ಭಾರತೀಯ ರೈಲ್ವೆಯಿಂದ ಸದ್ಯದಲ್ಲೇ ಹೋಂ ಡಿಲಿವರಿ ಸೇವೆ
ನವದೆಹಲಿ, ಆಗಸ್ಟ್ 21: ಭಾರತೀಯ ರೈಲ್ವೆ ದೇಶಾದ್ಯಂತ ಸರಕುಗಳನ್ನು ಮನೆ ಬಾಗಿಲಿಗೆ ತಲುಪಿಸಲು ಇಂಡಿಯಾ ಪೋಸ್ಟ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ. ನಿಮ್ಮ ಯಾವುದೇ ಸರಕುಗಳನ್ನು ಮನೆ ಬಾಗಿಲಿಗೆ ತಲುಪಿಸಲು ಶೀಘ್ರದಲ್ಲಿಯೇ ಭಾರತೀಯ ಅಂಚೆ ವಿಭಾಗ ಸೇವೆಗಳನ್ನು ಬಳಸಲಿದೆ.
ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ನಾಗ್ಪುರದಿಂದ ಮುಂಬೈಗೆ ಎರಡು ವೆಂಟಿಲೇಟರ್‌ಗಳನ್ನು ಕಳುಹಿಸಲು ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ನೀಡುವಲ್ಲಿ ಪೈಲಟ್ ಯೋಜನೆಯಲ್ಲಿ ರೈಲ್ವೆ ಈಗಾಗಲೇ ಯಶಸ್ವಿಯಾಗಿದೆ.
ಸೆಂಟ್ರಲ್ ರೈಲ್ವೆ ಮತ್ತು ಇಂಡಿಯಾ ಪೋಸ್ಟ್‌ನ ಜಂಟಿ ಸೇವೆಯಾದ 'ಇಂಡಿಯನ್ ಪೋಸ್ಟಲ್ ರೈಲ್ವೆ ಪಾರ್ಸೆಲ್ ಸರ್ವಿಸ್' ಅನ್ನು ಲಾಕ್ ಡೌನ್ ಸಮಯದಲ್ಲಿ ನಾಗ್ಪುರದಿಂದ ಮುಂಬೈಗೆ ಎರಡು ವೆಂಟಿಲೇಟರ್‌ಗಳನ್ನು ಕಳುಹಿಸಲು ಬಳಸಲಾಗಿದೆ. ಮನೆಯಿಂದ ಮನೆಗೆ ಸರಕುಗಳನ್ನು ತಲುಪಿಸಲು ಇಪ್ಪತ್ನಾಲ್ಕು ಗಂಟೆ ಬೇಕಾಯಿತು ಎಂದು ರೈಲು ವಿಭಾಗದ ಅಧ್ಯಕ್ಷ ವಿ.ಕೆ. ಯಾದವ್ ಹೇಳಿದ್ದಾರೆ

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 'ಇದು ಮನೆಯಿಂದ ಮನೆಗೆ ಸರಕುಗಳನ್ನು ತಲುಪಿಸುವ ಸೇವೆಯಾಗಿದೆ. ಇದಕ್ಕಾಗಿ ಮಧ್ಯ ರೈಲ್ವೆ ಪ್ರಾಯೋಗಿಕ ಯೋಜನೆಯನ್ನು ನಡೆಸಿದ್ದು ಮತ್ತು ಇದೀಗ ನಾವು ಅದನ್ನು ದೇಶಾದ್ಯಂತ ಈ ಸೇವೆ ಆರಂಭಿಸಲು ಬಯಸುತ್ತೇವೆ. ಅಂಚೆ ಸೇವೆಯ ಬೆಂಬಲದೊಂದಿಗೆ ನಾವು ಇದನ್ನು ಮಾಡಲು ಬಯಸುತ್ತೇವೆ. ಅವರು ಈ ಕೆಲಸವನ್ನು ಕಡಿಮೆ ದೂರದವರೆಗೆ ಮಾಡುತ್ತಾರೆ, ರೈಲ್ವೆ ಒಂದು ತುದಿಯಿಂದ ಇನ್ನೊಂದು ತುದಿಗೆ ದೂರದವರೆಗೆ ಇದನ್ನು ಮಾಡಬಹುದು ಎಂದಿದ್ದಾರೆ.
ಕೇಂದ್ರ ರೈಲ್ವೆ ನಿರ್ವಹಿಸುತ್ತಿರುವ ವಿಶೇಷ ಪಾರ್ಸೆಲ್ ರೈಲುಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ರೈಲ್ವೆ ಮತ್ತು ಮಹಾರಾಷ್ಟ್ರ ಅಂಚೆ ವೃತ್ತವು ಇಂಡಿಯಾ ಪೋಸ್ಟ್ ರೈಲ್ವೆ ಪಾರ್ಸೆಲ್ ಸೇವೆಯನ್ನು ನೀಡುವ ಮೂಲಕ ಒಟ್ಟಿಗೆ ಕಾರ್ಯನಿರ್ವಹಿಸಿವೆ.












Click it and Unblock the Notifications