• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅವರು ನನ್ನ ಗಂಡ : ರಾಬರ್ಟ್ ಬೆಂಬಲಕ್ಕೆ ನಿಂತ ಪ್ರಿಯಾಂಕಾ

|

ನವದೆಹಲಿ, ಫೆಬ್ರವರಿ 6 : "ಅವರು ನನ್ನ ಗಂಡ, ಅವರು ನನ್ನ ಕುಟುಂಬದವರು, ನನ್ನ ಕುಟುಂಬವನ್ನು ನಾನು ಬೆಂಬಲಿಸುತ್ತೇನೆ" ಎಂದಿರುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು, ಗಂಡ ರಾಬರ್ಟ್ ವಾದ್ರಾ ಅವರು ಜಾರಿ ನಿರ್ದೇಶನಾಲಯಕ್ಕೆ ಬಂದಾಗ ಅವರ ಜೊತೆಯೇ ಆಗಮಿಸಿದ್ದರು.

ಹಣದ ಅವ್ಯವಹಾರ ನಡೆಸಿ ವಿದೇಶದಲ್ಲಿ ಆಸ್ತಿಪಾಸ್ತಿ (ಅಘೋಷಿತ) ಮಾಡಿಕೊಂಡಿದ್ದಾರೆಂದು ಆರೋಪ ಹೊತ್ತಿರುವ ಉದ್ಯಮಿ ರಾಬರ್ಟ್ ವಾದ್ರಾ ಅವರನ್ನು ಜಾರಿ ನಿರ್ದೇಶನಾಲಯದಲ್ಲಿ ಬುಧವಾರ ವಿಚಾರಣೆಗೆ ಗುರಿಪಡಿಸಲಾಗಿದೆ. ರಾಜಕೀಯ ದುರುದ್ದೇಶದಿಂದಲೇ ನನ್ನ ಮೇಲೆ ಸಲ್ಲದ ಆರೋಪ ಹೊರಿಸಲಾಗಿದೆ ಎಂದು ವಾದ್ರಾ ಬಿಜೆಪಿ ವಿರುದ್ಧವೇ ಆರೋಪ ಮಾಡಿದ್ದಾರೆ.

ಮನಿ ಲಾಂಡ್ರಿಂಗ್ ಕೇಸ್: 'ಇಡಿ' ವಿಚಾರಣೆಗೆ ರಾಬರ್ಟ್ ವಾದ್ರಾ ಹಾಜರು

ಇಂದು ಜಾರಿ ನಿರ್ದೇಶನಾಲಯದ ಮುಂದೆ ರಾಬರ್ಟ್ ವಾದ್ರಾ ಅವರು ಹಾಜರಾಗಬೇಕಿದ್ದ ಸಮಯದಲ್ಲಿ ಅವರ ಜೊತೆಗೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ವಾದ್ರಾ ಅವರು ಕೂಡ ಬಂದು ಅಚ್ಚರಿ ಮೂಡಿಸಿದ್ದರು. ಜೊತೆಗೆ, ಯಾರು ಎಷ್ಟೇ ಆರೋಪ ಹೊರಿಸಿದರೂ ತಾವು ತಮ್ಮ ಕುಟುಂಬಕ್ಕೆ ಬೆಂಬಲವಾಗಿರುವುದಾಗಿ ಸಂದೇಶ ರವಾನಿಸಿದ್ದಾರೆ ಪ್ರಿಯಾಂಕಾ.

ಯುನೈಟೆಡ್ ಕಿಂಗಡಂನಲ್ಲಿ ಹಲವಾರು ಆಸ್ತಿಯನ್ನು ಅನೈತಿಕವಾಗಿ ಮಾಡಿಕೊಂಡಿದ್ದಾರೆ ಎಂಬ ಆರೋಪ ರಾಬರ್ಟ್ ಮೇಲಿದೆ. ಇವುಗಳಲ್ಲಿ ಮೂರು ವಿಲ್ಲಾಗಳಾಗಿದ್ದು, ಉಳಿದವು ಐಷಾರಾಮಿ ಫ್ಲಾಟ್ ಗಳಾಗಿವೆ. ಇವುಗಳಲ್ಲಿನ ಎರಡು ಮನೆಗಳ ಬೆಲೆ 83 ಕೋಟಿ ರುಪಾಯಿನಷ್ಟಾಗುತ್ತದೆ ಎನ್ನಲಾಗಿದೆ. ಇವೆಲ್ಲವನ್ನು 2005ರಿಂದ 2010ರೊಳಗೆ ಅವರು ಖರೀದಿಸಿದ್ದಾರೆಂದು ಆರೋಪಿಸಲಾಗಿದೆ. ಅವರು ಆಸ್ತಿಗಳನ್ನು ಖರೀದಿಸಿದ ಸಮಯದಲ್ಲಿ ಯುಪಿಎ ಕೇಂದ್ರದಲ್ಲಿ ಸರಕಾರ ನಡೆಸುತ್ತಿತ್ತು. ಈ ಆಸ್ತಿಗಳ ಬಗ್ಗೆ ವಿವರ ನೀಡಬೇಕೆಂದು ಅವರನ್ನು ಕರೆಸಲಾಗಿದೆ.

ಬೆಂಗಳೂರಲ್ಲಿ 1100 ಎಕರೆ ಭೂಮಿ ಕಬಳಿಸಿದ್ದಾರೆ ರಾಬರ್ಟ್ ವಾದ್ರಾ

ರಾಬರ್ಟ್ ವಾದ್ರಾ ಅವರ ಕಂಪನಿ ಸ್ಕೈಲೈಟ್ ಹಾಸ್ಪಿಟಾಲಿಟಿಯ ಉದ್ಯೋಗಿಯಾಗಿರುವ, ವಾದ್ರಾ ಅವರ ಎಲ್ಲ ವ್ಯವಹಾರಗಳನ್ನು ಬಲ್ಲ ಮನೋಜ್ ಆರೋರಾ ಅವರೊಂದಿಗೆ ರಾಬರ್ಟ್ ಎಂಥ ಸಂಬಂಧ ಹೊಂದಿದ್ದಾರೆ, ಯಾವ್ಯಾವ ಈಮೇಲ್ ಕಳಿಸಿದ್ದಾರೆ ಎಂಬುದರ ಬಗ್ಗೆಯೂ ಇಡಿ ವಿಚಾರಣೆ ನಡೆಸಲಿದೆ. ಮನೋಜ್ ಆರೋರಾ ಅವರಿಗೆ ರಾಬರ್ಟ್ ವಾದ್ರಾನ ಎಲ್ಲ ವ್ಯವಹಾರಗಳೂ ಗೊತ್ತಿದ್ದವು ಮತ್ತು ಆಸ್ತಿ ಕೊಳ್ಳಲು ಅಕ್ರಮವಾಗಿ ಹಣ ಹೊಂದಿಸಲು ಸಹಾಯ ಮಾಡಿದ್ದ ಎಂದೂ ಆರೋಪಿಸಲಾಗಿದೆ.

ಸೋನಿಯಾ ಅಳಿಯನ ಆಪ್ತರಿಗೆ 'ಇಡಿ' ಆಘಾತ, ಬೆಂಗಳೂರಲ್ಲೂ ದಾಳಿ

"ರಾಬರ್ಟ್ ಕೇವಲ ಒಂದು ಮನೆಯನ್ನು ಮಾತ್ರ ಯುಕೆಯಲ್ಲಿ ಕೊಂಡಿದ್ದರು ಎಂಬ ವಿಷಯ ಹಳೆಯದಾಯಿತು. ಈಗವರ ಬಳಿ ಎಂಟು ಐಷಾರಾಮಿ ಮನೆಗಳಿವೆ. ಒಂದು ಮತ್ತೊಂದಕ್ಕಿಂತ ದುಬಾರಿಯಾಗಿವೆ. ಅದರಲ್ಲಿ ಒಂದು ಮನೆಯ ಬೆಲೆಯೇ 17 ಕೋಟಿ ರುಪಾಯಿನಷ್ಟಿದೆ. ಈ ಎಲ್ಲ ಆಸ್ತಿಯನ್ನು ಯುಪಿಎ ಆಡಳಿತ ನಡೆಸುತ್ತಿದ್ದಾಗ ಕಿಕ್ ಬ್ಯಾಕ್ ಮೂಲಕ ಹಣ ಪಡೆದು ಕೊಂಡಿದ್ದುವಾಗಿವೆ" ಎಂದು ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ ಆರೋಪಿಸಿದ್ದಾರೆ.

ರಾಬರ್ಟ್ ವಾದ್ರಾ ಅವರು ಇಡಿ ಮುಂದೆ ಹಾಜರಾಗುವ ಹಿಂದಿನ ದಿನವೇ, ಆರೋಪಿ ಸ್ಥಾನದಲ್ಲಿರುವ ರಾಬರ್ಟ್ ವಾದ್ರಾ ಮತ್ತು ಅವರ ಹೆಂಡತಿ ಪ್ರಿಯಾಂಕಾ ವಾದ್ರಾ ಅವರ ಪೋಸ್ಟರ್ ಗಳು ಕಾಂಗ್ರೆಸ್ ಕಚೇರಿ ಮುಂದೆ ರಾರಾಜಿಸುತ್ತಿದ್ದುದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇನು ಪಕ್ಷದ ಕಚೇರಿಯೋ ಅಥವಾ ಗಾಂಧಿ ಕುಟುಂಬದ ಕಚೇರಿಯೋ? ಇಲ್ಲಿ ಪೋಸ್ಟರ್ ನಲ್ಲಿ ವಾದ್ರಾ ಚಿತ್ರ ಹಾಕಿದ್ದೇಕೆ ಎಂದು ಕೆಲವರು ಕಿಡಿ ಕಾರಿದ್ದರು. ಕಿಡಿ ಭುಗಿಲೇಳುವ ಮೊದಲೇ ಆ ಪೋಸ್ಟರನ್ನು ಕಿತ್ತುಹಾಕಲಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
He is my husband, he is my family, will support him : Priyanka Vadra told after she was questioned by media for accompanying Robert Vadra, who came to enforcement directorate for questioning in money laundering case. Robert alleged to have purchased villas and posh apartments with illegal means.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more