ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಸೌದಿಯಲ್ಲಿ ತಮಿಳು ಮಹಿಳೆ ಕೈ ಕಟ್, ಭಾರತದಿಂದ ಪ್ರತಿಭಟನೆ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ರಿಯಾದ್, ಅ.10: ಸೌದಿ ಪ್ರಜೆಯೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದ ತಮಿಳುನಾಡು ಮೂಲದ ಭಾರತೀಯ ಮಹಿಳೆಯ ಕೈ ಕತ್ತರಿಸಿದ್ದ ಮನೆ ಒಡತಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಅದರೆ, ಈ ಪ್ರಕರಣದ ಬಗ್ಗೆ ಹೆಚ್ಚಿನ ಸ್ಪಷ್ಟನೆ ಅಗತ್ಯ, ಈ ಅಮಾನವೀಯ ಕೃತ್ಯದ ವಿರುದ್ಧ ಭಾರತ ತನ್ನ ಪ್ರತಿಭಟನೆ ಮುಂದುವರೆಸಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಶುಕ್ರವಾರ ಹೇಳಿದ್ದಾರೆ.

  ತಮಿಳುನಾಡು ಮೂಲದ 55ರ ಹರೆಯದ ಭಾರತೀಯ ಮಹಿಳೆ ಕಸ್ತೂರಿ ಮುನಿರತ್ನಂ ಅವರ ಕೈಯನ್ನು ಕಸೌದಿ ಮಹಿಳೆ ಕತ್ತರಿಸಿದ್ದರು. ಕಸ್ತೂರಿ ಅವರಿಗೆ ರಿಯಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಸ್ತೂರಿ ಅವರು ಆಸ್ಪತ್ರೆಯಲ್ಲಿ ಮಲಗಿರುವ ವಿಡಿಯೊ ದೃಶ್ಯ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿ ಭಾರಿ ಕೋಲಾಹಲ ಉಂಟಾಗಿತು. ಕಸ್ತೂರಿಯವರನ್ನು ಭಾರತಕ್ಕೆ ಕರೆತರಲು ರಾಯಭಾರ ಕಚೇರಿ ಮೇಲೆ ಒತ್ತಡ ಹೇರಲಾಗಿತ್ತು.[ರೇಪ್ ಆರೋಪಿತ ರಾಯಭಾರಿ ಭಾರತದಿಂದ ಪರಾರಿ?]

  Indian woman’s hand chopped off by employer

  'ಸೌದಿ ಪ್ರಜೆಯೊಬ್ಬರ ನಿವಾಸದಲ್ಲಿ ಕಸ್ತೂರಿ ಮನೆಗೆಲಸ ಮಾಡಿಕೊಂಡಿದ್ದರು. ತಿಂಗಳಿಗೆ ಸುಮಾರು 180 ಡಾಲರ್ ನಷ್ಟು ಸಂಬಳ ನೀಡುವ ಭರವಸೆ ಸಿಕ್ಕಿತ್ತು. ಆದರೆ, ಕಸ್ತೂರಿಗೆ ಸರಿಯಾದ ಊಟ, ನೀಡುತ್ತಿರಲಿಲ್ಲ, ನಿರಂತರವಾಗಿ ಕಿರುಕುಳ ನೀಡಲಾಗುತ್ತಿತ್ತು. ದೌರ್ಜನ್ಯದಿಂದ ಪಾರಾಗಲು ಕಸ್ತೂರಿ ಯತ್ನಿಸಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ದೂರನ್ನೂ ಸಲ್ಲಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಸೌದಿ ಮಹಿಳೆ ಮನೆಗೆಲಸದಾಕೆಯ ಕೈಯನ್ನೇ ಕತ್ತರಿಸಿದ್ದಾರೆ' ಎಂದು ಕಸ್ತೂರಿ ಅವರ ಸೋದರಿ ವಿಜಯಕುಮಾರಿ ಹೇಳಿದ್ದಾರೆ.

  'ಸೌದಿ ಅರೇಬಿಯದಲ್ಲಿ ಭಾರತೀಯ ಮೂಲದ ಮನೆಗೆಲಸದಾಕೆಯ ಕೈಕತ್ತರಿಸಿರುವುದು ಅತ್ಯಂತ ಅಮಾನವೀಯ ಕೃತ್ಯ, ಈ ಬಗ್ಗೆ ಈಗಾಗಲೇ ಸೌದಿ ಅರೇಬಿಯಾ ರಾಯಭಾರಿ ಕಚೇರಿ ಜೊತೆ ಮಾತುಕತೆ ನಡೆಸಲಾಗಿದೆ.ಭಾರತೀಯ ರಾಯಭಾರಿ ಅಧಿಕಾರಿಗಳು ಸಂತ್ರಸ್ತ ಮಹಿಳೆಯ ಜೊತೆ ಸತತ ಸಂಪರ್ಕದಲ್ಲಿದ್ದು, ಸ್ವದೇಶಕ್ಕೆ ಕರೆತರುವ ವ್ಯವಸ್ಥೆ ಮಾಡಲಾಗುತ್ತಿದೆ' ಎಂದು ವಿದೇಶಾಂಗ ಕಚೇರಿ ವಕ್ತಾರ ವಿಕಾಸ್ ಸ್ವರೂಪ್ ಪ್ರತಿಕ್ರಿಯಿಸಿದ್ದಾರೆ.

  ಇತ್ತೀಚೆಗೆ ನೇಪಾಳಿ ಮಹಿಳೆಯ ಮೇಲೆ ಅತ್ಯಾಚಾರ ಹೊತ್ತ ಭಾರತದಲ್ಲಿರುವ ಸೌದಿ ಅರೇಬಿಯಾ ರಾಯಭಾರಿ ಪರಾರಿಯಾಗಿರುವ ಘಟನೆ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  A shocking and brutal news has emerged from Saudi Arabia where an Indian woman's hand has been chopped off by her employer after she complained about poor working conditions last week.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more