ಕಾಂಗ್ರೆಸ್ ಪ್ರತಿಭಟನೆ: ಚಿದಂಬರಂ ಪಕ್ಕೆಲುಬು ಮುರಿತ, ಇತರ ನಾಯಕರಿಗೆ ಗಾಯ- 459 ಬಂಧನ
ನವದೆಹಲಿ ಜೂನ್ 14: ನ್ಯಾಷನಲ್ ಹೆರಾಲ್ಡ್ ಪತ್ರಿಕೆ-ಅಸೋಸಿಯೇಷನ್ ಜರ್ನಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಹುಲ್ ಗಾಂಧಿ ಸೋಮವಾರ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಆದರೆ ನಿನ್ನೆ (ಜೂನ್ 13) ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯ ವೇಳೆ ಪೊಲೀಸರು ತಳ್ಳಿದ್ದರಿಂದ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ನಾಯಕ ಪಿ. ಚಿದಂಬರಂ ಎಡ ಪಕ್ಕೆಲುಬು ಮೂಳೆ ಮುರಿತಕ್ಕೆ ಒಳಗಾಗಿದೆ ಎಂದು ತಿಳಿದು ಬಂದಿದೆ.
ಒಗ್ಗಟ್ಟಿನಿಂದ ನಡೆಸಲಾದ ಪ್ರತಿಭಟನಾ ಮೆರವಣಿಗೆಯಲ್ಲಿ ದೆಹಲಿ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ. ಮಾಜಿ ಕಾಂಗ್ರೆಸ್ ಅಧ್ಯಕ್ಷರ ಮೇಲಿನ ಇಡಿ ಕ್ರಮವನ್ನು ವಿರೋಧಿಸಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರ ರಾಜಧಾನಿ ಮತ್ತು ಇತರ ರಾಜ್ಯಗಳಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ನುಕ್ಕುನುಗ್ಗಲು ಉಂಟಾಗಿ ಚಿದಂಬರಂ ಎಡ ಪಕ್ಕೆಲುಬು ಮೂಳೆ ಮುರಿತಕ್ಕೆ ಒಳಗಾಗಿದೆ. ಮಾತ್ರವಲ್ಲದೆ ಘಟನೆಯಲ್ಲಿ ಗಲವಾರು ನಾಯಕರು ಗಾಯಗೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದು 459 'ಕೈ'ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಕಾಂಗ್ರೆಸ್ ನಾಯಕರ ಆರೋಪಗಳ ಪ್ರಕಾರ, ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯ ವೇಳೆ ಪೊಲೀಸರು ತಳ್ಳಿದ ನಂತರ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ನಾಯಕ ಪಿ. ಚಿದಂಬರಂ ಎಡ ಪಕ್ಕೆಲುಬು ಮೂಳೆ ಮುರಿತಕ್ಕೆ ಒಳಗಾಗಿದೆ ಎಂದು ತಿಳಿದು ಬಂದಿದೆ.
ಮಾತ್ರವಲ್ಲದೆ ಪೊಲೀಸರು ಕೆಸಿ ವೇಣುಗೋಪಾಲ್ ಮತ್ತು ಪ್ರಮೋದ್ ತಿವಾರಿ ಇತರರ ಮೇಲೆ 'ಕೊಲೆ ದಾಳಿ' ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
|
ಪ್ರತಿಭಟನೆ ವೇಳೆ 'ಕೈ' ನಾಯಕರಿಗೆ ಗಾಯ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಕಳೆದ ರಾತ್ರಿಯಿಂದ ದೆಹಲಿ ಪೊಲೀಸರು ಅವರನ್ನು ಥಳಿಸಿ ಸಾವಿರಾರು ಕಾರ್ಯಕರ್ತರನ್ನು ಬಂಧಿಸಿದ್ದರಿಂದ ಇತರ ಕೆಲವು ಕಾಂಗ್ರೆಸ್ ನಾಯಕರಿಗೂ ಗಾಯಗಳಾಗಿವೆ. ಮತ್ತೊಬ್ಬ ರಾಜ್ಯಸಭಾ ಸಂಸದ ಪ್ರಮೋದ್ ತಿವಾರಿ ಅವರನ್ನು ರಸ್ತೆಗೆ ಎಸೆಯಲಾಗಿದ್ದು, ಅವರ ಪಕ್ಕೆಲುಬು ಮುರಿದಿದೆ. ಚಿದಂಬರಂ ಮತ್ತು ತಿವಾರಿ ಇಬ್ಬರಿಗೂ ಮೂಳೆ ಮುರಿತವಾಗಿದೆ. ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಟ್ವಿಟರ್‌ನಲ್ಲಿ ವಿಡಿಯೋ ಹೇಳಿಕೆಯಲ್ಲಿ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಅನಾಗರಿಕತೆಯ ಎಲ್ಲಾ ಮಿತಿಗಳನ್ನು ದಾಟಿದೆ ಎಂದು ಆರೋಪಿಸಿದರು.
|
ಬಿಜೆಪಿ ಟ್ವೀಟ್
"ಮೂವರು ದೊಡ್ಡ, ದಡ್ಡ ಪೊಲೀಸರು ನಿಮ್ಮ ಮೇಲೆ ಡಿಕ್ಕಿ ಹೊಡೆದಾಗ, ನನ್ನ ಕಾಲು ಎಡ ಪಕ್ಕೆಲುಬು ಮರುದಿದೆ. ಸುಮಾರು 10 ದಿನಗಳವರೆಗೆ ವಿಶ್ರಾಂತಿಗೆ ವೈದ್ಯರು ತಿಳಿದ್ದಾರೆ. ನಾನು ಚೆನ್ನಾಗಿದ್ದೇನೆ'' ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಜೊತೆಗೆ ಬಿಜೆಪಿಯ ಯುವ ಘಟಕವಾದ ಬಿಜೆವೈಎಂ, ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರನ್ನು ಪೊಲೀಸರು ನಿಂದಿಸುತ್ತಿದ್ದಂತೆ ಓಡಿಹೋಗುತ್ತಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ಲೇವಡಿ ಮಾಡಿದ್ದಾರೆ.

'ಕೈ' ನಾಯಕರ ಗಾಯದ ಬಗ್ಗೆ ತನಿಖೆ
ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ನಿರ್ದೇಶನಗಳನ್ನು ಅನುಸರಿಸದಿದ್ದಕ್ಕಾಗಿ ಅಧೀರ್ ರಂಜನ್ ಚೌಧರಿ, ಕೆಸಿ ವೇಣುಗೋಪಾಲ್ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಒಟ್ಟು 459 ಕಾಂಗ್ರೆಸ್ ಕಾರ್ಯಕರ್ತರು ಮತ್ತು ಹಿರಿಯ ನಾಯಕರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಪೊಲೀಸ್ ದಾಳಿಯ ಸಂದರ್ಭದಲ್ಲಿ ಪ್ರತಿಭಟನಾನಿರತ ಕಾಂಗ್ರೆಸ್ ನಾಯಕರಿಗೆ ಹಲ್ಲೆ ಮತ್ತು ಗಾಯದ ಆರೋಪಗಳನ್ನು ಶ್ರದ್ಧೆಯಿಂದ ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು. ಯಾವುದೇ ಮೆರವಣಿಗೆ ಅಥವಾ ಪ್ರತಿಭಟನೆ ನಡೆಸಲು ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದರು, ಆದರೆ ಸೋಮವಾರ ದೆಹಲಿಯ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆಗೆ ಜಮಾಯಿಸಿದರು.

ಆದೇಶಗಳ ಉಲ್ಲಂಘನೆಗೆ ಕ್ರಮ
ಅವರನ್ನು ಕಾಂಗ್ರೆಸ್ ಪ್ರಧಾನ ಕಚೇರಿ ಇರುವ ಅಕ್ಬರ್ ರಸ್ತೆ, ಕ್ಯೂ ಪಾಯಿಂಟ್ ಎಪಿಜೆ ಕಲಾಂ ರಸ್ತೆ ಮತ್ತು ಮಾನ್ ಸಿಂಗ್ ರಸ್ತೆಯಿಂದ ಬಂಧಿಸಿ ಕ್ರಮವಾಗಿ ಮಂದಿರ ಮಾರ್ಗ, ತುಘಲಕ್ ರಸ್ತೆ ಮತ್ತು ಫತೇಪುರ್ ಬೆರಿ ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಯಿತು.
ಪೊಲೀಸರು ಬಂಧಿಸಿರುವ ಕಾಂಗ್ರೆಸ್‌ನ ಎಲ್ಲಾ ಮಹಿಳಾ ಕಾರ್ಯಕರ್ತರು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡಲಾಗಿದೆ ಮತ್ತು ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಯ ಸೆಕ್ಷನ್ 144 ರ ಅಡಿಯಲ್ಲಿ ಘೋಷಿಸಲಾದ ಆದೇಶಗಳನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭದ್ರತೆ ಮತ್ತು ಸುರಕ್ಷತೆಗೆ ಭಂಗ
ಪೊಲೀಸ್ ಹೇಳಿಕೆಯ ಪ್ರಕಾರ, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಬೃಹತ್ ಸಭೆಯು ವಿಐಪಿಗಳು, ಇಡಿ ಕಚೇರಿ, ಅದರ ಅಧಿಕಾರಿಗಳು, ಅಕ್ಕಪಕ್ಕದ ಕಚೇರಿಗಳು, ನಿವಾಸಗಳು ಮತ್ತು ಸಾರ್ವಜನಿಕರ ಭದ್ರತೆ ಮತ್ತು ಸುರಕ್ಷತೆಗೆ ಭಂಗ ತರಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗಿದೆ.
ಎಐಸಿಸಿ ಕಾರ್ಯದರ್ಶಿ, ಪೊಲೀಸರಿಗೆ ಪತ್ರ ಬರೆದು, ಇಡಿ ಕಚೇರಿಗೆ ರಾಹುಲ್ ಗಾಂಧಿ ಜೊತೆ ಜನಸಂದಣಿ ಇರುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಆದರೂ ರಾಹುಲ್ ಗಾಂಧಿ 24 ಅಕ್ಬರ್ ರಸ್ತೆಯಿಂದ ಇಡಿ ಕಚೇರಿಗೆ ಹೊರಟ ತಕ್ಷಣ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಕಾರ್ಯಕರ್ತರು ಮೆರವಣಿಗೆಯ ರೂಪದಲ್ಲಿ ಅವರೊಂದಿಗೆ ಬಂದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ರಾಹುಲ್ ಗಾಂಧಿ ಇಡಿ ವಿಚಾರಣೆಯನ್ನು ಇಂದು ಕೂಡ ಮುಂದುವರೆಸಲಾಗಿದೆ.












Click it and Unblock the Notifications