ಟ್ವಿಟ್ಟರ್ ನಲ್ಲಿ 'ಇಬ್ಬರು ಮೋದಿ'ಯರನ್ನೂ ತರಾಟೆಗೆ ತೆಗೆದುಕೊಂಡ ರಾಹುಲ್!
ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಶನಲ್ ಬ್ಯಾಂಕ್ ನಲ್ಲಿ ನಡೆದ ಬಹುಕೋಟಿ ವಂಚನೆಯ ಪ್ರಮುಖ ಆರೋಪಿ ನೀರವ್ ಮೋದಿ ಅವರ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ದೂರಿದ್ದಾರೆ.
"ನೀರವ್ ಮೋದಿಯವರು ಭಾರತವನ್ನು ಕೊಳ್ಳೆಹೊಡೆಯುವುದು ಹೇಗೆ ಎಂದು ಮಾರ್ಗದರ್ಶನ ನೀಡುತ್ತಿದ್ದಾರೆ.
1. ಪ್ರಧಾನಿ ಮೋದಿಯನ್ನು ತಬ್ಬಿಕೊಳ್ಳುವುದು.
2. ಅವರೊಂದಿಗೆ ಡಾವೋಸ್ ಸಮ್ಮೇಳನದಲ್ಲಿ ಕಾಣಿಸಿಕೊಳ್ಳುವುದು.
ನಂತರ.... ಈ ಪ್ರಭಾವವನ್ನು ಬಳಸಿಕೊಂಡು 12,000 ಕೋಟಿ ರೂ. ದೋಚುವುದು. ಸರ್ಕಾರ ಬೇರೆ ದಾರಿ ಹುಡುಕುತ್ತಿದ್ದಾಗ ಮಲ್ಯ ರೀತಿಯಲ್ಲಿ ದೇಶ ಬಿಟ್ಟು ಓಡುವುದು.." ಎಂದು ಟ್ವೀಟ್ ಮಾಡಿದ್ದಾರೆ ರಾಹುಲ್ ಗಾಂಧಿ.
Guide to Looting India
— Office of RG (@OfficeOfRG) February 15, 2018
by Nirav MODI
1. Hug PM Modi
2. Be seen with him in DAVOS
Use that clout to:
A. Steal 12,000Cr
B. Slip out of the country like Mallya, while the Govt looks the other way.
#From1MODI2another
ವಿಶ್ವಪ್ರಸಿದ್ಧ ಆಭರಣ ವಿನ್ಯಾಸಕ ನೀರವ್ ಮೋದಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಶನಲ್ ಬ್ಯಾಂಕ್ ನಲ್ಲಿ ಬಹುಕೋಟಿ ರೂಪಾಯಿಯ ವಂಚನೆ ಮಾಡಿದ್ದಾರೆ ಎಂಬ ಆರೋಪ ಬಯಲಾದ ಹಿನ್ನೆಲೆಯಲ್ಲಿ ಅವರು ದೇಶ ಬಿಟ್ಟು ಹೋಗಿದ್ದಾರೆ.












Click it and Unblock the Notifications