Get Updates
Get notified of breaking news, exclusive insights, and must-see stories!

ಫೇಸ್ ಬುಕ್ ನಲ್ಲಿ ಸ್ಯಾಮ್ ಪಿತ್ರೋಡಾಗೆ ರಾಹುಲ್ ಗಾಂಧಿ ತಪರಾಕಿ

ನವದೆಹಲಿ, ಮೇ 11: ಸಿಖ್ ಹತ್ಯಾಕಾಂಡದ ಕುರಿತು 'ಹುವಾ ತೋ ಹುವಾ'(ಆಗಿದ್ದು ಆಯ್ತು, ಏನಿವಾಗ?) ಎಂಬ ಹೇಳಿಕೆ ನೀಡಿದ್ದ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.

"ನನ್ನ ಪ್ರಕಾರ ಸ್ಯಾಮ್ ಪಿತ್ರೋಡಾ ಅವರು ಹೇಳಿದ್ದು ಸಂಪೂರ್ಣವಾಗಿ ತಪ್ಪು. ಅದಕ್ಕಾಗಿ ಅವರು ಕ್ಷಮೆ ಕೇಳಲೇಬೇಕು. 1984 ರಲ್ಲಿ ಭೀಕರ ಹಿಂಸೆಗೆ ಕಾರಣವಾಗಿದ್ದು ಇಂದು ಅನಗತ್ಯ ದುರಂತ. ನ್ಯಾಯ ಸಿಗಬೇಕು. 1984 ರ ಹಿಂಸೆಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು. ಮಾಜಿ ಪ್ರಧಾನಿ ನಮೋಹನ್ ಸಿಂಗ್ ಅವರು ಈ ಬಗ್ಗೆ ಕ್ಷಮೆ ಕೇಳಿದ್ದಾರೆ. ನನ್ನ ತಾಯಿ ಸೋನಿಯಾ ಗಾಂಧಿ ಅವರೂ ಕ್ಷಮೆ ಕೇಳಿದ್ದಾರೆ. ನಾವೆಲ್ಲರೂ ನಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದ್ದೇವೆ. 1984 ರ ಘಟನೆ ಹೀನಾತಿಹೀನ ದುರಂತ ಮತ್ತು ಅದು ಎಂದಿಗೂ ನಡೆಯಬಾರದಿತ್ತು ಎಂದು.

Rahul Gandhi critisises Sam Pitroda, tells him to apologise over sikh riots statement

ಇದೀಗ ಸ್ಯಾಮ್ ಪಿತ್ರೋಡಾ ಹೇಳಿದ್ದನ್ನು ಎಂದಿಗೂ ಒಪ್ಪುವುದಕ್ಕೆ ಸಾಧ್ಯವಿಲ್ಲ. ಅದನ್ನು ನಾವು ವಿರೋಧಿಸುತ್ತೇವೆ. ಈ ಬಗ್ಗೆ ನಾನು ಅವರ ಬಳಿ ನೇರವಾಗಿಯೇ ಮಾತನಾಡಿದ್ದೇನೆ. ಅದಕ್ಕಾಗಿ ಅವರು ಕ್ಷಮೆ ಕೇಳಬೇಕು ಎಂದೂ ಹೇಳಿದ್ದೇನೆ" ಎಂದು ರಾಹುಲ್ಲ ಗಾಂಧಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಈಗಾಗಲೇ ತಮ್ಮ ಹೇಳಿಕೆಯ ಬಗ್ಗೆ ಕ್ಷಮೆ ಯಾಚಿಸಿರುವ ಕಾಂಗ್ರೆಸ್ ನ ಸಾಗರೋತ್ತರ ಅಧ್ಯಕ್ಷ ಸ್ಯಾಮ್ ಪಿತ್ರೋಡಾ, "ನನಗೆ ಹಿಂದಿ ಸರಿಯಾಗಿ ಬರುವುದಿಲ್ಲ. ನಾನು 'ಜೋ ಹುವಾ ವೋ ಬುರಾ ಹುವಾ'(ಅಂದು ಏನಾಗಿತ್ತೋ ಅದು ಖಂಡನೀಯ) ಎಂದು ಹೇಳಲು ಹೊರಟಿದ್ದೆ. ಆದರೆ ನನಗೆ ಬುರಾ ಎಂಬ ಪದ ನೆನಪಾಗಲಿಲ್ಲ. ಆದ್ದರಿಂದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ" ಎಂದಿದ್ದಾರೆ.

1984 ರ ಸಿಖ್ ದಂಗೆಯಲ್ಲಿ, ಸಿಖ್ಕರನ್ನು ಕೊಲ್ಲುವಂತೆ ಆದೇಶ ನೀಡಿದ್ದೇ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಸ್ಯಾಮ್ ಪಿತ್ರೋಡಾ, "ಆಗಿದ್ದೆಲ್ಲ ಆಗಿಹೋಯ್ತು, ಭೂತಕಾಲದ ಬಗ್ಗೆ ಮಾತನಾಡಿ ಏನು ಪ್ರಯೋಜನ(ಹುವಾ ತೋ ಹುವಾ)?" ಎಂದು ಪ್ರಶ್ನಿಸಿದ್ದರು.

ಅವರ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಈ ಬಗ್ಗೆ ಇಂದು ಹರ್ಯಾಣದಲ್ಲಿ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೊದಿ, "ಕಾಂಗ್ರೆಸ್ ನ ಹಿರಿಯ ನಾಯಕರು, ಗಾಂಧಿ ಕುಟುಂಬದ ಆಪ್ತರು ನೀಡಿದ ಹುವಾ ತೋ ಹುವಾ ಎಂಬ ಮೂರು ಪದ ಸಾಕು, ಕಾಂಗ್ರೆಸ್ಸಿಗರ ಮನಸ್ಥಿತಿ, ನಡವಳಿಕೆಯನ್ನು ಅರಿಯುವುದಕ್ಕೆ. ಅವರ ದುರಹಂಕಾರಕ್ಕೆ ಇದೇ ಸಾಕ್ಷಿ" ಎಂದಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+