ತಾಳೆ ಮಾಡಲಾಗುತ್ತಿದ್ದು, ಅದರಿಂದಲೇ ಫಲಿತಾಂಶ ಸುಮಾರು ಒಂದು ದಿನ ತಡವಾಗಿ ಬರಬಹುದು ಎನ್ನಲಾಗಿದೆ. ಶೇ.50 ರಷ್ಟನ್ನು ಲೆಕ್ಕ ಮಾಡುತ್ತ ಕೂತರೆ ಫಲಿತಾಂಶ ಪ್ರಕಟವಾಗುವುದಕ್ಕೆ ಹಲವು ದಿನೇ ಬೇಕಾಗಬಹುದು ಎಂದು ಚುನಾವಣಾ ಆಯೋಗ ಹೇಳಿದೆ. ಅದೂ ಅಲ್ಲದೆ ಇವಿಎಂ ಕಾರ್ಯದಕ್ಷತೆಯ ಬಗ್ಗೆ ಯಾವುದೇ ಅನುಮಾನವಿಲ್ಲದ ಕಾರಣ ವಿವಿಪ್ಯಾಟ್ ತಾಳೆ ಮಾಡುವ ಅಗತ್ಯವಿಲ್ಲ ಎಂದು ಅದು ಹೇಳಿದೆ.

SC dismisses plea seeking 100 percent matching od VVPAT with EVMs

ಲೋಕಸಭೆ ಚುನಾವಣೆ ಏಪ್ರಿಲ್ 11 ರಿಂದ ಮೇ 19 ರವರೆಗೆ ಏಳು ಹಂತಗಳಲ್ಲಿ ನಡೆದಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+