ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ: ಬ್ಯಾಂಕ್ ಎಟಿಎಂನಿಂದ ಬಂದ ನಕಲಿ ನೋಟಿನಲ್ಲಿ ತಪ್ಪುಗಳೆಷ್ಟು?

‘ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ’ ಹೆಸರಿನಲ್ಲಿ ದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ನಕಲಿ ನೋಟು ಗ್ರಾಹಕರೊಬ್ಬರ ಕೈ ಸೇರಿದೆ. ಈ ಕುರಿತು ದೆಹಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By Sachhidananda Acharya
|
Google Oneindia Kannada News

ನವದೆಹಲಿ, ಫೆಬ್ರವರಿ 22: 'ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ' ಹೆಸರಿನಲ್ಲಿ ದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ನಕಲಿ ನೋಟು ಗ್ರಾಹಕರೊಬ್ಬರ ಕೈ ಸೇರಿದೆ. ಈ ಕುರಿತು ದೆಹಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೆಹಲಿಯ ಸಂಗಮ್ ವಿಹಾರ್ ನಲ್ಲಿರುವ ಎಸ್.ಬಿ.ಐ ಎಟಿಎಂನಲ್ಲಿ ಫೆಬ್ರವರಿ 6ರಂದು ರೋಹಿತ್ ಎನ್ನುವ ಗ್ರಾಹಕರು ಹಣ ಡ್ರಾ ಮಾಡಲು ಹೋದಾಗ ಈ ಘಟನೆ ನಡೆದಿದೆ. ರೋಹಿತ್ 8,000 ರೂಪಾಯಿ ಡ್ರಾ ಮಾಡಲು ಹೋಗಿದ್ದಾರೆ. ಆಗ ನಾಲ್ಕು 2,000 ರೂಪಾಯಿಯ ನೋಟುಗಳು ಬಂದಿವೆ.[ಹೊಸ 1000 ರು. ಮುಖಬೆಲೆ ನೋಟು ಬರಲಿವೆ ಎನ್ನುವರಿಗೆ ಇಲ್ಲಿದೆ ಉತ್ತರ]

ಈ ನೋಟುಗಳು ನೋಡಲು ಅಸಲಿ ಎರಡು ಸಾವಿರದ ನೋಟುಗಳಂತೆಯೇ ಕಾಣುತ್ತಿದ್ದವು. ಆದರೆ ಸೂಕ್ಷವಾಗಿ ಗಮನಿಸಿದಾಗ ಹಲವು ತಪ್ಪುಗಳು ಈ ನೋಟಿನಲ್ಲಿ ಮುದ್ರಣವಾಗಿರುವುದನ್ನು ಅವರು ಪತ್ತೆ ಹಚ್ಚಿದ್ದಾರೆ.[ಸಾವಿರ ರುಪಾಯಿ ನೋಟು ಮತ್ತೆ ಚಲಾವಣೆಗೆ ಬರಲ್ಲ, ಇದು ಅಧಿಕೃತ]

ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ

ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ

ನೋಟಿನಲ್ಲಿ 'ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ' ಎಂದು ಬರೆಯಬೇಕಾಗಿದ್ದ ಜಾಗದಲ್ಲಿ 'ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ' ಎಂದು ಬರೆಯಲಾಗಿದೆ. ಮಾತ್ರವಲ್ಲ 'ಗ್ಯಾರೆಂಟೆಡ್ ಬೈ ದಿ ಸೆಂಟ್ರಲ್ ಗವರ್ನಮೆಂಟ್' ಎಂದು ಬರೆಯಬೇಕಾದ ಜಾಗದಲ್ಲಿ ಕೇವಲ 'ಗ್ಯಾರೆಂಟೆಡ್ ಬೈ ಚಿಲ್ಡ್ರನ್ಸ್ ಗವರ್ನಮೆಂಟ್' ಎಂದು ಬರೆಯಲಾಗಿದೆ.

ಬ್ಯಾಂಕ್ ಲೋಗೋ ನಾಪತ್ತೆ

ಬ್ಯಾಂಕ್ ಲೋಗೋ ನಾಪತ್ತೆ

ನೋಟಿನಲ್ಲಿ ರಿಸರ್ಬ್ ಬ್ಯಾಂಕಿನ ಮುದ್ರೆಯ ಜಾಗದಲ್ಲಿ ಪಿ. ಕೆ (PK) ಮುದ್ರೆ ಇದೆ. ಇನ್ನೊಂದು ಭಾಗದಲ್ಲಿ ಅಶೋಕ ಸ್ಥಂಭ ಇರಬೇಕಾದ ಜಾಗದಲ್ಲಿ 'ಚರುನ್ ಲೇಬಲ್' ಎಂದು ಬರೆಯಲಾಗಿದೆ. ಅದೇ ರೀತಿ ಭದ್ರತಾ ವೈಶಿಷ್ಠ್ಯ ಇರುವ 2000 ರೂಪಾಯಿ ಬರೆದ ಜಾಗದಲ್ಲಿಯೂ 'ಚರುನ್ ಲೇಬಲ್' ಎಂದು ಬರೆಯಲಾಗಿದೆ.

ಭಾರತೀಯ ಮನೋರಂಜನ್ ಬ್ಯಾಂಕ್

ಭಾರತೀಯ ಮನೋರಂಜನ್ ಬ್ಯಾಂಕ್

ಇದೇ ರೀತಿ 'ಭಾರತೀಯ ರಿಸರ್ಬ್ ಬ್ಯಾಂಕ್' ಎಂದು ಬರೆಯಬೇಕಾದ ಜಾಗದಲ್ಲಿ 'ಭಾರತೀಯ ಮನೋರಂಜನ್ ಬ್ಯಾಂಕ್' ಎಂದು ಬರೆಯಲಾಗಿದೆ. ನೋಟಿನ ಸೀರಿಯಲ್ ನಂಬರ್ ಕೂಡಾ '000000' ಎಂದು ಮುದ್ರಣವಾಗಿದೆ.

ಗವರ್ನರ್ ಸಹಿಯೇ ಇಲ್ಲ

ಗವರ್ನರ್ ಸಹಿಯೇ ಇಲ್ಲ

ಅಷ್ಟು ಮಾತ್ರವಲ್ಲ 2,000 ಪಕ್ಕದಲ್ಲಿ ಇರಬೇಕಾದ ರುಪೀ ಚಿಹ್ನೆಯೇ ಕಾಣಿಸುತ್ತಿಲ್ಲ. ಐ ಪ್ರಾಮಿಸ್ ಟು ಪೇ ದಿ ಬೀಯರೆರ್ ದಿ ಸಮ್ ಆಫ್ ಡು ಥೌಸಂಡ್ 'ರುಪೀಸ್' ಜಾಗದಲ್ಲಿ 'ಕೂಪನ್ಸ್' ಎಂದು ಬರೆಯಲಾಗಿದೆ. ಇನ್ನು ಆರ್.ಬಿ.ಐ ಗವರ್ನರ್ ಸಹಿಯೇ ನೋಟಿನಲ್ಲಿ ನಾಪತ್ತೆಯಾಗಿದೆ.

ಪೊಲೀಸ್ ಕೈಗೂ ಬಂತು ನಕಲಿ ನೋಟು

ಪೊಲೀಸ್ ಕೈಗೂ ಬಂತು ನಕಲಿ ನೋಟು

ಆರಂಭದಲ್ಲಿ ದೂರು ನೀಡಿದಾಗ ಪೊಲೀಸ್ ನಂಬಿರಲಿಲ್ಲ. ಕೊನೆಗೆ ಸಬ್ ಇನ್ಸ್ ಪೆಕ್ಟರ್ ಪೊಲೀಸ್ ಪೇದೆಯನ್ನು ಸ್ಥಳಕ್ಕೆ ಕಳುಹಿಸದರು. ಅವರು ಡ್ರಾ ಮಾಡುವಾಗಲೂ ಅದೇ ರೀತಿ ನಕಲಿ ನೋಟುಗಳು ಬಂದಿವೆ. ಆದರೆ ಈ ಬಗ್ಗೆ ಉಳಿದ ಯಾವುದೇ ಗ್ರಾಹಕರು ದೂರು ನೀಡಿಲ್ಲ. ರೋಹಿತ್ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದ್ದು ಐಪಿಸಿ ಸೆಕ್ಷನ್ 489 - ಬಿ, 489 -ಇ ಮತ್ತು 420ರ ಻ಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಘಟನೆಯ ತನಿಖೆಗೆ ತಂಡ ಕಳುಹಿಸಿದೆ.

English summary
A State Bank of India ATM in South Delhi’s Sangam Vihar dispensed fake Rs 2,000 notes on February 6. A case was registered at the local police station by a youth, who got these notes in the ATM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X