ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಾಹುಲ್ ಗಾಂಧಿಯವರೇ, ಕ್ಷಮಿಸಿ, ಪ್ರಧಾನಿ ಹುದ್ದೆ ಖಾಲಿಯಿಲ್ಲ!'

|
Google Oneindia Kannada News

ನವದೆಹಲಿ, ಮೇ 10: 'ಪ್ರಧಾನಿ ಹುದ್ದೆಗೇರಲು ನೀವು ಸಿದ್ಧವಿದ್ದೀರಾ?' ಎಂದು ಇತ್ತೀಚೆಗೆ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, 'ಹೌದು, ಸಿದ್ಧವಿದ್ದೇನೆ' ಎಂದಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕ ಶೆಹನ್ವಾಜ್ ಹುಸೇನ್, 'ಕ್ಷಮಿಸಿ, ನೀವು ಹಗಲುಗನಸು ಕಾಣಬೇಡಿ. 2024 ರವರೆಗೂ ಪ್ರಧಾನಿ ಹುದ್ದೆ ಖಾಲಿ ಇರುವುದಿಲ್ಲ' ಎಂದಿದ್ದಾರೆ.

 ಪ್ರಧಾನಿ ಹುದ್ದೆಗೇರಲು ನಾನು ಸಿದ್ಧ ಎಂದ ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೇರಲು ನಾನು ಸಿದ್ಧ ಎಂದ ರಾಹುಲ್ ಗಾಂಧಿ

'2019 ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಎನ್ ಡಿಎ ಸರ್ಕಾರವೇ ಅಧಿಕಾರಕ್ಕೆ ಬರುವುದರಿಂದ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿಯಾಗಲಿದ್ದಾರೆ. ಆದ್ದರಿಂದ 2024 ರವರೆಗೂ ಈ ಹುದ್ದೆ ಖಾಲಿ ಇರುವುದಿಲ್ಲ. ಇದು ಬಹುಶಃ ಕಾಂಗ್ರೆಸ್ಸಿಗೂ ಗೊತ್ತು' ಎಂದು ಹುಸೇನ್ ಹೇಳಿದ್ದಾರೆ.

Rahul Gandhi day-dreaming, no PM vacancy: BJP

ರಾಹುಲ್ ಮಾತು ದುರಹಂಕಾರದ ಪರಮಾವಧಿಯಲ್ಲವೆ : ಮೋದಿ ವ್ಯಂಗ್ಯರಾಹುಲ್ ಮಾತು ದುರಹಂಕಾರದ ಪರಮಾವಧಿಯಲ್ಲವೆ : ಮೋದಿ ವ್ಯಂಗ್ಯ

'ರಾಹುಲ್ ಗಾಂಧಿಯವರು ಕಾಂಗ್ರೆಸ್ ಉಪಾಧ್ಯಕ್ಷರಾಗುತ್ತಿದ್ದಂತೆಯೇ ಸುಮಾರು 13 ರಾಜ್ಯಗಳಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಸೋತಿತ್ತು. ಇದೀಗ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ, ಐದು ರಾಜ್ಯಗಳ ಚುನಾವಣೆಯಲ್ಲಿ ಸೋತಿದೆ. ಕರ್ನಾಟಕ ಆರನೆಯದಾಗುತ್ತದೆ. ಆದರೂ ತಾವು ಪ್ರಧಾನಿ ಅಭ್ಯರ್ಥಿ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ' ಎಂದು ಅವರು ಲೇವಡಿ ಮಾಡಿದ್ದಾರೆ.

English summary
Hitting out at Congress president Rahul Gandhi, the BJP has said that he appears to be day-dreaming about becoming the prime minister of the country – a post which will apparently remain occupied till 2024.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X