ಮೈತ್ರಿಗೆ ಗುಡ್ ಬೈ ಎಂದ ಮಾಯಾವತಿ: ಮೌನ ಮುರಿದ ಅಖಿಲೇಶ್
ನವದೆಹಲಿ, ಜೂನ್ 04: ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಕಡಿದುಕೊಂಡ ಬಿಎಸ್ಪಿ ನಾಯಕಿ ಮಾಯಾವತಿ ಅವರ ನಡೆಯ ಬಗ್ಗೆ ಅಂತೂ ಇಂತೂ ಎಸ್ಪಿ ನಾಯಕ ಅಖಿಲೇಶ್ ಯಾದವ್ ಪ್ರತಿಕ್ರಿಯೆ ನೀಡಿದ್ದಾರೆ.
ಲೋಕಸಭೆ ಮತ್ತು ಅದಕ್ಕೂ ಮುನ್ನ ನಡೆದ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ, ಲೋಕಸಭೆ ಚುನಾವಣೆಯ ಸೋಲಿಗೆ ಅಖಿಲೇಶ್ ಯಾದವ್ ಕಾರಣ ಎಂದು ದೂರಿ ಸಮಾಜವಾದಿ ಪಕ್ಷದಿಂದ ಮೈತ್ರಿ ಕಡಿದುಕೊಳ್ಳುವುದಕ್ಕೆ ಮುಂದಾಗಿದ್ದಾರೆ.
"ನಾವು ಮಾಯಾವತಿ ಅವರಿಗೆ ತಕ್ಕ ಉತ್ತರ ನೀಡುತ್ತೇವೆ. ನಮ್ಮ ಮೈತ್ರಿ ಮುರಿದರೆ ನಾವು ಸಹ ಏಕಾಂಗಿಯಾಗಿಯೇ ಚುನಾವಣೆಗೆ ಸ್ಪರ್ಧಿಸುತ್ತೇವೆ. ನಾವು ಏಕಾಂಗಿಯಾಗಿಯೇ ಹೋರಾಡಬೇಕು ಎಂದರೆ ಅದಕ್ಕೆ ನಾವೂ ಸಿದ್ಧ" ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಮಾಯಾವತಿ ಹೇಳಿದ್ದರು.












Click it and Unblock the Notifications