ಬೋಫೋರ್ಸ್, ಕಲ್ಲಿದ್ದಲು, 2ಜಿ ಸ್ಪೆಕ್ಟ್ರಂ 'ವ್ಯವಹಾರ' ಕಾಂಗ್ರೆಸ್ ದು: ಅಮಿತ್ ಶಾ

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 7: ಸರ್ಜಿಕಲ್ ಸ್ಟ್ರೈಕ್ ಬಗ್ಗೆ ರಾಹುಲ್ ಗಾಂಧಿ ಹಾಗೂ ಅರವಿಂದ್ ಕೇಜ್ರಿವಾಲ್ ಹೇಳಿಕೆಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಶಾ ತಿರುಗೇಟು ನೀಡಿದ್ದಾರೆ. ಬೋಫೋರ್ಸ್, ಕಲ್ಲಿದ್ದಲು, 2ಜಿ ಹಗರಣ ಇದರಲ್ಲೆಲ್ಲ ಭಾಗಿಯಾದ ಕಾಂಗ್ರೆಸ್ ದಲ್ಲಾಳಿ ಕೆಲಸದಲ್ಲಿ ತೊಡಗಿತ್ತು. ಆ ಗುಣ ಕಾಂಗ್ರೆಸ್ ನಲ್ಲೇ ಅಂತರ್ಗತವಾಗಿದೆ ಎಂದಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ಅನ್ನು ಪ್ರಧಾನಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಭಾರತೀಯ ಯೋಧರ ರಕ್ತವನ್ನು 'ವ್ಯಾಪಾರ'ಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದರು. ಇದಕ್ಕೆ ಉತ್ತರ ನೀಡುವಂತೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅಮಿತ್ ಶಾ ಮಾತನಾಡಿದ್ದಾರೆ.['ಸೈನಿಕರ ಸಾವಿನ ಹಿಂದೆ ಬಚ್ಚಿಟ್ಟುಕೊಂಡಿದ್ದಾರೆ ಮೋದಿ']

Rahul Gandhi statement insult to the Army: Amit shah

ಎಎಪಿಯ ಅರವಿಂದ್ ಕೇಜ್ರಿವಾಲ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಶ್ನೆಗಳು ಎತ್ತಿವೆ. ಆ ಮೂಲಕ ಭಾರತೀಯ ಸೇನೆಯನ್ನು ಅವಮಾನಿಸುತ್ತಿದ್ದಾರೆ. ಸರಕಾರವು ದಾಳಿಯನ್ನು ರಾಜಕೀಯಕ್ಕೆ ಬಳಸುತ್ತಿಲ್ಲ. ಮೋದಿಯವರ ಬಗ್ಗೆ ಮಾತನಾಡುವ ಮೂಲಕ ರಾಹುಲ್ ಗಾಂಧಿ ತಮ್ಮ ಮಿತಿ ಮೀರಿದ್ದಾರೆ. ಇದು ಕಾಂಗ್ರೆಸ್ ನ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದಾರೆ ಅಮಿತ್ ಶಾ.

ಈ ಹಿಂದೆ ಸೋನಿಯಾ ಗಾಂಧಿ ಮಾಡಿದ್ದ ಸಾವಿನ ವ್ಯಾಪಾರಿ ಹಾಗೂ ವಿಷ ಬೀಜ ಬಿತ್ತನೆ ಹೇಳಿಕೆಗಳನ್ನು ಪ್ರಸ್ತಾಪಿಸಿದ ಅವರು, ಗೆಲುವು ಸೇನೆಯದು, ಪಕ್ಷದ್ದಲ್ಲ. ಕಾಂಗ್ರೆಸ್ ಗೆ ಸೇನೆ ಬಗ್ಗೆ ಹೆಮ್ಮೆ ಪಡುವುದು ಕೂಡ ಯಾಕೆ ಸಾಧ್ಯವಿಲ್ಲ? ಎಂದು ಪ್ರಶ್ನಿಸಿದರು.[ಸರ್ಜಿಕಲ್ ದಾಳಿ: ಕೇಜ್ರಿವಾಲ್ ಹೇಳಿಕೆಯಲ್ಲಿ ತಪ್ಪೇನಿದೆ, ಬಿಜೆಪಿಗ್ಯಾಕೆ ಸಿಟ್ಟು?]

ಸರ್ಜಿಕಲ್ ಸ್ಟ್ರೈಕ್ ಅಸಲಿಯತ್ತಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾ, ಆ ರೀತಿ ನಡೆದಿಲ್ಲ ಅಂದರೆ ಪಾಕಿಸ್ತಾನದಲ್ಲಿ ಯಾಕೆ ವಿಶೇಷ ಅಧಿವೇಶನ ಕರೀತಿದ್ರು? ತಿಂಗಳಿಗೆ ಒಂದೋ ಎರಡೋ ಸಲ ಇಸ್ಲಮಾಬಾದ್ ಗೆ ಹೋಗುತ್ತಿದ್ದ ಪಾಕಿಸ್ತಾನದ ಪ್ರಧಾನಿ ಅಲ್ಲೇ ಏಕೆ ಮೊಕ್ಕಾಂ ಹೂಡುತ್ತಿದ್ದರು? ಎಂದು ಪ್ರಶ್ನಿಸಿದರು.

Rahul Gandhi statement insult to the Army: Amit shah

ಕಾಂಗ್ರೆಸ್ ನಿಮ್ದ ತಲೆಮಾರುಗಳಿಂದ ಮಾಡಲು ಸಾಧ್ಯವಾಗದಿದ್ದನ್ನು ನಾವು ಸಾಧಿಸಿದ್ದೇವೆ ಎಂದ ಅವರು, ರಾಹುಲ್ ಗಾಂಧಿ ಅವರ ಕೃಷಿ ಯಾತ್ರೆ ಬಗ್ಗೆ ಕೇಳಿದ ಪ್ರಶ್ನೆಗೆ, ಅವರ ಕೃಷಿ ಜ್ಞಾನ ಆಲೂಗಡ್ಡೆ ಕಾರ್ಖಾನೆಯಲ್ಲಿ ಬೆಳೆಯುತ್ತೆ ಎಂಬಷ್ಟು ಮಾತ್ರ ಎಂದು ವ್ಯಂಗ್ಯವಾಡಿದರು.

ವಿತ್ತ ಸಚಿವ ಅರುಣ್ ಜೇಟ್ಲಿ ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿದರು. ಸೇನೆ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ಅದರ ಬೆನ್ನಿಗೆ ದೇಶವೇ ನಿಲ್ಲಬೇಕು. ಸೇನೆಯನ್ನು ರಾಜಕಾರಣಕ್ಕೆ ಎಳೆದು ತರೋದು ಬೇಡ ಎಂದರು. ಭಾರತ ಈ ಹಿಮ್ದೆ ಹಲವಾರು ಯುದ್ಧಗಳನ್ನು ಮಾಡಿದೆ ಆಗ ಯಾವಾಗಲೂ ಸರಕಾರ ಅಥವಾ ಸೇನೆಯ ಬಳಿ ಸಾಕ್ಷ್ಯ ಕೇಳಿಲ್ಲ ಎಂದು ಹೇಳಿದರು.[ಸರ್ಜಿಕಲ್‌ ಸ್ಟ್ರೈಕ್‌ : ಮೋದಿಯನ್ನು ಅಭಿನಂದಿಸಿದ ರಾಹುಲ್ ಗಾಂಧಿ]

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವಿಟರ್ ನಲ್ಲಿ, ರಾಹುಲ್ ಗಾಂಧಿ ಸೈನಿಕರ ಬಗ್ಗೆ ಹೇಳಿದ್ದನ್ನು ಪ್ರಬಲವಾಗಿ ಖಂಡಿಸುತ್ತೇನೆ. ಈ ವಿಚಾರದಲ್ಲಿ ನಾವೆಲ್ಲ ಒಗ್ಗಟ್ಟಿನಿಂದ ಇರಬೇಕು. ರಾಹುಲ್ ಮನಸ್ಥಿತಿ ಬಗ್ಗೆ ನನಗೆ ಅಯ್ಯೋ ಅನಿಸ್ತಿದೆ. ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ರಾಜಕೀಯ ಬೇಡ. ನಾನು ಈ ವಿಚಾರದಲ್ಲಿ ಮೋದಿ ಜತೆಗಿದ್ದೇನೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bofors to Coal it was the Congress involved in 'dalali. The word ‘dalali’ is present in Congress conscience, said by BJP National president Amit Shah in a press conference, New Delhi.
Please Wait while comments are loading...