'ರಂಜನ್ ಗೊಗಯ್ ನಂತಹ ಲಜ್ಜಗೇಡಿ ಮನುಷ್ಯ ಮತ್ತೊಬ್ಬ ಇಲ್ಲ'; ಕಾಟ್ಜು

ನವದೆಹಲಿ, ಮಾರ್ಚ್ 17; ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ಅವರನ್ನು ಕೇಂದ್ರ ಸರ್ಕಾರ ರಾಜ್ಯ ಸಭೆಗೆ ನಾಮ ನಿರ್ದೇಶನ ಮಾಡಿರುವುದು ವಿವಾದದ ಕಿಡಿ ಹೊತ್ತಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು, ರಂಜನ್ ಗೊಗಯ್ ಅಂತಹ ಲಜ್ಜಿಗೇಡಿ ಮನುಷ್ಯನನ್ನು ನಾನು ನನ್ನ ಜೀವಮಾನದಲ್ಲಿಯೇ ನೋಡಿರಲಿಲ್ಲ ಎಂದು ವಿರೋಧಿಸಿದ್ದಾರೆ‌.

ನಾನು ಸಹ 20 ವರ್ಷ ವಕೀಲನಾಗಿ 20 ವರ್ಷ ನ್ಯಾಯಾಧೀಶ, ನ್ಯಾಯಮೂರ್ತಿ ಆಗಿ ಕೆಲಸ ಮಾಡಿದ್ದೇನೆ. ಆದರೆ, ಗೊಗಯ್ ಅಂತಹ ಕೆಟ್ಟ ಮನುಷ್ಯನನ್ನು ನೋಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Retired Justice Markandey Katju Attack On Retired Justice Ranjan Gogoi

ಭಾರತದ ಸುಪ್ರೀಂಕೋರ್ಟ ನ 46 ನೇ ಮುಖ್ಯ ನ್ಯಾಯಮೂರ್ತಿ ಆಗಿ ರಂಜನ್ ಗೊಗಯ್ ಅವರು 2018-19 ರ ಅವಧಿಯಲ್ಲಿ 13 ತಿಂಗಳು ಕೆಲಸ ಮಾಡಿದ್ದಾರೆ. ಅವರು ಈಗ ರಾಜ್ಯಸಭೆಗೆ ಹೋಗುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+