ಹೊಸ ವಾಹನ ಖರೀದಿದಾರರಿಗೆ ಕಹಿಸುದ್ದಿ: ನೋಂದಣಿಗೆ ತಾತ್ಕಾಲಿಕ ತಡೆ

ನವದೆಹಲಿ, ಏಪ್ರಿಲ್ 03: ಹೊಸ ವಾಹನ ಖರೀದಿದಾರರಿಗೆ ಕಹಿಸುದ್ದಿಯೊಂದು ಬಂದಿದೆ. ಎಲ್ಲಾ ರೀತಿಯ ಮೋಟಾರ್ ವಾಹನಗಳ ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಹೊಸ ವಾಹನ ಖರೀದಿಸಿದರೆ ತಕ್ಷಣವೇ ನೊಂದಣಿ ಸಾಧ್ಯವಾಗುವುದಿಲ್ಲ.

ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಧ್ಯಪ್ರದೇಶಗಳನ್ನು ಹೊರತುಪಡಿಸಿ ದೇಶದ ಎಲ್ಲಾ ರಾಜ್ಯಗಳಲ್ಲೂ ವಾಹನ ನೋಂದಣಿಗೆ ತಾತ್ಕಾಲಿಕ ತಡೆಯೊಡ್ಡಲಾಗಿದ್ದು, ಕರ್ನಾಟಕವೂ ಈ ಸಮಸ್ಯೆ ಎದುರಿಸಲಿದೆ.

'ವಾಹನ' ಡಾಟಾಬೇಸ್ ಮೂಲಕ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್(ಎಚ್ ಎಸ್ ಆರ್ ಪಿ)ಗಳನ್ನು ಅಳವಡಿಸಿಕೊಂಡು ಹೊಸ ವಾಹನಗಳು ರಸ್ತೆಗಿಳಿಯಬೇಕಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

Registration of all motor vehicles blocked temporarily

ಆದರೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಧ್ಯಪ್ರದೇಶಗಳು ವಾಹನಗಳ ನೋಂದಣಿಗೆ ವಿಭಿನ್ನ ಸಾಫ್ಟ್ ವೇರ್ ಬಳಸುತ್ತಿರುವುದರಿಂದ ಈ ರಾಜ್ಯಗಳಲ್ಲಿ ನೋಂದಣಿಗೆ ಯಾವುದೇ ಅಡ್ಡಿ ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+