ಪಾಕಿಸ್ತಾನಕ್ಕೆ ನನ್ನ ಕಳಿಸಿದ್ದು ರಾಹುಲ್ ಗಾಂಧಿ ಅಲ್ಲ: ನವಜೋತ್ ಸಿಧು
ನವದೆಹಲಿ, ಡಿಸೆಂಬರ್ 01: 'ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ತಮ್ಮನ್ನು ರಾಹುಲ್ ಗಾಂಧಿ ಅವರು ಕಳಿಸಿರಲಿಲ್ಲ' ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಯೂ ಟರ್ನ್ ತೆಗೆದುಕೊಂಡಿದ್ದಾರೆ!
"ಪಾಕಿಸ್ತಾನಕ್ಕೆ ನನ್ನನ್ನು ಕಳಿಸಿದ್ದು ನನ್ನ ಕ್ಯಾಪ್ಟನ್ ರಾಹುಲ್ ಗಾಂಧಿ" ಎಂದು ಇತ್ತೀಚೆಗಷ್ಟೇ ಹೇಳಿದ್ದ ಸಿಧು, ವರಸೆ ಬದಲಿಸಿದ್ದಾರೆ.
"ನನ್ನ ಹೇಳಿಕೆಯನ್ನು ಮಾಧ್ಯಮಗಳಲ್ಲಿ ತಿರುಚಲಾಗಿದೆ. ರಾಹುಲ್ ಗಾಂಧಿಯವರೇ ನನ್ನನ್ನು ಪಾಕಿಸ್ತಾನಕ್ಕೆ ಹೋಗಲು ಹೇಳಿದ್ದರು ಎಂದು ನಾನು ಹೇಳಿಯೇ ಇಲ್ಲ. ಅಷ್ಟಕ್ಕೂ ನನ್ನನ್ನು ರಾಹುಲ್ ಗಾಂಧಿ ಅವರು ಕಳಿಸಿಯೇ ಇಲ್ಲ. ಗೆಳೆಯ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಆಮಂತ್ರಣದ ಮೇರೆಗೆ ನಾನು ಪಾಕಿಸ್ತಾನಕ್ಕೆ ತೆರಳಿದ್ದೆ" ಎಂದು ಮಾಜಿ ಕ್ರಿಕೆಟಿಗ ಸಿಧು ಇದೀಗ ಸಮಜಾಯಿಷಿ ನೀಡಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲೂ ಹಾಜರಾಗಿ ಸಿಧು ಅವರು ವಿವಾದ ಹುಟ್ಟು ಹಾಕಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನದ ಆರ್ಮಿ ಮುಖ್ಯಸ್ಥ ಜನರಲ್ ಬಾಜ್ವಾ ಅವರನ್ನು ಆಲಿಂಗಿಸಿಕೊಂಡಿದ್ದೂ ವಿವಾದ ಸೃಷ್ಟಿಸಿತ್ತು.












Click it and Unblock the Notifications