ರಾಜ್ಯಸಭೆ ಉಪಸಭಾಪತಿ ಚುನಾವಣೆ: NDA ಅಭ್ಯರ್ಥಿಗೆ ನಿರೀಕ್ಷಿತ ಗೆಲುವು

ನವದೆಹಲಿ, ಆಗಸ್ಟ್ 09: ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕಾಗಿ ಇಂದು ನಡೆದ ಚುನಾವಣೆಯಲ್ಲಿ ಎನ್ ಡಿಎ ಬೆಂಬಲಿತ ಅಭ್ಯರ್ಥಿ ಹರಿವಂಶ್ ನಾರಾಯಣ ಸಿಂಗ್ ಗೆಲುವು ಸಾಧಿಸಿದ್ದಾರೆ.

ರಾಜ್ಯಸಭೆ ಉಪ ಸಭಾಪತಿಯ ಆಯ್ಕೆಯ ಸಲುವಾಗಿ ಇಂದು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಚುನಾವಣೆ ನಡೆದಿದೆ. ಪಿ.ಜೆ.ಕುರಿಯನ್ ಅವರ ಅಧಿಕಾರಾವಧಿ ಜು.1 ರಂದು ಮುಕ್ತಾಯವಾಗಿರುವ ಕಾರಣ ಚುನಾವಣೆ ನಡೆದಿತ್ತು.

ಯುಪಿಎ ಬೆಂಬಲಿತ ಅಭ್ಯರ್ಥಿಯಾಗಿ ಕಾಂಗ್ರೆಸ್ಸಿನಿಂದ ಬಿ ಕೆ ಹರಿಪ್ರಸಾದ್ ಕಣದಲ್ಲಿದ್ದರು.

Rajya Sabha deputy chairman elections: Live update

ಮುಂಗಾರು ಅಧಿವೇಶನ ನಾಳೆ(ಆಗಸ್ಟ್ 10) ಅಂತ್ಯವಾಗಲಿದ್ದು, ಅದಕ್ಕೂ ಮುನ್ನ ರಾಜ್ಯಸಭಾ ಉಪಸಭಾಪತಿ ಆಯ್ಕೆ ನಡೆದಿದೆ.

ಹರಿವಂಶ ಸಿಂಗ್ ಅವರ ಪರವಾಗಿ 125 ಮತಗಳು ಬಂದಿದ್ದರೆ ಯುಪಿಎ ಅಭ್ಯರ್ಥಿ ಬಿಕೆ ಹರಿಪ್ರಸಾದ್ ಪರ 105 ಮತಗಳು ಬಂದಿವೆ.

Aug 09, 2018, 12:07 pm IST

ನೂತನ ಉಪಸಭಾಪತಿ ಹರಿವಂಶ ಸಿಂಗ್ ಅವರನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ
Aug 09, 2018, 11:47 am IST

ಎನ್ ಡಿಎ ಅಭ್ಯರ್ಥಿ ಹರಿವಂಶ ನಾರಾಯಣ ಸಿಂಗ್ ರಾಜ್ಯಸಭಾ ಉಪಸಭಾಪತಿಯಾಗಿ ಆಯ್ಕೆ. ಹರಿವಂಶ ಸಿಂಗ್ ಪರ 125 ಮತಗಳು, ಯುಪಿಎ ಅಭ್ಯರ್ಥಿ ಬಿಕೆ ಹರಿಪ್ರಸಾದ್ ಪರ 105 ಮತಗಳು
Aug 09, 2018, 11:45 am IST

ರಾಜ್ಯಸಭಾ ಉಪಸಭಾಪತಿಯಾಗಿ ಎನ್ ಡಿಎ ಅಭ್ಯರ್ಥಿ ಹರಿವಂಶ್ ಸಿಂಗ್ ಆಯ್ಕೆ
Aug 09, 2018, 11:33 am IST

ಕೆಲವೇ ಕ್ಷಣಗಳಲ್ಲಿ ಚುನಾವಣೆ ಆರಂಭ
Aug 09, 2018, 11:27 am IST

ಎನ್ ಡಿಎ ಪರ ಮತಚಲಾಯಿಸಿರುವ ಟಿಆರ್ ಎಸ್
Aug 09, 2018, 11:16 am IST

ರಾಜ್ಯಸಭೆ ಉಪಸಭಾಪತಿ ಚುನಾವಣೆ ಹಿನ್ನೆಲೆಯಲ್ಲಿ ಮೂತ್ರಪಿಂಡ ಕಸಿಯ ನಂತರ ಮೊದಲ ಬಾರಿಗೆ ಮುಂಗಾರು ಅಧಿವೇಶನಕ್ಕೆ ಆಗಮಿಸಿದ ಅರುಣ್ ಜೇಟ್ಲಿ
Aug 09, 2018, 11:09 am IST

ಚುನಾವಣೆ ಪ್ರಕ್ರಿಯೆ ಆರಂಭಿಸಿದ ಉಪರಾಷ್ಟ್ರಪತಿ, ರಾಜ್ಯಸಭೆ ಚೇರ್ ಮನ್ ವೆಂಕಯ್ಯ ನಾಯ್ಡು
Aug 09, 2018, 10:58 am IST

ಮತದಾನದ ಸಮಯದಲ್ಲಿ ರಾಜ್ಯಸಭೆಯಿಂದ ದೂರವಿರರು ವೈಎಸ್ ಆರ್ ಕಾಂಗ್ರೆಸ್ ನ ಜಗನ್ಮೋಹನ್ ರೆಡ್ಡಿ ನಿರ್ಧರಿಸಿದ್ದಾರೆ ಎಂದು ಕೆಲವು ಖಾಸಗಿ ಚಾನೆಲ್ ಗಳು ಸುದ್ದಿ ಮಾಡಿವೆ.
Aug 09, 2018, 10:56 am IST

'ನಾವು ಗೆಲ್ಲುತ್ತೇವೆ ಎಂಬ ನಂಬಿಕೆ ನಮಗಿದೆ' -ಎನ್ ಡಿಎ ಅಭ್ಯರ್ಥಿ ಹರಿವಂಶ ಸಿಂಗ್ ವಿಶ್ವಾಸ
Aug 09, 2018, 10:45 am IST

ರಾಜ್ಯಸಭೆಯಲ್ಲಿ ಹಾಜರಿರುವಂತೆ ತನ್ನ ಸದಸ್ಯರಿಗೆ ಮೂರು ಸಾಲಿನ ವ್ಹಿಪ್ ಜಾರಿ ಮಾಡಿದ ಬಿಜೆಪಿ
Aug 09, 2018, 10:31 am IST

ಕಾಂಗ್ರೆಸ್ ಉಪಸಭಾಪತಿ ಸ್ಥಾನವನ್ನೇನಾದರೂ ಉಳಿಸಿಕೊಂಡರೆ ಅದು ಕಾಂಗ್ರೆಸ್ಸಿಗೆ ಬಹುದೊಡ್ಡ ಬಲವಾಗಲಿದೆ.
Aug 09, 2018, 10:20 am IST

ಇಂದು 11 ಗಂಟೆಗೆ ಸಂಸತ್ತಿನ ಲೈಬ್ರೆರಿ ಬಿಲ್ಡಿಂಗ್ ನಲ್ಲಿ ಸಭೆ ಸೇರಲಿರುವ ಎನ್ ಡಿಎ ಸಂಸದರು.
Aug 09, 2018, 9:41 am IST

ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆಗೊಳಗಾದ ಕಾರಣ ಮುಂಗಾರು ಅಧಿವೇಶನದಲ್ಲಿ ಭಾಗವಹಿಸದ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಚುನಾವಣೆಯ ಹಿನ್ನೆಲೆಯಲ್ಲಿ ಅಧಿವೇಶನಕ್ಕೆ ಆಗಮಿಸುವ ಸಾಧ್ಯತೆ ಇದೆ.
Aug 09, 2018, 9:25 am IST

ಈ ಚುನಾವಣೆಯಲ್ಲಿ ಯಾವುದೇ ಪಕ್ಷ ತನ್ನ ಸದಸ್ಯರಿಗೆ ವ್ಹಿಪ್ ಜಾರಿ ಮಾಡುವಂತಿಲ್ಲ.
Aug 09, 2018, 8:58 am IST

ಡಿಎಂಕೆ ಯ ನಾಲ್ಕು ಸಂಸದರ ಮೇಲೆ ಎಲ್ಲರ ಕಣ್ಣು. ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ನಿಧನದಿಂದಾಗಿ ಚೆನ್ನೈಗೆ ತೆರಳಿರುವ ಸಂಸದರು. ಮೂವರು ಮಾತ್ರ ಹಿಂದಿರುಗಿ ಮತ ಚಲಾಯಿಸುವ ನಿರೀಕ್ಷೆ.
Aug 09, 2018, 8:55 am IST

ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿಯಿಂದ ಎನ್ ಡಿಎ ಅಭ್ಯರ್ಥಿಗೆ ಬೆಂಬಲ
Aug 09, 2018, 8:33 am IST

ಯುಪಿಎ ಪರ 112 ಮತಗಳಿವೆ, ಎನ್ಡಿಎ 90 +42(ಇನ್ನೂ ನಿರ್ಧಾರವಾಗದ ಸದಸ್ಯರು) ಹೊಂದಿದೆ. ಆದ್ದರಿಂದ ರಾಜ್ಯಸಭೆಯ ಉಪ ಸಭಾಪತಿ ಯಾರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
Aug 09, 2018, 8:01 am IST

ವಿಪಕ್ಷಗಳು ಟಿಡಿಪಿ ಬೆಂಬಲದ ನಿರೀಕ್ಷೆಯಲ್ಲಿದ್ದು, 117 ಮತಗಳನ್ನು ಹೊಂದಲಿವೆ.
Aug 09, 2018, 7:41 am IST

ಬಿಜೆಡಿಯ 9 ಸದಸ್ಯರ ನೆರವು ಸಿಕ್ಕರೆ, ಬಿಜೆಪಿ ಅಭ್ಯರ್ಥಿಗೆ ಜಯ ಲಭಿಸಲಿದೆ. ತೆಲುಗು ದೇಶಂ ಪಾರ್ಟಿ 6 ಜನ ಸದಸ್ಯರನ್ನು ಹೊಂದಿದ್ದು, ಈಗ ಎನ್ಡಿಎ ಮೈತ್ರಿಕೂಟದಿಂದ ದೂರಾಗಿದೆ.
Aug 09, 2018, 7:19 am IST

ಬಿಜೆಪಿ 71 ಸಂಖ್ಯಾಬಲ ಹೊಂದಿದ್ದರೆ, ಎನ್ ಡಿಎ ಮಿತ್ರಪಕ್ಷಗಳ ನೆರವಿನಿಂದ 115 ಸಂಖ್ಯೆ ತಲುಪಬಹುದಾಗಿದೆ. ಹೀಗಾಗಿ, ಎಐಎಡಿಎಂಕೆಯ 13 ಸದಸ್ಯರ ಬೆಂಬಲದ ನಿರೀಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+