ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಹೈಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ ಯಾರು?

|
Google Oneindia Kannada News

ನವದೆಹಲಿ ಮೇ 17: ದೆಹಲಿ ಹೈಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ಹೆಸರನ್ನು ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.

ಪ್ರಸ್ತುತ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

1984ರ ನವೆಂಬರ್‌ 30ರಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಜನಸಿದ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ, ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ. 1993ರ ಮೇ 28ರಂದು ಕೇಂದ್ರ ಸರಕಾರದ ಹೆಚ್ಚುವರಿ ವಕೀಲರಾಗಿ ಇವರು ನೇಮಕಗೊಂಡರು.

SC Collegium Recommends Satish Chandra Sharma As New CJI Of Delhi High Court

2004ರ ಜೂನ್‌ 28ರಂದು ಭಾರತ ಸರಕಾರದ ಹಿರಿಯ ವಕೀಲರ ಮಂಡಳಿಗೆ ಇವರನ್ನು ನೇಮಿಸಲಾಯಿತು. 42 ನೇ ವಯಸ್ಸಿನಲ್ಲಿ ಅವರನ್ನು ಹಿರಿಯ ವಕೀಲರಾಗಿ ಮಧ್ಯಪ್ರದೇಶ ಹೈಕೋರ್ಟ್ 2003ರಲ್ಲಿ ನೇಮಿಸಿತು. ಮಧ್ಯಪ್ರದೇಶ ಹೈಕೋರ್ಟ್‌ನ ಅತ್ಯಂತ ಕಿರಿಯ ವಯಸ್ಸಿನ ಹಿರಿಯ ವಕೀಲರು ಎನಿಸಿಕೊಂಡರು.

ನಂತರ 2008ರ ಜನವರಿ 18ರಂದು ಅವರನ್ನು ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಳಿಸಲಾಯಿತು. ನಂತರ 2010ರ ಜನವರಿ 15ರಂದು ಕಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು.

SC Collegium Recommends Satish Chandra Sharma As New CJI Of Delhi High Court

ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾಯಮೂರ್ತಿ ಡಿ. ಎನ್‌. ಪಟೇಲ್‌ ಮಾರ್ಚ್‌ನಲ್ಲಿ ನಿವೃತ್ತರಾದರು. ಸದ್ಯ ಪ್ರಭಾರಿ ಮುಖ್ಯ ನ್ಯಾಯಮೂರ್ತಿಗಳಾಗಿ ನ್ಯಾಯಮೂರ್ತಿ ವಿಪಿನ್‌ ಸಂಘಿ ಕಾರ್ಯ ನಿರ್ವಹಿಸುತ್ತಿದ್ದಾರೆ.

English summary
Supreme Court Collegium recommends Satish Chandra Sharma as new chief justice of Delhi High court following the retirement of Justice D. N. Patel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X