• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರಗಳಲ್ಲಿ ನೋಡಿ ರಾಷ್ಟ್ರೀಯ ಏಕತಾ ಓಟ

|

ನವದೆಹಲಿ, ಅ.31 : ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭಭಾಯಿ ಪಟೇಲರ 139ನೇ ಜನ್ಮದಿನದಂದು ಹಮ್ಮಿಕೊಂಡಿದ್ದ 'ರಾಷ್ಟ್ರೀಯ ಏಕತಾ ಓಟ'ದ ಭವ್ಯ ಮ್ಯಾರಾಥಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಾವಿರಾರು ಜನರು ಹೆಜ್ಜೆ ಹಾಕಿದರು.

'ಏಕ್‌ ಭಾರತ್‌ ಶ್ರೇಷ್ಠ ಭಾರತ್‌' ಎಂಬ ಧ್ಯೇಯ ವಾಕ್ಯದೊಂದಿಗೆ ಮ್ಯಾರಾಥಾನ್‌ ನಡೆಯಿತು. ದೆಹಲಿಯ ಪಟೇಲ್‌ ಚೌಕ್‌ನಲ್ಲಿರುವ ಸರ್ದಾರ್‌ ಪಟೇಲ್‌ರ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿ, ನಂತರ ಏಕತಾ ಓಟಕ್ಕೆ ಚಾಲನೆ ನೀಡಿದರು. [ಪಟೇಲ್ ಆಧುನಿಕ ಭಾರತದ ವಾಸ್ತುಶಿಲ್ಪಿ]

ಏಕತಾ ಓಟಕ್ಕೆ ಚಾಲನೆ ನೀಡುವ ಮೊದಲು ಮಾತನಾಡಿ ಪ್ರಧಾನಿ ಮೋದಿ, ಭಾರತದ ಇತಿಹಾಸದಲ್ಲಿ ಪಟೇಲರ ಹೆಸರು ಅಜರಾಮರವಾಗಿದೆ. ಸಿದ್ಧಾಂತಗಳಿಗೆ ತಕ್ಕಂತೆ ಭಾರತದ ಇತಿಹಾಸವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಸರ್ದಾರ್ ಪಟೇಲರ ಜೀವನ ನಮಗೆ ಆದರ್ಶವಾಗಿದೆ. ಅವರ ಧೈರ್ಯ ಮತ್ತು ದೇಶ ಪ್ರೇಮ ಮಾದರಿಯಾಗಿದೆ. ಭಾರತ ದೇಶದ ಇತಿಹಾಸದಲ್ಲಿ ಪಟೇಲರು ಎಂದೆಂದೂ ಅಮರ. ಪಟೇಲ್ ಆಧುನಿಕ ಭಾರತದ ವಾಸ್ತುಶಿಲ್ಪಿ ಎಂದು ಮೋದಿ ಬಣ್ಣಿಸಿದರು. ರಾಷ್ಟ್ರೀಯ ಏಕತಾ ಓಟದ ಚಿತ್ರಗಳು [ಪಿಟಿಐ ಚಿತ್ರಗಳು]

ದೆಹಲಿಯಲ್ಲಿ ರಾಷ್ಟ್ರೀಯ ಏಕತಾ ಓಟ

ದೆಹಲಿಯಲ್ಲಿ ರಾಷ್ಟ್ರೀಯ ಏಕತಾ ಓಟ

ಸರ್ದಾರ್‌ ವಲ್ಲಭಭಾಯಿ ಪಟೇಲರ 139ನೇ ಜನ್ಮದಿನದಂದು 'ರಾಷ್ಟ್ರೀಯ ಏಕತಾ ಓಟ' ಮ್ಯಾರಾಥಾನ್‌ ಆಯೋಜಿಸಲಾಗಿತ್ತು.

ಪಟೇಲ್‌ಗೆ ಪುಷ್ಪನಮನ ಸಲ್ಲಿಸಿದ ಮೋದಿ

ಪಟೇಲ್‌ಗೆ ಪುಷ್ಪನಮನ ಸಲ್ಲಿಸಿದ ಮೋದಿ

ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ದಾರ್‌ ವಲ್ಲಭಭಾಯಿ ಪಟೇಲರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಏಕ್‌ ಭಾರತ್‌ ಶ್ರೇಷ್ಠ ಭಾರತ್‌

ಏಕ್‌ ಭಾರತ್‌ ಶ್ರೇಷ್ಠ ಭಾರತ್‌

ಏಕ್‌ ಭಾರತ್‌ ಶ್ರೇಷ್ಠ ಭಾರತ್‌ ಎಂಬ ಧ್ಯೇಯವಾಕ್ಯದಡಿ ರಾಷ್ಟ್ರೀಯ ಏಕತಾ ಓಟವನ್ನು ಆಯೋಜಿಸಲಾಗಿತ್ತು.

ಪ್ರಧಾನಿ ಮೋದಿ ಚಾಲನೆ

ಪ್ರಧಾನಿ ಮೋದಿ ಚಾಲನೆ

ಪಟೇಲ್ ಚೌಕ್‌ನಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪನಮನ ಸಲ್ಲಿಸಿದ ನಂತರ ಇಂಡಿಯಾ ಗೇಟ್‌ನಿಂದ ವಿಜಯ್ ಚೌಕ್‌ನವರೆಗಿನ 'ಏಕತಾ ಓಟಕ್ಕೆ' ಚಾಲನೆ ನೀಡಿದರು.

ಮೋದಿಯೊಂದಿಗೆ ಜನಸಾಗರ

ಮೋದಿಯೊಂದಿಗೆ ಜನಸಾಗರ

ಇಂಡಿಯಾ ಗೇಟ್‌ನಿಂದ ವಿಜಯ್ ಚೌಕ್‌ನವರೆಗಿನ ನಡೆದ ರಾಷ್ಟ್ರೀಯ ಏಕತಾ ಓಟದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಸಾವಿರಾರು ಜನರು ಹೆಜ್ಜೆ ಹಾಕಿದರು.

ಜನರನ್ನು ಉದ್ದೇಶಿಸಿ ಮೋದಿ ಭಾಷಣ

ಜನರನ್ನು ಉದ್ದೇಶಿಸಿ ಮೋದಿ ಭಾಷಣ

ರಾಷ್ಟ್ರೀಯ ಏಕತಾ ಓಟಕ್ಕೆ ಚಾಲನೆ ನೀಡುವ ಮೊದಲು ಪ್ರಧಾನಿ ಮೋದಿ ಜನರನ್ನು ಉದ್ದೇಶಿಸಿ ಮಾತನಾಡಿದರು. ಸರ್ದಾರ್ ವಲ್ಲಭಭಾಯ್ ಪಟೇಲ್ ಆಧುನಿಕ ಭಾರತದ ಶಿಲ್ಪಿ ಎಂದು ಮೋದಿ ಬಣ್ಣಿಸಿದರು.

ಪಟೇಲರ ಹೆಸರು ಅಜರಾಮರವಾಗಿದೆ

ಪಟೇಲರ ಹೆಸರು ಅಜರಾಮರವಾಗಿದೆ

ಭಾರತದ ಇತಿಹಾಸದಲ್ಲಿ ಪಟೇಲರ ಹೆಸರು ಅಜರಾಮರವಾಗಿದೆ. ಸಿದ್ಧಾಂತಗಳಿಗೆ ತಕ್ಕಂತೆ ಭಾರತದ ಇತಿಹಾಸವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ನರೇಂದ್ರ ಮೋದಿ ಹೇಳಿದರು.

ದೇಶಪ್ರೇಮ ಮಾದರಿಯಾಗಿದೆ

ದೇಶಪ್ರೇಮ ಮಾದರಿಯಾಗಿದೆ

ಸರ್ದಾರ್ ಪಟೇಲರ ಜೀವನ ನಮಗೆ ಆದರ್ಶವಾಗಿದೆ. ಅವರ ಧೈರ್ಯ ಮತ್ತು ದೇಶ ಪ್ರೇಮ ಮಾದರಿಯಾಗಿದೆ ಎಂದು ಮೋದಿ ಹೇಳಿದರು.

ಪಟೇಲ್ ಇಲ್ಲದೆ ಮಹಾತ್ಮ ಗಾಂಧಿ ಕೂಡ ಅಪೂರ್ಣ

ಪಟೇಲ್ ಇಲ್ಲದೆ ಮಹಾತ್ಮ ಗಾಂಧಿ ಕೂಡ ಅಪೂರ್ಣ

'ಸ್ವಾಮಿ ವಿವೇಕಾನಂದರಿಲ್ಲದೆ ರಾಮಕೃಷ್ಣ ಪರಮಹಂಸರು ಎಷ್ಟು ಅಪೂರ್ಣ ಎಂದ ತೋರುತ್ತದೆಯೋ, ಅದೇ ರೀತಿ, ಸರ್ದಾರ್ ಪಟೇಲ್ ಇಲ್ಲದೆ ಮಹಾತ್ಮ ಗಾಂಧಿ ಕೂಡ ಅಪೂರ್ಣ' ಎಂದು ಮೋದಿ ನುಡಿದರು.

ಹಲವಾರು ಸಚಿವರು ಭಾಗಿ

ಹಲವಾರು ಸಚಿವರು ಭಾಗಿ

ಪ್ರಧಾನಿ ಮೋದಿ ಅವರ ಜೊತೆ ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು ಮುಂತಾದವರಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi flags off 'Run for Unity' to commemorate Sardar Vallabhbhai Patel's birth anniversary here is pics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more