• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿತ್ತ ಸಚಿವೆ ನಿರ್ಮಲಾ ಅವರಿಗೆ ರಮ್ಯಾ ಟ್ವೀಟ್: ಹಾರೈಕೆ ಜೊತೆ ವ್ಯಂಗ್ಯ!

|
   ನಿರ್ಮಲಾ ಸೀತಾರಾಮನ್ ಬಗ್ಗೆ ಟ್ವೀಟ್ ಮಾಡಿದ ರಮ್ಯಾ

   ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಎನ್ ಡಿಎ ಸರ್ಕಾರದಲ್ಲಿ ವಿತ್ತ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಿರ್ಮಲಾ ಸೀತಾರಾಮನ್ ಅವರಿಗೆ ಕಾಂಗ್ರೆಸ್ ವಕ್ತಾರೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಶುಭಕೋರಿದ್ದಾರೆ.

   ಹಾರೈಕೆಯ ಜೊತೆಯಲ್ಲಿ ವ್ಯಂಗ್ಯವನ್ನೂ ಬೆರೆಸಿರುವ ಅವರ ಟ್ವೀಟ್ ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ನೆನಪಿಸಿಕೊಂಡಿದ್ದಾರೆ.

   "1970 ರಲ್ಲಿ ಇಂದಿರಾಗಾಂಧಿ ಅವರು ಮಾತ್ರ ನಿಭಾಯಿಸಿದ್ದ ಖಾತೆಯನ್ನು ಇಂದು ನೀವು ನಿಭಾಯಿಸುತ್ತಿದ್ದೀರಿ. ಮಹಿಳೆಯರಿಗೆ ಇದರಿಂದ ಹೆಮ್ಮೆಯಾಗುತ್ತಿದೆ. ಜಿಡಿಪಿ ಸುಧಾರಿಸಿಲ್ಲ. ನೀವು ಅರ್ಥವ್ಯವಸ್ಥೆಗೆ ಚೇತರಿಕೆ ತರುತ್ತೀರಿ ಎಂದು ನಂಬಿದ್ದೇನೆ. ನಿಮಗೆ ನಮ್ಮ ಬೆಂಬಲವಿದೆ. ಶುಭಹಾರೈಕೆಗಳು" ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

   ನಿರ್ಮಲಾ ಸೀತಾರಾಮನ್ ಸಮರ್ಥ ಹೆಗಲಿಗೆ ವಿತ್ತ ಖಾತೆ ಜವಾಬ್ದಾರಿ

   ಭಾರತದ ಜಿಡಿಪಿ(Gross Domestic Product) ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಶೇ.5.8 ಕುಸಿದಿದೆ ಎಂದು ತಿಳಿದುಬಂದಿದ್ದು, ಆದ್ದರಿಂದಲೇ ರಮ್ಯಾ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ.

   ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಕೆಲಕಾಲ ಹಣಕಾಸು ಇಲಾಖೆಯ ಹೊಣೆ ಹೊತ್ತಿದ್ದರು. ಅವರ ನಂತರ ಮೊದಲ ಬಾರಿಗೆ ನಿರ್ಮಲಾ ಸೀತಾರಾಮನ್ ಅವರು ಈ ಖಾತೆಯ ಹೊಣೆ ಹೊತ್ತಿದ್ದು, ದಾಖಲೆ ಬರೆದಿದ್ದಾರೆ.

   ಆಗ ಸೇಲ್ಸ್‌ಗರ್ಲ್, ಈಗ ಹಣಕಾಸು ಸಚಿವೆ: ನಿರ್ಮಲಾ ಸೀತಾರಾಮನ್ ಸಾಧನೆ

   ಅಮಿತ್ ಶಾ ಅವರಿಗೆ ಗೃಹ, ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಖಾತೆಯ ಹೊಣೆ ನೀಡಲಾಗಿದೆ.

   ರಮ್ಯಾ ಅವರ ಟ್ವೀಟ್ ಗೆ ಸಾಕಷ್ಟು ವ್ಯಂಗ್ರಮಿಶ್ರಿತ ಪ್ರತಿಕ್ರಿಯೆಗಳು ಹೊರಬಂದಿದ್ದು, ಲೋಕಸಭೆಯಲ್ಲಿ ಮತವನ್ನೇ ಚಲಾಯಿಸದ ಈವು ಈಗ ಸಲಹೆ ಕೊಡುವುದು ಸರಿಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ!

   ಮತಚಲಾಯಿಸದ ನೀವು ಸಲಹೆ ಹೇಗೆ ಕೊಡುತ್ತೀರಿ?

   ನೀವು ಲೋಕಸಭೆ ಚುನಾವಣೆಯಲ್ಲಿ ಮತವನ್ನೇ ಚಲಾಯಿಸದ ಕಾರಣ ಯಾವುದೇ ಸಲಹೆ ನೀಡಲು ಸಮರ್ಥರಲ್ಲ. ದಯವಿಟ್ಟು ಸುಮ್ಮನಿರಿ ಎಂದು ಗಣೇಶ್ ರಾವ್ ಎಂಬುವವರು ಟ್ವೀಟ್ ಮಾಡಿದ್ದಾರೆ.

   ನೀವೇನು ಮಾಡಿದ್ದೀರಿ?

   ಎಲ್ಲಾ ಮಹಿಳೆಯರು ಉತ್ತಮವಾದ ಕಾರ್ಯವನ್ನೇ ನಿರ್ವಹಿಸುತ್ತಿದ್ದಾರೆ . ರಮ್ಯಾ ಮೇಡಮ್ ತಾವೇನು ಮಾಡುತ್ತಿದ್ದೀರಿ? ಬೇರೆಯವರ ಕಾಲೆಳೆಯದನ್ನು ಬಿಟ್ಟು ತಮಗೆನಾದರೂ ಉತ್ತಮವಾದ ವಿಚಾರಗಳು ನಿಮ್ಮ ತಲೆಯಲ್ಲಿ ಇವೆಯೋ? - ರವಿ ಪಾಟೀಲ್

   ಜಿಡಿಪಿ ಅಂದ್ರೇನು ಗೊತ್ತಾ?

   ಅದಿರ್ಲಿ, ನಿಮಗೆ ಜಿಡಿಪಿ ಅಂದ್ರೇನು ಅಂತ ಗೊತ್ತಾ? ಎಂದು ಕಾಲೆಳೆದಿದ್ದಾರೆ ಮುತ್ತು ಆಲ್ಮಟ್ಟಿ

   ಕರುಣೆ ಹುಟ್ಟುತ್ತಿದೆ!

   ನಾವು ಎಂದಿಗೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ. ಆದರೆ ದುರಹಂಕಾರವನ್ನೇ ಆಸ್ತಿ ಎಂದುಕೊಂಡ ಕಾಂಗ್ರೆಸ್ಸಿಗೆ ಬುದ್ಧಿ ಬರುವುದು ಯಾವಾಗ ಎಂಬುದು ಗೊತ್ತಾಗುತ್ತಿಲ್ಲ. 543 ರಲ್ಲಿ 53 ಕ್ಷೇತ್ರಗಳಲ್ಲಿ ಗೆದ್ದು ವಿಪಕ್ಷದ ಸ್ಥಾನಮಾನವನ್ನೂ ಪಡೆಯಲಾಗದ ಕಾಂಗ್ರೆಸ್ಸಿಗೆ ನನ್ನ ಅನುಕಂಪವಿದೆ- ಗಿರೀಶ್ ಶೇಷಗಿರಿ

   English summary
   Congress spokeperson Ramya aka divya Spandana tweets, "Congratulations Nirmala Sitharaman on taking charge of a portfolio that was only last held by another woman, Indira Gandhi ji in 1970-makes us women folk proud! The GDP not looking great, I'm sure you will do your best to revive the economy. You have our support."
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X