• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

PM ಪರಿಹಾರ ನಿಧಿಗೆ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ದೇಣಿಗೆ

|

ನವ ದೆಹಲಿ, ಏಪ್ರಿಲ್ 04: ಬಾಲಿವುಡ್ ನಟ ರಣ್ವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಕೊರೊನಾ ನಿಯಂತ್ರಣಕ್ಕೆ ಸಹಾಯ ಹಸ್ತ ಚಾಚಿದ್ದಾರೆ. ರಣ್ವೀರ್ - ದೀಪಿಕಾ ದಂಪತಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದೆ.

ಈ ವಿಷಯವನ್ನು ನಟ ರಣ್ವೀರ್ ಸಿಂಗ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಣ ನೀಡುವುದಾಗಿ ಹೇಳಿರುವ ರಣ್ವೀರ್ - ದೀಪಿಕಾ ದಂಪತಿ ಹಣದ ಮೊತ್ತವನ್ನು ಬಹಿರಂಗಪಡಿಸಿಲ್ಲ.

ಕೊರೊನಾ ತಡೆಗೆ ಸಿಎಂ ಪರಿಹಾರ ನಿಧಿಗೆ ಗಾಯಕ ವಿಜಯ ಪ್ರಕಾಶ್ ನೆರವು

''ಈ ರೀತಿಯ ಸಮಯದಲ್ಲಿ ಪ್ರತಿಯೊಂದು ಅಣುವು ಎಣಿಕೆ ಆಗುತ್ತದೆ. ಪ್ರಧಾನಮಂತ್ರಿ ಪರಿಹಾರ ನಿಧಿಗೆ ಕೊಡುಗೆ ನೀಡುವುದಾಗಿ ನಾವು ವಿನಮ್ರವಾಗಿ ಪ್ರತಿಜ್ಞೆ ಮಾಡುತ್ತೇವೆ ಮತ್ತು ನೀವೂ ಸಹ ಮಡುತ್ತೀರಿ ಎನ್ನುವ ಭರವಸೆ ಹೊಂದಿದ್ದೇನೆ. ನಾವೆಲ್ಲರೂ ಒಟ್ಟಿಗೆ ಇದ್ದೇವೆ ಮತ್ತು ನಾವು ಜಯಿಸುತ್ತೇವೆ. ಜೈ ಹಿಂದ್. ದೀಪಿಕಾ ಮತ್ತು ರಣ್ವೀರ್.'' ಎಂದು ಬರೆದುಕೊಂಡಿದ್ದಾರೆ.

ಈಗಾಗಲೇ ಬಾಲಿವುಡ್ ತಾರೆಗಳಾದ ಅನುಷ್ಕಾ ಶರ್ಮಾ, ಪ್ರಿಯಾ ಚೋಪ್ರಾ, ಕರೀನಾ ಕಪೂರ್, ಅಕ್ಷಯ್ ಕುಮಾರ್, ಕತ್ರೀನಾ ಕೈಫ್ ಶಾರೂಖ್ ಖಾನ್ ಸೇರಿದಂತೆ ಅನೇಕರು ಕೊರೊನಾ ತಡೆಗೆ ದೇಣಿಗೆ ನೀಡಿದ್ದಾರೆ.

View this post on Instagram

🙏🏽

A post shared by Ranveer Singh (@ranveersingh) on

ಅಂದಹಾಗೆ, ಭಾರತದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು 2902 ಆಗಿವೆ. 68 ಮಂದಿ ಮರಣ ಹೊಂದಿದ್ದಾರೆ.

English summary
Coronavirus: Bollywood actor Ranveer Singh and Deepika Padukone undisclosed donation to PM relief fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X