ಗುಜರಾತ್-ರಾಜಸ್ಥಾನದ ಪ್ರವಾಹ ಪೀಡಿದ ಪ್ರದೇಶಕ್ಕೆ ಭೇಟಿ ನೀಡಲಿರುವ ರಾಗಾ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 2: ಪ್ರವಾಹದಿಂದ ತತ್ತರಿಸಿರುವ ಗುಜರಾತ್ ಮತ್ತು ರಾಜಸ್ಥಾನಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಆಗಸ್ಟ್ 4 ರಂದು ಭೇಟಿ ನೀಡಲಿದ್ದಾರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಭೀಕರ ಪ್ರವಾಹಕ್ಕೆ ಗುಜರಾತ್ ತತ್ತರ: 83 ಕ್ಕೇರಿದ ಸಾವಿನ ಸಂಖ್ಯೆ

ಕಳೆದ ಹಲವು ದಿನಗಳಿಂದ ಗುಜರಾತ್ ಮತ್ತು ರಾಜಸ್ಥಾನದ ಹಲವು ಭಾಗಗಳಲ್ಲಿ ನಡೆಯುತ್ತಿರುವ ಸತತ ಮಳೆಗೆ ಪ್ರವಾಹ ತಲೆದೂರಿದ್ದು, ರಾಜಸ್ಥಾನದಲ್ಲಿ ಇದುವರೆಗೂ ಸುಮಾರು 17 ಜನ ಅಸುನೀಗಿದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ.

Rahul Gandhi will visit flood affected Rajastan and Gujarat
Rahul Gandhi decides to protest against IT Department | Oneindia Kannada

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಸಹ ಗುಜರಾತಿಗೆ ಭೇಟಿ ನೀಡಿ ಪ್ರವಾಹ ಸಮತಸ್ಥರಿಗೆ ಸಾಂತ್ವನ ಹೇಳಿದ್ದಲ್ಲದೆ, ಪ್ರವಾಹದಲ್ಲಿ ಅಸುನೀಗಿದವರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಮತ್ತು ಗಂಭಿರ ಗಾಯಗೊಂಡವರ ಚಿಕಿತ್ಸೆಗಾಗಿ 50 ಸಾವಿರ ರೂ. ನೀಡುವುದಾಗಿಯೂ ಘೋಷಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress vice president Rahul Gandhi will be visiting flood-affected areas of Dhanera in Gujarat and Jalore in Rajasthan on August 4. In Rajasthan, after stopping first spell of monsoon rain, rescue and relief operations have been expedited in flooded districts including Sirohi, Jalore, Pali and Barmer.
Please Wait while comments are loading...