ಬಿಜೆಪಿ ಎಎಪಿ ನಡುವೆ ವಾಕ್ ಸಮರ: ಬಿಜೆಪಿ ಸೇರಲು 5 ಕೋಟಿ ರೂ. ಆಫರ್- ಎಎಪಿ ವಕ್ತಾರ ಸೌರಭ್ ಆರೋಪ
ಆಮ್ ಆದ್ಮಿ ಪಕ್ಷ (ಎಎಪಿ) ಮಂಗಳವಾರ ಮತ್ತೆ ಬಿಜೆಪಿ ತಮ್ಮ ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ. ಎಎಪಿ ವಕ್ತಾರ ಸೌರಭ್ ಭಾರದ್ವಾಜ್ ಅವರು, ಆಪ್ ಶಾಸಕರಿಗೆ ಪಕ್ಷ ತೊರೆದು ಬಿಜೆಪಿ ಸೇರಲು ಬಿಜೆಪಿ 5 ಕೋಟಿ ರೂ. ಆಫರ್ ನೀಡಿದೆ ಎಂದು ದೂರಿದ್ದಾರೆ.
ಜನಾದೇಶಕ್ಕೆ ದ್ರೋಹ ಬಗೆದ ಬಿಜೆಪಿ ರಾಜ್ಯ ಸರ್ಕಾರಗಳು ಮತ್ತು ಮೈತ್ರಿಕೂಟಗಳನ್ನು ಉರುಳಿಸುವ ಮೂಲಕ ಆಪರೇಷನ್ ಕಮಲವನ್ನು ಸ್ಥಾಪಿಸುತ್ತಿದೆ ಎಂದು ಭಾರದ್ವಾಜ್ ಹೇಳಿದರು. ಕಳೆದ ವರ್ಷ ನವೆಂಬರ್‌ನಲ್ಲಿ ಜಾರಿಗೆ ತಂದಿದ್ದ ಹೊಸ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐನಿಂದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತನಿಖೆಯನ್ನು ಎದುರಿಸುತ್ತಿದ್ದಾರೆ.
ಆಮ್ ಆದ್ಮಿ ಪಕ್ಷವನ್ನು ತೊರೆದು ತಮ್ಮ ಪಕ್ಷಕ್ಕೆ ಸೇರಿಕೊಳ್ಳುವಂತೆ ಬಿಜೆಪಿಯಿಂದ ಸಂದೇಶ ಬಂದಿದೆ. ಒಂದು ವೇಳೆ ಪಕ್ಷಕ್ಕೆ ಸೇರಿಕೊಂಡರೆ, ಅವರ ವಿರುದ್ಧದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಎಲ್ಲಾ ಪ್ರಕರಣಗಳನ್ನು ತೆಗೆದುಹಾಕುವುದಾಗಿ ಹೇಳಿದ್ದಾರೆ ಎಂದು ಮನೀಶ್ ಆರೋಪಿಸಿದ್ದಾರೆ.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರುವಂತೆ ನೀಡಿದ್ದ ಆಫರ್ ಆಡಿಯೋ ರೆಕಾರ್ಡಿಂಗ್ ಅನ್ನು ಹೊಂದಿದ್ದು, ಇದರಲ್ಲಿ ಸಿಸೋಡಿಯಾ ಪಕ್ಷವನ್ನು ಬದಲಾಯಿಸಿದರೆ, ಅವರ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ಹೇಳಿರುವ ಮಾತುಗಳಿವೆ ಎಂದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಮೂಲಗಳು ಸೋಮವಾರ ಈ ಮಾಹಿತಿಯನ್ನು ನೀಡಿವೆ. "ಸಮಯ ಬಂದಾಗ" ಎಎಪಿ ಆಡಿಯೋ ರೆಕಾರ್ಡಿಂಗ್ ಅನ್ನು ಸಾರ್ವಜನಿಕಗೊಳಿಸುತ್ತದೆ ಎಂದೂ ಹೇಳಲಾಗಿದೆ.

"ಬಿಜೆಪಿಯ ಕೊಟ್ಟಿದ್ದ ಪ್ರಸ್ತಾಪದ ಆಡಿಯೋ ರೆಕಾರ್ಡಿಂಗ್ ನಮ್ಮ ಬಳಿ ಇದೆ ಮತ್ತು ಸಮಯ ಬಂದಾಗ, ಕೇಸರಿ ಪಕ್ಷವನ್ನು ಬಹಿರಂಗಪಡಿಸಲು ನಾವು ಅದನ್ನು ಸಾರ್ವಜನಿಕಗೊಳಿಸುತ್ತೇವೆ" ಎಂದಿದೆ. ಎಎಪಿ ನಾಯಕರು ಸಿಸೋಡಿಯಾ ಅವರ ಈ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಹೀಗಿದ್ದರೂ ಆ ನಾಯಕರಾಗಲೀ, ಉಪ ಮುಖ್ಯಮಂತ್ರಿಯಾಗಲೀ ಇಂತಹುದ್ದೊಂದು ಆಫರ್ ಮುಂದಿಟ್ಟ ಬಿಜೆಪಿ ನಾಯಕನ ಹೆಸರನ್ನು ಬಹಿರಂಗಗೊಳಿಸಿಲ್ಲ.

ಹೀಗಿದ್ದರೂ ಪತ್ರಿಕಾಗೋಷ್ಠಿಯಲ್ಲಿ ಎಎಪಿಯ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಸಿಸೋಡಿಯಾ ಅವರ ಮೊಬೈಲ್ ಫೋನ್ ಅನ್ನು ಸಿಬಿಐ ವಶಪಡಿಸಿಕೊಂಡ ಅವರು ಬಿಜೆಪಿಯ 'ಆಫರ್'ನ್ನು ಹೇಗೆ ರೆಕಾರ್ಡ್ ಮಾಡಲು ಯಶಸ್ವಿಯಾದರು ಎಂಬ ನೇರ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗಿಲ್ಲ.
ಆದರೂ "ರೆಕಾರ್ಡ್ ಮಾಡಲು ಕೇವಲ ಫೋನ್ ಮಾತ್ರ ಮಾಧ್ಯಮವೇ? ಬಿಜೆಪಿ ನಾಯಕರು ಇಂತಹ ಕೆಲಸಗಳಿಗೆ ಯಾವ ಮಾಧ್ಯಮ ಬಳಸುತ್ತಾರೋ ಗೊತ್ತಿಲ್ಲ? ಇಂತಹ ಕಾರ್ಯಗಳಿಗಾಗಿ ಬಿಜೆಪಿ ಎಲ್ಲಾ ರೀತಿಯ ಗಿಮಿಕ್‌ಗಳು, ಸಾಧನಗಳು ಮತ್ತು ಫೋನ್‌ಗಳು, ಸಂದೇಶವಾಹಕರು, ಸಭೆಗಳಂತಹ ಸಾಧನಗಳನ್ನು ಬಳಸುತ್ತದೆ" ಎಂದೂ ಸಿಂಗ್ ಕಿಡಿ ಕಾರಿದ್ದಾರೆ.
ಮನೀಶ್ ಸಿಸೋಡಿಯಾ ಆರೋಪ:
'ಎಎಪಿ ತೊರೆದು, ಬಿಜೆಪಿಗೆ ಸೇರಿದರೆ, ಎಲ್ಲಾ ಪ್ರಕರಣಗಳನ್ನು ಮುಚ್ಚಿಹಾಕುತ್ತೆವೆ ಎಂದು ಬಿಜೆಪಿಯಿಂದ ಸಂದೇಶ ಬಂದಿದೆ' ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.
ದೆಹಲಿ ಮದ್ಯದ ನೀತಿ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದ್ದು, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಈ ಬೆನ್ನಲ್ಲೇ ಆಮ್ ಆದ್ಮಿ ಪಕ್ಷವನ್ನು ತೊರೆದು ತಮ್ಮೊಂದಿಗೆ ಸೇರಿಕೊಳ್ಳುವಂತೆ ಬಿಜೆಪಿಯಿಂದ ಸಂದೇಶ ಬಂದಿದೆ ಎಂದು ಹೇಳಿದ್ದಾರೆ. ಬಿಜೆಪಿ ಸೇರಿದರೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಲ್ಲಿ ಅವರ ವಿರುದ್ಧ ಇರುವ ಎಲ್ಲಾ ಪ್ರಕರಣಗಳನ್ನು ಮುಕ್ತಾಯಗೊಳಿಸುವುದಾಗಿ ತಿಳಿಸಿದೆ ಎಂದು ಆರೋಪಿಸಿದ್ದಾರೆ.
"ಬಿಜೆಪಿಗೆ ನನ್ನ ಉತ್ತರ- ನಾನು ಮಹಾರಾಣಾ ಪ್ರತಾಪ್‌ನ ವಂಶಸ್ಥ, ನಾನು ರಜಪೂತ. ನನ್ನ ತಲೆಯನ್ನು ಬೇಕಾದರೇ ಕತ್ತರಿಸಿಕೊಳ್ಳುತ್ತೇನೆ. ಆದರೆ, ಭ್ರಷ್ಟ-ಪಿತೂರಿಗಾರರ ಮುಂದೆ ತಲೆಬಾಗುವುದಿಲ್ಲ. ನನ್ನ ಮೇಲಿರುವ ಕೇಸುಗಳೆಲ್ಲ ಸುಳ್ಳು, ಏನು ಬೇಕಾದರೂ ಮಾಡಿ" ಎಂದು ಉತ್ತರಿಸಿದ್ದೇನೆ ಎಂದೂ ತಿಳಿಸಿದ್ದಾರೆ. ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳು ಸುಳ್ಳು ಎಂದು ಪದೇ ಪದೇ ಒತ್ತಿ ಹೇಳುತ್ತಿರುವ ಆಪ್ ನಾಯಕ ಮನೀಶ್ ಸಿಸೋಡಿಯಾ, ಬಿಜೆಪಿಗೆ ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಸವಾಲು ಹಾಕಿದ್ದಾರೆ.












Click it and Unblock the Notifications