ಹಣ ಸಿಗದೆ ಬೇಸತ್ತು ಮೇಲುಡುಪನ್ನೇ ಕಳಚಿದ ಮಹಿಳೆ!

Posted By:
Subscribe to Oneindia Kannada

ನವದೆಹಲಿ, ನವೆಂಬರ್ 15 : ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು, ಉರಿ ಬಿಸಿಲನ್ನು ಸಹಿಸಿಕೊಂಡು, ಬ್ಯಾಂಕಿನವರೊಂದಿಗೆ ಜಗಳಾಡಿಕೊಂಡು ತಮ್ಮದೇ ಹಣವನ್ನು ಪಡೆಯಲು ಜನರು ಪಡುತ್ತಿರುವ ಪಡಿಪಾಟಲು ಅಷ್ಟಿಷ್ಟಲ್ಲ.

ಹಲವರು ಕಷ್ಟವಾದರೂ ಅಡ್ಡಿಯಿಲ್ಲ ಮೋದಿ ಒಳ್ಳೆ ಕೆಲಸ ಮಾಡುತ್ತಿದ್ದಾರೆ ಎಂದು ಖುಷಿಪಟ್ಟುಕೊಂಡೇ ಹೊಸ ನೋಟುಗಳನ್ನು ಪಡೆಯುತ್ತಿದ್ದರೆ, ಕೆಲವರು ಹಣ ಸಿಗದೆ ಮೋದಿಯನ್ನು, ಬ್ಯಾಂಕಿನವರನ್ನು ಬೈಕೊಂಡು ಮರಳಿದರೆ, ಕೆಲವರು ಎಟಿಎಂನ ಗಾಜನ್ನೇ ಪುಡಿಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. [ಹಣ ಸಿಗದೆ ರೊಚ್ಚಿಗೆದ್ದು, ಎಟಿಎಂ ಗಾಜು ಪುಡಿ ಪುಡಿ]

Rupee : Delhi woman strips as a mark of protest

ಪ್ರತಿಭಟನೆಗೆ ನಾನಾ ರೂಪಗಳು. ಆದರೆ, ದೆಹಲಿಯ ಈ ಮಹಿಳೆ ಏನು ಮಾಡಿದ್ದಾಳೆ ಗೊತ್ತಾ? ಬ್ಯಾಂಕಿನ ಎಚಿಎಂನಲ್ಲಿ ಹಣ ಸಿಗದಿದ್ದರಿಂದ ಆಕ್ರೋಶಗೊಂಡು ತನ್ನ ಮೇಲುಡುಪನ್ನು ಕಳಚಿ ವಿನೂತನವಾಗಿ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ.

ದೆಹಲಿಯ ಮಯೂರ್ ವಿಹಾರ್ ಫೇಸ್ 3ನಲ್ಲಿ ಈ ಘಟನೆ ಸೋಮವಾರ ನಡೆದಿದೆ. ಹಣ ಸಿಗದೆ ರೋಸತ್ತ ಮಹಿಳೆ ತನ್ನ ನೀಲಿ ಮೇಲುಡುಪು ಕಳಚುತ್ತಿದ್ದಂತೆ ಕ್ಯೂನಲ್ಲಿ ನಿಂತವರಿಗೆ ದಿಗ್ಭ್ರಮೆಗೊಂಡು ಕೂಡಲೆ ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೆ ಪೊಲೀಸರಿಗೆ ಬರಹೇಳಿದ್ದಾರೆ.

ಮಹಿಳಾ ಪೊಲೀಸರು ಬಂದು ಆಕೆಗೆ ಬಟ್ಟೆಯನ್ನು ತೊಡಿಸಿ ಗಾಜಿಯಾಬಾದ್ ಪೊಲೀಸ್ ಸ್ಟೇಷನ್ನಿಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದಾರೆ. ಆಕೆಯ ಹತಾಶೆಗೆ ಮರುಗಿ ಮರಳಿ ಎಟಿಎಂನತ್ತ ಕರೆದುಕೊಂಡು ಬಂದು ಎಟಿಎಂನಿಂದ ಹಣ ಹಿಂಪಡೆಯಲು ಸಹಾಯ ಮಾಡಿದ್ದಾರೆ. [ಗುಣಮಟ್ಟ ಪರೀಕ್ಷೆ : ನೀರಿನಲ್ಲಿ ಹೊಸ ನೋಟು ತೊಳೆದು ನೋಡಿ!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A woman stripped herself as a mark of protest in Delhi as she did not get money from ATM after standing in the queue for hours. The onlookers were shocked by seeing the scene. Police took her and also helped her later to withdraw money from bank.
Please Wait while comments are loading...